Advertisement

ಶಿರಾಳಕೊಪ್ಪದಲ್ಲಿ ಭೂಕಂಪನದ ಅನುಭವ; ವೈರಲ್ ಆಯ್ತು ಸ್ಕ್ರೀನ್ ಶಾಟ್

09:35 AM Oct 06, 2022 | Team Udayavani |

ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರ ತಾಲೂಕು ಶಿರಾಳಕೊಪ್ಪದಲ್ಲಿ ಇಂದು ಬೆಳಗಿನ ಜಾವ ಭೂಮಿ ಕಂಪಿಸಿದ ಅನುಭವವಾಗಿದೆ. ಭಯಭೀತರಾದ ಜನರು ಮನೆಯಿಂದ ಹೊರಗೆ ಬಂದಿದ್ದಾರೆ. ಬೆಳಗಿನ ಜಾವ 3.55ರ ಹೊತ್ತಿಗೆ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಹೇಳಲಾಗುತ್ತಿದೆ.

Advertisement

ಶಿರಾಳಕೊಪ್ಪ ಪಟ್ಟಣ ಮತ್ತು ಸುತ್ತಮುತ್ತಲ ಒಂದು ಕಿ.ಮೀ ಸುತ್ತಮುತ್ತ ಈ ಅನುಭವವಾಗಿದೆ ಎಂದು ಜನರು ತಿಳಿಸಿದ್ದಾರೆ. ಭೂಮಿ ಕಂಪನದ ಅನುಭವ ಆಗುತ್ತಿದ್ದಂತೆ ಜನರು ಮನೆಯಿಂದ ಹೊರಗೆ ಬಂದಿದ್ದಾರೆ. ಕೆಲವರು ಜೋರು ಶಬ್ದವಾಯಿತು ಎಂದೂ ತಿಳಿಸಿದ್ದಾರೆ. ಬೆಳಗಿನ ಜಾವ ಗಾಢ ನಿದ್ರೆಯಲ್ಲಿದ್ದವರಿಗೆ ಕಂಪನದ ಅನುಭವದಿಂದ ಆತಂಕಗೊಂಡಿದ್ದರು.

ಈ ಕುರಿತು ಮಾಹಿತಿ ನೀಡಿದ ತಹಶೀಲ್ದಾರ್ ಕವಿರಾಜ್, ‘ಶಿರಾಳಕೊಪ್ಪ ಪಟ್ಟಣದ ಒಂದು ಕಿ.ಮೀ ಸುತ್ತಳತೆಯಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಜನರು ತಿಳಿಸಿದ್ದಾರೆ. ಇದು ಭೂಕಂಪನವೊ ಅಥವಾ ಬೇರೇನಾದರು ಕಾರಣವೋ ಅನ್ನುವ ಕುರಿತು ಇನ್ನಷ್ಟೆ ತಿಳಿದು ಬರಬೇಕಿದೆ. ಈ ಕುರಿತು ಜಿಲ್ಲಾಧಿಕಾರಿ ಅವರಿಗೆ ತಿಳಿಸಿದ್ದೇವೆ. ಬೆಂಗಳೂರಿನಿಂದ ಅಧಿಕೃತ ವರದಿ ಬರಬೇಕಿದೆ’ ಎಂದು ತಿಳಿಸಿದರು.

ಹರಿದಾಡಿದ ಸ್ಕ್ರೀನ್ ಶಾಟ್: ಮತ್ತೊಂದೆಡೆ ಶಿರಾಳಕೊಪ್ಪದಲ್ಲಿ ಭೂಕಂಪನ ಸಂಭವಿಸಿದೆ ಎಂದು ಸ್ಕ್ರೀನ್ ಶಾಟ್ ಹರಿದಾಡುತ್ತಿದೆ. ಶಿರಾಳಕೊಪ್ಪದಲ್ಲಿ 4.1 ತೀವ್ರತೆಯ ಭೂಕಂಪನವಾಗಿದೆ ಎಂದು ಅದರಲ್ಲಿ ತಿಳಿಸಲಾಗಿದೆ. ಮ್ಯಾಪ್ ನಲ್ಲಿ ಶಿರಾಳಕೊಪ್ಪದಲ್ಲಿ ಕೆಂಪು ಮಾರ್ಕ್ ತೋರಿಸಲಾಗಿದೆ. ಆದರೆ ಜಿಲ್ಲಾಡಳಿತವಾಗಲಿ, ತಾಲೂಕು ಆಡಳಿತವಾಗಲಿ ಭೂಕಂಪನದ ಕುರಿತು ಖಚಿತಪಡಿಸಿಲ್ಲ. ಮತ್ತೊಂದೆಡೆ ಭೂಕಂಪನ ಅಧ್ಯಯನ ಮಾಡುವ ಪ್ರತಿಷ್ಠಿತ ಸಂಸ್ಥೆಗಳು ಕೂಡ ಭೂಕಂಪನದ ಕುರಿತು ಖಚಿತಪಡಿಸಿಲ್ಲ.

ಇದನ್ನೂ ಓದಿ:ಭಾರತ್ ಜೋಡೋ ಯಾತ್ರೆ ಮತ್ತೆ ಆರಂಭ: ರಾಹುಲ್ ಗೆ ಸಾಥ್ ನೀಡಿದ ಸೋನಿಯಾ

Advertisement

ಜಿಲ್ಲೆಯ ಇತ್ತೀಚಿನ ಕಂಪನಗಳು: 2019ರ ಫೆಬ್ರವರಿ 3ರಂದು ತೀರ್ಥಹಳ್ಳಿ ತಾಲೂಕು ವಿಠಲನಗರದಲ್ಲಿ ಭೂಕಂಪನ ಸಂಭವಿಸಿತ್ತು. ರಿಕ್ಟರ್ ಮಾಪನದಲ್ಲಿ 2.2 ತೀವ್ರತೆ ದಾಖಲಾಗಿತ್ತು. ಇನ್ನು, ಶಿವಮೊಗ್ಗದ ಹುಣಸೋಡು ಗ್ರಾಮದಲ್ಲಿ ಸ್ಪೋಟ ಸಂಭವಿಸಿ, ಜಿಲ್ಲೆಯಾದ್ಯಂತ ಕಂಪನದ ಅನುಭವ ಉಂಟಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next