Advertisement

ಇ-ವೋಚರ್‌ ನೀಡಿ ಲೋಕ ಕಲ್ಯಾಣ ಮಾಡಿ

12:42 AM Jun 11, 2021 | Team Udayavani |

ಹೊಸದಿಲ್ಲಿ: ಆರ್ಥಿಕವಾಗಿ ದುರ್ಬಲ ವರ್ಗದವರು ಲಸಿಕೆ ಪಡೆಯಲು ಉಳ್ಳವರು ನೆರವಾಗಲಿ ಎಂಬ ಉದ್ದೇಶದಿಂದ ಕೇಂದ್ರ ಸರಕಾರ ಇ-ವೋಚರ್‌ ಪರಿಚಯಿಸಿದೆ. ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಈ ಇ-ವೋಚರ್‌ ಸೌಲಭ್ಯ ಪರಿಚಯಿಸಿದ್ದು, ಹಣವಿರುವವರು ಲೋಕ ಕಲ್ಯಾಣಾರ್ಥವಾಗಿ ಆರ್ಥಿಕವಾಗಿ ದುರ್ಬಲರಿಗೆ ಲಸಿಕೆ ಹಾಕಿಸಲಿ ಎಂದು ಕರೆ ನೀಡಿದ್ದಾರೆ.

Advertisement

ಇ-ವೋಚರ್‌ ಎಂದರೇನು?  :

ಇದು ಎಲೆಕ್ಟ್ರಾನಿಕ್‌ ವೋಚರ್‌.  ಆರ್ಥಿಕವಾಗಿ ದುರ್ಬಲರ ಅನುಕೂಲಕ್ಕಾಗಿ ಹಣವಿರುವವರು ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ಖರೀದಿಸಿ ಒದಗಿಸುವುದು. ಇದರಲ್ಲಿ ಲಸಿಕೆ ಪಡೆಯುವ ಸಮಯ ನಮೂದಿಸಲಾಗಿರುತ್ತದೆ. ಇದನ್ನು ಗಿಫ್ಟ್ ವೋಚರ್‌ ಆಗಿ ಬಡವರಿಗೆ ನೀಡಬಹುದು.

ಇ-ವೋಚರ್‌ ದರವೆಷ್ಟು?  :

ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆಯ ದರವನ್ನೇ ನೀಡಬೇಕು. ಅಂದರೆ ಕೊವಿಶೀಲ್ಡ್‌ಗೆ 780 ರೂ., ಕೊವ್ಯಾಕ್ಸಿನ್‌ಗೆ 1,410 ಮತ್ತು ಸ್ಪುಟ್ನಿಕ್‌ ವಿಗೆ 1,145 ರೂ. ಇದರಲ್ಲಿ ನೀವು ಕೊಡಿಸುವ ಲಸಿಕೆಯ ದರವನ್ನು ನೀಡಿ ಇ-ವೋಚರ್‌ ಖರೀದಿಸಬೇಕು.

Advertisement

ಇ-ವೋಚರ್‌ ಖರೀದಿ ಹೇಗೆ?  :

ಸದ್ಯ ಕೇಂದ್ರ ಸರಕಾರ ಇ-ವೋಚರ್‌ ಬಗ್ಗೆ ಮಾಹಿತಿ ನೀಡಿಲ್ಲ. ಆದರೆ ಇದನ್ನು ಮೊಬೈಲ್‌ ಫೋನ್‌ನಲ್ಲಿ ಖರೀದಿಸಿ, ಡೌನ್‌ಲೋಡ್‌ ಮಾಡಿಕೊಳ್ಳಲು ಅವಕಾಶ ನೀಡುವ ಸಾಧ್ಯತೆ ಇದೆ. ಇದನ್ನು ಖಾಸಗಿ ಆಸ್ಪತ್ರೆಗಳಿಗೆ ತೆರಳಿ ತೋರಿಸಿದರೆ, ಅಲ್ಲಿ ಸ್ಕ್ಯಾನ್‌ ಮಾಡಿ ಲಸಿಕೆ ನೀಡುತ್ತಾರೆ.

ವರ್ಗಾಯಿಸಬಹುದೇ?  :

ಇಲ್ಲ, ಬಳಕೆದಾರರು ವರ್ಗಾ ಯಿಸಲು ಸಾಧ್ಯವಿಲ್ಲ. ನೀವು ಯಾರ ಹೆಸರಿಗೆ ಇ-ವೋಚರ್‌ ಖರೀದಿಸಿರುತ್ತೀರೋ ಅವರೇ ಲಸಿಕೆ ಪಡೆಯಬೇಕು. ಅವರು ಬೇರೊಬ್ಬರಿಗೆ ವರ್ಗಾವಣೆ ಮಾಡಲು ಸಾಧ್ಯವಿಲ್ಲ.

 

Advertisement

Udayavani is now on Telegram. Click here to join our channel and stay updated with the latest news.

Next