Advertisement

ತುಮಕೂರು,ಚಿತ್ರದುರ್ಗದ ಕೆಲ ಗ್ರಾಮಗಳಲ್ಲಿ ಭೂಕಂಪ?;ಆತಂಕದಲ್ಲಿ ಜನತೆ 

08:48 AM Apr 02, 2017 | Team Udayavani |

ಚಿಕ್ಕನಾಯಕನ ಹಳ್ಳಿ /ಹೊಸದುರ್ಗ: ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕು ಮತ್ತು ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿಯ ಕೆಲ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ಭೂಮಿ ಕಂಪಿಸಿದ್ದು,ರಿಕ್ಟರ್ ಮಾಪಕದಲ್ಲಿ 2.9ರಷ್ಟು ತೀವ್ರತೆ ದಾಖಲಾಗಿರುವ ಬಗ್ಗೆ ವರದಿಯಾಗಿದೆ.

Advertisement

ಬೆಳಗ್ಗೆ 6.30 ರ ಸುಮಾರಿಗೆ ಭೂಮಿ 2 ಸೆಕೆಂಡ್‌ಗಳ ಕಾಲ ಕಂಪಿಸಿದ್ದು, ಜನರು ಆತಂಕಗೊಂಡು ಮನೆಗಳಿಂದ ಹೊರಗೋಡಿ ಬಂದಿರುವ ಬಗ್ಗೆ ವರದಿಯಾಗಿದೆ. 

ಹೊಸದುರ್ಗದ ಕಂಚೀಪುರ , ಚಿಕ್ಕಬ್ಯಾಲದೆಡೆ,ಹಂದಿನಗಡು, ಬ್ಯಾರಮಡು ಹಾಲುಮಾದನಹಳ್ಳಿ ,ಪಿಲಾಜಹಳ್ಳಿ ಸೇರಿದಂತೆ ಕಲ ಗ್ರಾಮದಲ್ಲಿ ಕಂಪನದ ಅನುಭವವಾಗಿರುವ ಬಗ್ಗೆ ವರದಿಯಾಗಿದೆ. 

ಚಿಕ್ಕನಾಯಕನ ಹಳ್ಳಿಯ ಕೆಂಕೆರೆ, ಗುಣಧಾಳು ಸೇರಿದಂತೆ ಇತರ ಗ್ರಾಮಗಳಲ್ಲಿ ಕಂಪನದ ಅನುಭವವಾಗಿದೆ.

ಕಂಪನದಿಂದಾಗಿ ಮನೆಯಲ್ಲಿದ್ದ ಪಾತ್ರೆಗಳು ಕೆಳಗೆ ಬಿದ್ದಿದ್ದು, ಹಳೆಯ ಗೋಡೆಗಳ ಸಿಮೆಂಟ್‌ ಕೆಳಗೆ ಬಿದ್ದಿದ್ದು, ನಾಯಿಗಳು ಅರಚಾಡಿವೆ ಎಂದು ತಿಳಿದು ಬಂದಿದೆ.

Advertisement

ಭೂಕಂಪನ ಮಾಪಕ ಕೇಂದ್ರದ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸುತ್ತಿದ್ದು ಸೂಕ್ತ ಪರಿಶೀಲನೆಯ ಬಳಿಕವಷ್ಟೇ ಯಾವ ಕಾರಣದಿಂದ ಭೂಮಿ ಕಂಪಿಸಿದೆ ಎಂದು ತಿಳಿದು ಬರಬೇಕಿದೆ. 

ತಕ್ಷಣಕ್ಕೆ ಯಾವುದೇ ಹಾನಿಯ ಬಗ್ಗೆ ವರದಿಯಾಗಿಲ್ಲ. ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next