Advertisement

ಪ್ರತಿ ಹಳ್ಳಿಗೂ ಕುಡಿಯುವ ನೀರಿನ ಘಟಕ

01:13 PM Feb 27, 2017 | |

ಹರಪನಹಳ್ಳಿ: ಕ್ಷೇತ್ರದ ಬಹುತೇಕ ಗ್ರಾಮಗಳಲ್ಲಿ ಫ್ಲೋರೈಡ್‌ ಅಂಶವುಳ್ಳ ನೀರು ಜನರು ಕುಡಿಯುತ್ತಿರುವುದರಿಂದ ಕೈ-ಕಾಲುಗಳ ಕೀಲು ನೋವುಗಳ ಸಮಸ್ಯೆ ಎದುರಿಸುತ್ತಿದ್ದಾರೆ. ಹಾಗಾಗಿ ಜನರ ಆರೋಗ್ಯ ಕಾಪಾಡುವ ಉದ್ದೇಶದಿಂದ ಪ್ರತಿ ಹಳ್ಳಿಗೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗುವುದು ಎಂದು ಶಾಸಕ ಎಂ.ಪಿ.ರವೀಂದ್ರ ತಿಳಿಸಿದರು. 

Advertisement

ತಾಲೂಕಿನ ನಿಚ್ಚಾಪುರ ಗ್ರಾಮದಲ್ಲಿ ಭಾನುವಾರ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದ 178 ಹಳ್ಳಿಗಳಲ್ಲಿ ಈಗಾಗಲೇ 108 ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಲೋಕಾರ್ಪಣೆಗೊಂಡು ಕಾರ್ಯನಿರ್ವಹಿಸುತ್ತಿವೆ.

ಸದ್ಯ 20 ಈಗ ಘಟಕಗಳು ಮಂಜೂರಾಗಿದ್ದು, ಇನ್ನೂ 50 ಹಳ್ಳಿಗಳಲ್ಲಿ ಘಟಕಗಳನ್ನು ನಿರ್ಮಾಣ ಮಾಡಿದ್ದಲ್ಲಿ ಕ್ಷೇತ್ರ ಸಂಪೂರ್ಣ ಶುದ್ಧ ಕುಡಿಯುವ ನೀರಿನ ಕ್ಷೇತ್ರವಾಗಲಿದೆ ಎಂದರು. ತಾಲೂಕಿನಲ್ಲಿ ಸತತ ಬರಗಾಲ ಆವರಿಸಿರುವುದರಿಂದ ಕುಡಿಯುವ ನೀರಿಗೆ ತೀವ್ರ ತೊಂದರೆ ಅನುಭವಿಸುವಂತಾಗಿದೆ. 

ಹಳ್ಳಿಗಳಲ್ಲಿ ಒಂದು ಗ್ರಾಮದಲ್ಲಿ ನಾಲ್ಕೆ çದು ಬೋರ್‌ವೆಲ್‌ ಕೊರೆಸಿದ್ದರೂ ನೀರು ಸಿಗುತ್ತಿಲ್ಲ. ಒಂದು ಅಥವಾ ಎರಡು ಇಂಚು ನೀರು ಸಿಕ್ಕರೂ ಒಂದು ವಾರದಲ್ಲಿಯೇ ಅಂತರ್ಜಲ ಕುಡಿದು ಹೋಗಿ ನೀರು ಬರುತ್ತಿಲ್ಲ. ಹಾಗಾಗಿ ಹಲವು ಕಡೆ ಖಾಸಗಿ ಬೋರ್‌ವೆಲ್‌ ಮಾಲೀಕರಿಂದ ನೀರು ಖರೀದಿಸಿ ಟ್ಯಾಂಕರ್‌ ಮೂಲಕ ಜನರಿಗೆ ನೀಡಲಾಗುತ್ತಿದೆ.

ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಹಣದ ಕೊರತೆ ಇಲ್ಲ. ನೀರಿನ ಸಮಸ್ಯೆ ಉಲ್ಬಣಿಸಿದ್ದಲ್ಲಿ ರೈಲಿನ ಮೂಲಕ ನದಿ ನೀರು ಪೂರೈಕೆ ಮಾಡುವ ಕುರಿತು ಚಿಂತಿಸಲಾಗುವುದು ಎಂದು ಹೇಳಿದರು. ಪಟ್ಟಣದ ಎಪಿಎಂಸಿ ಆವರಣದಲ್ಲಿ ಸರ್ಕಾರದಿಂದ ಮೆಕ್ಕೆಜೋಳದ ಮೇವು ಬ್ಯಾಂಕ್‌ ಸ್ಥಾಪನೆಯಾಗಿದೆ.

Advertisement

ರೈತರಿಂದ ಪ್ರತಿ ಕೆಜಿ ಮೇವಿಗೆ 6ರೂ.ನಂತೆ ಖರೀದಿಸಿ ಕೇವಲ 2 ರೂ. ನೀಡಲಾಗುತ್ತಿದೆ. ಆದರೆ ಬ್ಯಾಂಕ್‌ ಆರಂಭವಾಗಿ ಒಂದುವರೆ ತಿಂಗಲಾಗಿದ್ದರೂ ಈವರೆಗೂ ಮೆಕ್ಕೆಜೋಳದ ಮೇವನ್ನು ಯಾವ ರೈತರು ಖರೀದಿ ಮಾಡಿಕೊಂಡು ಹೋಗಿಲ್ಲ.

ಅದಕ್ಕಾಗಿ ಮೆಕ್ಕೆಜೋಳದ ಬದಲಾಗಿ ರಾಗಿ ಹುಲ್ಲು ಹಾಗೂ ಭತ್ತದ ಮೇವನ್ನು ಸಂಗ್ರಹ ಮಾಡಲು ಜಿಲ್ಲಾಧಿಕಾರಿಗಳ ಬಳಿ ಚರ್ಚಿಸಲಾಗುವುದು ಎಂದು ತಿಳಿಸಿದರು. ಹರಪನಹಳ್ಳಿ ತಾಲೂಕಿನ ಬಹು ನಿರೀಕ್ಷಿತ  ಗರ್ಭಗುಡಿ ಬ್ರಿಡ್ಜ್ ಕಂ ಬ್ಯಾರೇಜ್‌ ಯೋಜನೆಗೆ ಈಗಾಗಲೇ ಹಣಕಾಸು ಇಲಾಖೆ ಒಪ್ಪಿಗೆ ನೀಡಿದ್ದು, ಶೀಘ್ರವೇ ಸಚಿವ ಸಂಪುಟ ಸಭೆಗೆ ಬರಲಿದೆ. ನಂತರ ಟೆಂಡರ್‌ ಪ್ರಕ್ರಿಯೆ ಆರಂಭವಾಗುತ್ತದೆ.

ಇದಲ್ಲದೇ ತಾಲೂಕಿನ 60 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆ 227ರಿಂದ 230 ಕೋಟಿ ರೂ.ಗಳಿಗೆ ಪರಿಷ್ಕರಣೆಗೊಂಡು ಸರ್ಕಾರದ ಮಟ್ಟದಲ್ಲಿ ಅಂತಿಮ ಹಂತಕ್ಕೆ ಬಂದಿದೆ ಎಂದು ಹೇಳಿದರು. ಮುಖಂಡರಾದ ಎಂ.ವಿ.ಅಂಜಿನಪ್ಪ, ಚಂದ್ರೇಗೌಡ, ತಾಪಂ ಸದಸ್ಯ ಓ.ರಾಮಪ್ಪ, ಸಿದ್ದಲಿಂಗಸ್ವಾಮಿ, ಜಾಕೀರ್‌, ತಿಮ್ಮಣ್ಣ, ಬಸವರಾಜ್‌ ಮತ್ತಿತರರು ಉಪಸ್ಥಿತರಿದ್ದರು.   

Advertisement

Udayavani is now on Telegram. Click here to join our channel and stay updated with the latest news.

Next