Advertisement
ಚುನಾವಣೆ ಸಂದರ್ಭದಲ್ಲಿ ಕೆಲವು ಕ್ಷೇತ್ರಗಳಲ್ಲಿ ಮತದಾರರಿಗೆ ಆಮಿಷಗಳನ್ನು ಒಡ್ಡುವುದು, ಹಣ ಹಂಚಿಕೆ ಮಾಡಲಾಗುತ್ತದೆ. ಆದರೆ ಚುನಾವಣಾ ನೀತಿಸಂಹಿತೆ ಜಾರಿಯಾದಲ್ಲಿ ಹಣಹಂಚಿಕೆ ಮಾಡುವುದು, ಆಮಿಷಗಳನ್ನು ಒಡ್ಡುವವರ ವಿರುದ್ಧ ಹಾಗೂ ಮತದಾನಕ್ಕೆ ಹಣ ಸ್ವೀಕರಿಸುವುದು ಅಪರಾಧವಾಗಿದ್ದು, ಅವರುಗಳ ವಿರುದ್ಧ ಪ್ರಕರಣ ದಾಖಲಿಸಿ, ಕಾನೂನು ಕ್ರಮಕೈಗೊಳ್ಳಲಾಗುವುದು.
Related Articles
Advertisement
ಸ್ವೀಫ್ ಸಮಿತಿ ಆರಂಭ: ಜಿಪಂ ಸಿಇಒ ಶಿವಶಂಕರ್ ಮಾತನಾಡಿ, 2018ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸ್ವೀಫ್ ಸಮಿತಿಯನ್ನು ರಚಿಸಲಾಗಿದ್ದು, ಜಿಲ್ಲೆಯಲ್ಲಿ ಮತದಾರರ ನೋಂದಣಿ, ನೈತಿಕ ಮತದಾನದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಮುಖ್ಯವಾಗಿ ಜಿಲ್ಲೆಯ ಯಾವುದೇ ಮತದಾರರು ಮತದಾನದಿಂದ ವಂಚಿತರಾಗದಂತೆ ನೋಡಿಕೊಳ್ಳುವುದು, ಅಂಗವಿಕಲರು ಸಹ ಮತದಾನ ಪ್ರಕ್ರಿಯೆಯಲ್ಲಿ ಬಾಗವಹಿಸುವಂತೆ ಮಾಡುವ ಉದ್ದೇಶ ಹೊಂದಲಾಗಿದೆ.
ಶೇ.100 ಮತದಾನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಸಮಿತಿ ಕೈಗೊಂಡಿದ್ದು, ಹೆಚ್ಚಿನ ಜನರು ಮತದಾನದಲ್ಲಿ ಪಾಲ್ಗೊಳ್ಳುವಂತೆ ಮಾಡಲು ಹಾಗೂ ಚುನಾವಣಾ ಸಮಯದಲ್ಲಿ ಅಕ್ರಮಗಳನ್ನು ತಡೆಯುವ ಬಗ್ಗೆ ಜಾಗೃತಿ ಮೂಡಿಸಲು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸ್‌ಅಪ್, ಟ್ವಿಟರ್, ಟೆಲಿಗ್ರಾಂ, ಇನ್ಸಾ$rಗ್ರಾಮ್ ಖಾತೆಗಳನ್ನು ಶೀಘ್ರದಲ್ಲೇ ತೆರೆಯಲಾಗುತ್ತದೆ ಎಂದು ಹೇಳಿದರು.
ಹಾಡಿ ಜನರಲ್ಲಿ ಮತದಾನ ಜಾಗೃತಿ: ಗಿರಿಜನರು ಕೂಲಿಗಾಗಿ ವಲಸೆ ಹೋಗುವ ಮೂಲಕ ಚುನಾವಣೆಗಳಿಂದ ದೂರ ಉಳಿಯುತ್ತಾರೆ. ಆದರೆ, ಈ ಬಾರಿ ಮತದಾನದ ದಿನದಂದು ಹಾಡಿಗಳ ಜನರು ವಲಸೆ ಹೋಗದೆ ಮತದಾನದಲ್ಲಿ ಪಾಲ್ಗೊಳ್ಳುವಂತೆ ಮಾಡಲು ಈಗಾಗಲೇ ಅರಿವು ಮೂಡಿಸಲಾಗಿದ್ದು, ಮತದಾನದ ದಿನದಂದು ಇವರುಗಳಿಗೆ ನರೇಗಾ ಯೋಜನೆಯಡಿ ಉದ್ಯೋಗ ನೀಡಲಾಗುವುದು.
ಕಾರ್ಮಿಕರು ಕಡ್ಡಾಯವಾಗಿ ಮತದಾನ ಮಾಡಲು ಅವಕಾಶ ನೀಡುವಂತೆ ಕಾರ್ಖಾನೆಗಳ ಆಡಳಿತ ಮಂಡಳಿಗಳಿಗೆ ಸೂಚನೆಯನ್ನು ನೀಡಲಾಗಿದೆ. ಅಲ್ಲದೆ ಬಹುತೇಕ ಮತದಾರರು ಚುನಾವಣೆಗಳಲ್ಲಿ ಮತದಾನ ಮಾಡುವುದಿಲ್ಲ, ಅನೇಕರು ಮತಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಸೇರಿಸಿಕೊಳ್ಳುತ್ತಿಲ್ಲ. ಇನ್ನೂ ಕೆಲವು ಮತದಾರರಿಗೆ ತಾವು ಮತ ಚಲಾಯಿಸಬೇಕಾದ ಬೂತ್ ಎಲ್ಲಿದೆ ಎಂದು ತಿಳಿದಿರುವುದಿಲ್ಲ.
ಕೆಲವರು ಮತಗಟ್ಟೆಗಳಲ್ಲಿರುವ ಸರದಿ ಸಾಲುಗಳನ್ನು ಕಂಡು ಮತದಾನದಿಂದ ದೂರ ಉಳಿಯುತ್ತಾರೆ. ಈ ಎಲ್ಲಾ ಸಮಸ್ಯೆಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಕ್ರಮವಹಿಸಲಾಗಿದ್ದು, ಜತೆಗೆ ಚುನಾವಣಾ ಆಯೋಗ ಮತದಾನದ ಸಮಯವನ್ನು ಸಂಜೆ 6 ಗಂಟೆವರೆಗೆ ವಿಸ್ತರಿಸಬಹುದು ಎಂದರು.
ತಪ್ಪಿತಸ್ಥರ ವಿರುದ್ಧ ಕ್ರಮ: ಮೈಸೂರಿನ ಕೆ.ಆರ್. ಕ್ಷೇತ್ರದ ಬೂತ್‌ವೊಂದರಲ್ಲಿ ನಡೆದಿರುವ ಮತಪಟ್ಟಿ ಅಕ್ರಮದ ಕುರಿತು ತನಿಖೆ ನಡೆಯುತ್ತಿದೆ. ಇದರಲ್ಲಿ ಯಾವುದೇ ಅಧಿಕಾರಿ ತಪ್ಪಿತಸ್ಥರೆಂದು ಕಂಡುಬಂದಲ್ಲಿ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು. ಆದರೆ, 4 ಸಾವಿರ ಮತದಾರರ ಹೆಸರುಗಳು ಅಂತಿಮ ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿಲ್ಲ ಎಂದು ಜಿಲ್ಲಾಧಿಕಾರಿ ರಂದೀಪ್ ಡಿ. ತಿಳಿಸಿದರು.