ವಿಜಯಪುರ: ಜಿಲ್ಲೆಯಲ್ಲಿ ಶನಿವಾರ ರಾತ್ರಿ ಸಂಭವಿಸಿದ ಭೂಕಂಪದ ಭಾರಿ ಸದ್ದು ಹಾಗೂ ಭೂಮಿ ಅದುರುವಿಕೆ ಸಿ.ಸಿ.ಕ್ಯಾಮರಾದಲ್ಲಿ ಧ್ವನಿ ಸಹಿತ ದೃಶ್ಯಗಳು ಸೆರೆಯಾಗಿವೆ. ನೈಸರ್ಗಿಕ ವೈಪರೀತ್ಯದ ಮುನ್ಸೂಚನೆಗೆ ಶ್ವಾನಗಳು ಬೊಗಳಿದ ಧ್ವನಿಯೂ ದಾಖಲಾಗಿದೆ.
ಜಿಲ್ಲೆಯಲ್ಲಿ ಸಂಭವಿಸಿದ ಭೂಕಂಪದ ದೃಶ್ಯಗಳು ಜಿಲ್ಲೆಯಲ್ಲಿ ಅಳವಡಿಸಿರುವ ಬಹುತೇಕ ಎಲ್ಲ ಸಿಸಿ ಕೆಮೆರಾದಲ್ಲಿ ದಾಖಲಾಗಿದೆ. ಧ್ವನಿಗ್ರಾಹಿ ಸಿಸಿ ಕ್ಯಾಮರಾಗಳಲ್ಲಿ ಭೂಮಿ ಕಂಪಿಸಿದ ಭಾರಿ ಸದ್ದು ದಾಖಲಾಗಿದೆ. ಭೂಕಂಪ ಸಂಭವಿಸಿದ ಸಂದರ್ಭದಲ್ಲಿ ಮುನ್ಸೂಚನೆ ನಾಯಿಗಳು ಬೊಗಳಿರುವ ಧ್ವನಿಯೂ ದಾಖಲಾಗಿದೆ.
ಇದನ್ನೂ ಓದಿ:ವಿಜಯಪುರ ಜಿಲ್ಲೆಯಲ್ಲಿ ಭೂಕಂಪನ : ರಿಕ್ಟರ್ ಮಾಪಕದಲ್ಲಿ 3.9 ತೀವ್ರತೆ ದಾಖಲು
ಜೊತೆಗೆ ಭೂಮಿ ಅಲುಗಾಡಿದಕ್ಕೆ ವಿದ್ಯುತ್ ತಂತಿಗಳು ಹೊಯ್ದಾಡಿದ ದೃಶ್ಯಗಳು ಸೆರೆಯಾಗಿವೆ.
ಹೀಗೆ ಸಿಸಿ ಕ್ಯಾಮರಾದಲ್ಲಿ ದಾಖಲಾದ ಭೂಕಂಪದ ಫುಟೇಜ್ ಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.