Advertisement

KUNDAPURA: ಪ್ರತೀ ಅಂಗನವಾಡಿಗೂ ಸ್ವಂತ ಕಟ್ಟಡ

08:25 AM Aug 09, 2023 | Team Udayavani |

ಕುಂದಾಪುರ: ಮೂರರಿಂದ ಆರು ವರ್ಷದ ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣ, ಪೌಷ್ಟಿಕ ಆಹಾರ ಒದಗಿಸುವ ಅಂಗನವಾಡಿಗಳಿಗೆ ಭದ್ರ ನೆಲೆ ಹಾಕುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್‌ ಯೋಜನೆ ರೂಪಿಸಿದ್ದಾರೆ. ಇದಕ್ಕಾಗಿ ಅವರೇ ಉಸ್ತುವಾರಿ ಸಚಿವರಾಗಿರುವ ಉಡುಪಿ ಜಿಲ್ಲೆಯನ್ನು ಪೈಲಟ್‌ ಯೋಜನೆಗೆ ಆಯ್ಕೆ ಮಾಡಲಾಗಿದ್ದು, ಸಿದ್ಧತೆಗಳು ಆರಂಭವಾಗಿವೆ.

Advertisement

ಗರ್ಭಿಣಿ – ಬಾಣಂತಿಯರಿಗೆ ಪೌಷ್ಟಿಕ ಆಹಾರ ಸಹಿತ ಮಹಿಳೆ ಮತ್ತು ಮಕ್ಕಳ ವಿವಿಧ ಕಲ್ಯಾಣ ಯೋಜನೆಗಳು ಅಂಗನವಾಡಿಗಳ ಮೂಲಕವೇ ಅನುಷ್ಠಾನ ಆಗುವ ಕಾರಣ ಪ್ರತೀ ಅಂಗನವಾಡಿಯೂ ಸ್ವಂತದ್ದಾದ ಸದೃಢ ಕಟ್ಟಡವನ್ನು ಹೊಂದಿರಬೇಕೆಂಬುದು ಮೂಲ ಆಶಯ. ನಿವೇಶನ ಇಲ್ಲದ ಅಂಗನವಾಡಿಗಳಿಗೆ ನಿವೇಶನ ಒದಗಿಸಿ ಬಳಿಕ ಕಟ್ಟಡ ನಿರ್ಮಿಸಬೇಕಿದೆ. ಇದಕ್ಕಾಗಿ ಉದ್ಯೋಗಖಾತ್ರಿ ಯೋಜನೆ ಸಹಿತ ವಿವಿಧ ಇಲಾಖೆಗಳ ಲಭ್ಯ ಅನುದಾನಗಳನ್ನು ಬಳಸಿಕೊಳ್ಳಲಾಗುವುದು.

ಸಿದ್ಧತೆ:

ಪ್ರಾಥಮಿಕ ಹಂತದಲ್ಲಿ ಎಷ್ಟು ಅಂಗನವಾಡಿ ಕಟ್ಟಡ ಗಳು ದುಃಸ್ಥಿತಿಯಲ್ಲಿವೆ, ಎಷ್ಟು ಅಂಗನವಾಡಿಗಳಿಗೆ ಸ್ವಂತ ಕಟ್ಟಡ / ನಿವೇಶನದ ಅಗತ್ಯವಿದೆ ಇತ್ಯಾದಿ ಮಾಹಿತಿ ಸಂಗ್ರ ಹಿಸಲಾಗುತ್ತಿದೆ. ಮುಂದಿನ ಹಂತದಲ್ಲಿ ಕಂದಾಯ ಇಲಾಖೆ, ಪಂಚಾಯತ್‌ರಾಜ್‌ ಇಲಾಖೆಯ ನೆರವು ಪಡೆದು ನಿವೇಶನ ಒದಗಣೆ, ಕಟ್ಟಡ ರಚನೆ ಆಗಲಿದೆ. ಶಾಲೆ ಹಾಗೂ ಅಂಗನವಾಡಿ ಕಟ್ಟಡಗಳ ಸ್ಥಿರತೆ, ದೃಢತೆ ಕುರಿತು ಎಂಜಿನಿಯರ್‌ಗಳ ತಂಡ ಜಿಲ್ಲೆಯಾದ್ಯಂತ ಗ್ರಾಮ ಮಟ್ಟದಲ್ಲಿ ಸಾಕ್ಷಾತ್‌ ಸಮೀಕ್ಷೆ ನಡೆಸಿದೆ.

