Advertisement

ವಿಜಯಪುರದಲ್ಲಿ ಭೂಕಂಪದ ಅನುಭವ: ರಾತ್ರಿ ವೇಳೆ ಎರಡು ಬಾರಿ ಕಂಪಿಸಿದ ಭೂಮಿ

01:11 PM Dec 22, 2020 | keerthan |

ವಿಜಯಪುರ: ವಿಜಯಪುರ ನಗರದಲ್ಲಿ ಸೋಮವಾರ ಮಧ್ಯ ರಾತ್ರಿ ಎರಡು ಬಾರಿ ಭೂಕಂಪನದ ಅನುಭವ ಆಗಿದೆ. ಜನರು ಇಡೀ ರಾತ್ರಿ ಜಾಗರಣೆ ಮಾಡುವಂತಾಗಿದೆ.

Advertisement

ಸೋಮವಾರ ಮಧ್ಯ ರಾತ್ರಿ ಹಾಗೂ ಮಂಗಳವಾರ ಬೆಳಗಿನ ನಜಾವ ಎರಡು ಬಾರಿ ಭೂಮಿ ಕಂಪಿಸಿದ್ದು, ಮನೆಗಳಲ್ಲಿ ಮೇಲಿಂದ ಪಾತ್ರೆಗಳು ಕೆಳಗೆ ಬಿದ್ದಿವೆ. ತಗಡಿನ‌ ಮೇಲ್ಛಾವಣಿ ಇರುವ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಮನೆಯಲ್ಲಿ ಮಲಗಿದವರನ್ನು ಅಲುಗಾಡಿಸಿ ಎಬ್ಬಿಸಿದ ಅನುಭವ ಆಗಿದೆ.

ವಿಜಯಪುರದ ಆನಂದನಗರ, ಕಾಳಿಕಾನಗರ, ಮುಕುಂದ ನಗರ, ಗಚ್ಚಿನಕಟ್ಟಿ ಕಾಲೋನಿ ಸೇರಿದಂತೆ ಹಲವೆಡೆ ಭೂಕಂಪನದ ಅನುಭವ ಆಗಿದೆ. ಭಾರಿ ಸದ್ದಿನೊಂದಿಗೆ ಭೂಮಿ ಕಂಪಿಸಿದ ಅನುಭವ ಆಗುತ್ತಲೇ ಮಲಗಿದ್ದವರು ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಇದರಿಂದ ವಿವಿಧ ಬಡಾವಣೆಯ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಇದನ್ನೂ ಓದಿ:ಎಷ್ಟು ಕಟ್ಟೆಚ್ಚರ ವಹಿಸಿದರೂ ಕಡಿಮೆಯೇ.. ಕೋವಿಡ್ ರೂಪಾಂತರದ ಬಗ್ಗೆ ಸಿಎಂ ಎಚ್ಚರಿಕೆ

ಜಿಲ್ಲೆಯಲ್ಲಿ ಗ್ರಾ.ಪಂ. ಮೊದಲ ಹಂತದ ಚುನಾವಣೆಯ ಮತದಾನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಇತ್ತ‌ ಗಮನ ಹರಿಸಿಲ್ಲ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಾದರೂ ಸ್ಥಳಕ್ಕೆ ಬಂದಿಲ್ಲ ಎಂದು ಸ್ಥಳೀಯರು ಅಸಮಧಾನ ವ್ಯಕ್ತಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next