Advertisement
ಸಂಘದ ಅಧ್ಯಕ್ಷ ಕುಶಲ್ ಹೆಗ್ಡೆ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಸಂಘದ ಮತ್ತು ಕಾವೇರಿ ವಿದ್ಯಾ ಸಮೂಹ ಸಂಸ್ಥೆಗಳ ಪ್ರಗತಿ, ಪರಂಪರೆ ಹಾಗೂ ಉತ್ತಮ ಬಾಂಧವ್ಯದಿಂದಾಗಿ ಪುಣೆಯಲ್ಲಿ ವಿಶೇಷವಾದ ವಿದ್ಯಾಸಂಸ್ಥೆಯೆಂದು ಗುರುತಿಸಿಕೊಂಡಿದೆ. ಇಂದು ನಮ್ಮ ಸಂಸ್ಥೆಯು ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುವಲ್ಲಿ, ಗಣನೀಯ ಬೆಳವಣಿಗೆಗಳಲ್ಲಿ ಪ್ರತಿಯೊಬ್ಬರೂ ಪಾಲು ದಾರರೆಂದು ತಿಳಿಸಲು ಅಭಿಮಾನವಾಗುತ್ತಿದೆ. ಸಂಘದ ವಿಶ್ವಸ್ತರು, ಅಧಿಕಾರಿಗಳು, ಶಿಕ್ಷಕರು, ಪಾಲಕರು ಮತ್ತು ವಿದ್ಯಾರ್ಥಿಗಳು ಎಲ್ಲ ಇಲ್ಲಿ ಒಂದೇ ಪರಿವಾರದ ಸದಸ್ಯರಾಗಿ¨ªಾರೆ. ಎಲ್ಲರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು. ಭವಿಷ್ಯದಲ್ಲಿಯೂ ನಿಮ್ಮೆಲ್ಲರ ಸಹಕಾರ ನಿರಂತರವಾಗಿರಲಿ ಎಂದರು.
Related Articles
Advertisement
ಸಂಘದ ವಿಶ್ವಸ್ತೆ ರಾಧಿಕಾ ಶರ್ಮ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಆಡಳಿತಾಧಿಕಾರಿ ಪ್ರಸಾದ್ ಅಕೊಲ್ಕರ್ ವಂದಿಸಿದರು. ಆನಂತರ ಪ್ರಸಿದ್ಧ ಮರಾಠಿ ಹಾಸ್ಯ ಪ್ರವಚನಕಾರ ಸಂಜಯ ಉಪಾಧ್ಯೆ ಅವರಿಂದ ಒಂದು ಘಂಟೆಯ ಹಾಸ್ಯ ಪ್ರವ ಚನದಲ್ಲಿ ದಿನ ನಿತ್ಯದ ಇಂದಿನ ಬಿಡುವಿಲ್ಲದ ಜೀವನದಲ್ಲಿ ಕಲಿಯಬೇಕಾದ ಮತ್ತು ನಿರಂ ತರ ಮನಸ್ಸನ್ನು ಪ್ರಸನ್ನಗೊಳಿಸಿಕೊಂಡು ನಗು ನಗುತ್ತ ಹೇಗಿರಬೇಕು ಎಂಬುವುದನ್ನು ಮನೋಜ್ಞವಾಗಿ ತಿಳಿಸುತ್ತ ಎಲ್ಲರನ್ನೂ ನಗಿಸಿ ಮಂತ್ರಮುಗ್ಧಗೊಳಿಸಿದರು. ಕನ್ನಡ ಸಂಘದ ಈ ವರ್ಷದ ಕಾರ್ಯ ಕ್ರಮವು ಸಂಘದ ಮಾಜಿ ಅಧ್ಯಕ್ಷ ದಿ| ಡಾ| ಕಲ್ಮಾಡಿ ಶಾಮರಾವ್ ಅವರ ಜನ್ಮಶತಾಬ್ದ ವರ್ಷದಲ್ಲಿ ನಡೆಯುತ್ತಿದ್ದು ಎಲ್ಲರೂ ಅವರ ಆದರ್ಶವನ್ನು ನೆನಪಿಸುತ್ತಾ ಶಿಕ್ಷಕವೃಂದ ಮತ್ತು ವಿದ್ಯಾರ್ಥಿಗಳ ಬಗೆಗಿದ್ದ ಅವರ ಪ್ರೀತಿಯನ್ನು ನೆನಪಿಸಿದರು. ಕನ್ನಡ ಸಂಘದ ಈ ಕಾರ್ಯಕ್ರಮದಲ್ಲಿ ವಿದ್ಯಾ ಸಂಸ್ಥೆಗಳ 450ಕ್ಕೂ ಮಿಕ್ಕಿ ಶಿಕ್ಷಕ ವೃಂದ ಮತ್ತು ಶಿಕ್ಷಕೇತರ ಸಿಬಂದಿ ಉಪಸ್ಥಿತರಿದ್ದರು. ಕೊನೆಯಲ್ಲಿ ಉಪಾಹಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ವರದಿ : ಕಿರಣ್ ಬಿ. ರೈ ಕರ್ನೂರು