ಜಿಲ್ಲೆಯ 29 ಅಂಗನವಾಡಿ ಕೇಂದ್ರಗಳಿಗೆ ನಿವೇಶನವೇ  ಇಲ್ಲ. ಈಗಾಗಲೇ ಕುಂದಾಪುರ, ಬೈಂದೂರು ವಿಧಾನಸಭಾ ಕ್ಷೇತ್ರಗಳಲ್ಲಿ 28 ನಿವೇಶನಗಳನ್ನು ಗುರುತಿಸಿದ್ದು ಎಂನರೇಗಾ ಮೂಲಕ ಅಂಪಾರು, ಉಪ್ಪುಂದದಲ್ಲಿ ಮುಂದಿನ ದಿನಗಳಲ್ಲಿ ಹಾಗೂ ಕಂಡ್ಲೂರಿನಲ್ಲಿ ಕಟ್ಟಡ ರಚನೆಯಾಗುತ್ತಿದೆ. ದಳಿಮತ್ತು ಇನ್ನೊಂದು ಕಡೆ ಎಸ್‌ಸಿ ಎಸ್‌ಟಿಪಿ ಯೋಜನೆ ಮೂಲಕ ಆಗುತ್ತಿದೆ.

Advertisement

ಬೆಳಗಾವಿಯಲ್ಲಿ ಹೆಚ್ಚು:

ರಾಜ್ಯದಲ್ಲಿ ಅತೀ ಹೆಚ್ಚು, 5,274 ಅಂಗನವಾಡಿ ಗಳಿರುವುದು ಸಚಿವರ ತವರು ಜಿಲ್ಲೆ ಬೆಳಗಾವಿಯಲ್ಲಿ. ರಾಜ್ಯದಲ್ಲಿ 65,324 ಅಂಗನವಾಡಿಗಳಿವೆ. ಉಡುಪಿಯಲ್ಲಿ 1,222, ದ.ಕ.ದಲ್ಲಿ 2,102, ಕಲುºರ್ಗಿಯಲ್ಲಿ 3,092, ತುಮಕೂರಿನಲ್ಲಿ 4,070 ಅಂಗನವಾಡಿಗಳಿವೆ.

ಅಂಗನವಾಡಿ ಅಂಕಿ-ಅಂಶ:

ಉಡುಪಿ               201

ಕಾಪು    137

ಬ್ರಹ್ಮಾವರ         220

ಕುಂದಾಪುರ      278

ಬೈಂದೂರು        138

ಹೆಬ್ರಿ     62

ಕಾರ್ಕಳ               186

ಜಿಲ್ಲೆಯಲ್ಲಿ ಒಟ್ಟು           1,222

ಒಟ್ಟು ಮಕ್ಕಳ ಹಾಜರಾತಿ            14,822

ಸ್ವಂತ ಕಟ್ಟಡದಲ್ಲಿ         1,051

ಬಾಡಿಗೆ ಕಟ್ಟಡದಲ್ಲಿ       32

ನಿವೇಶನವೇ ಇಲ್ಲದ್ದು    29

ನಿವೇಶನವಿದ್ದೂ ಕಟ್ಟಡವಿಲ್ಲದ್ದು            40

ಶಿಥಿಲ ಕಟ್ಟಡ (ತುರ್ತು ಬದಲಾಯಿಸುವ ಅಗತ್ಯವಿದೆ)     16

ಉಡುಪಿ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಎಲ್ಲ ಅಂಗನವಾಡಿಗಳಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಲಾಗುವುದು. ಮುಂದೆ ಹಂತಹಂತವಾಗಿ ರಾಜ್ಯದೆಲ್ಲೆಡೆ ಅನುಷ್ಠಾನ ಮಾಡಲಾಗುವುದು.ಲಕ್ಷ್ಮೀ ಹೆಬ್ಟಾಳ್ಕರ್‌, ಸಚಿವೆ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

ಅಂಗನವಾಡಿ ಕಟ್ಟಡಗಳ ಕುರಿತು ಮಾಹಿತಿ ಸಂಗ್ರಹಿಸಿ ಜಿಲ್ಲಾಧಿಕಾರಿ, ಜಿ.ಪಂ. ಸಿಇಒಗೆ ನೀಡಲಾಗಿದೆ. ಈಗಾಗಲೇ ಜಿಲ್ಲೆಯ ವಿವಿಧೆಡೆ ಬೇರೆ ಬೇರೆ ಯೋಜನೆಗಳ ಮೂಲಕ ಅಂಗನವಾಡಿ ಕಟ್ಟಡಗಳ ನಿರ್ಮಾಣ ನಡೆಯುತ್ತಿದೆ.ಕೃಷ್ಣ ಬೆಳಗೋಡುಉಪನಿರ್ದೇಶಕ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಉಡುಪಿ

 

Advertisement

Udayavani is now on Telegram. Click here to join our channel and stay updated with the latest news.

Next