Advertisement

ಕಾಗದ ರಹಿತ ವಿಧಾನ ಮಂಡಲಕ್ಕೆ ಇ ವಿಧಾನ್‌ 

06:00 AM Nov 03, 2018 | |

ಬೆಂಗಳೂರು: ವಿಧಾನಮಂಡಲದ ಅಧಿವೇಶನ ಒಳಗೊಂಡಂತೆ ಶಾಸಕಾಂಗದ ಎಲ್ಲ ಪತ್ರ ವ್ಯವಹಾರ ಗಣಕೀಕರಣ ಗೊಳಿಸಲು ಹಾಗೂ ಕಾಗದ ರಹಿತ ಶಾಸಕಾಂಗ ಮಾಡುವ ದಿಸೆಯಲ್ಲಿ ಕೇಂದ್ರ ಸರ್ಕಾರ ಡಿಜಿಟಲ್‌ ಇಂಡಿಯಾ ಯೋಜನೆಯಲ್ಲಿ ಇ ವಿಧಾನ್‌ ಅಪ್ಲಿಕೇಷನ್‌ ಎಂಬ ಮಿಷನ್‌ ಮೂಡ್‌ ಯೋಜನೆ ಜಾರಿಗೆ ತರಲು ನಿರ್ದೇಶಿಸಿದೆ. ಇ ವಿಧಾನ್‌ ಯೋಜನೆಯನ್ನು ಹಿಮಾಚಲ ಪ್ರದೇಶದಲ್ಲಿ ಪ್ರಥಮವಾಗಿ ಜಾರಿಗೆ ತರಲಾಗಿದ್ದು, ಇದರಿಂದ ಪ್ರೇರಿತಗೊಂಡ ಕೇಂದ್ರ ಸರ್ಕಾರ ಒನ್‌ ನೇಷನ್‌ ಒನ್‌ ಅಪ್ಲಿಕೇಷನ್‌ ಶೀರ್ಷಿಕೆಯಡಿ ಎಲ್ಲ ರಾಜ್ಯಗಳಲ್ಲೂ ಇ ವಿಧಾನ್‌ ಯೋಜನೆ ಜಾರಿಗೆ ತರಲು ಯೋಜನೆ ರೂಪಿಸಿದೆ.

Advertisement

ಶುಕ್ರವಾರ ವಿಧಾನಸೌಧದಲ್ಲಿ ಆಯೋಜಿಸಿದ್ದ  ರ್ಯಕ್ರಮದಲ್ಲಿ ಇ ವಿಧಾನ್‌ ಪ್ರಶಿಕ್ಷಣ ಕಾರ್ಯಾಗಾರ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸಿ, ಈ ಯೋಜನೆ ಒಂದು ಮೈಲಿಗಲ್ಲಾಗಿದೆ. ಈ ಯೋಜನೆ ಪ್ರಾಮಾಣಿಕವಾಗಿ ಜಾರಿಗೆ ತರಲು ಎಲ್ಲ ಅಧಿಕಾರಿ ವರ್ಗದವರು ಶ್ರಮಿಸಬೇಕು ಎಂದು ಹೇಳಿದರು.

ಸಂಸದೀಯ ವ್ಯವಹಾರಗಳ ಮಂತ್ರಾಲಯದ ಅಧಿಕಾರಿಗಳು ರಾಜ್ಯ ವಿಧಾನಸಭೆ ಸಚಿವಾಲಯದ ಅಧಿಕಾರಿ/  ನೌಕರರಿಗೆ ಮೊದಲ ಹಂತದಲ್ಲಿ ವಿಧಾನಮಂಡಲದ ಮಾಹಿತಿಗಳನ್ನು ಸದಸ್ಯರಿಗೆ ಅಂತರ್ಜಾಲ ಹಾಗೂ ಮೊಬೈಲ್‌ಗ‌ಳಲ್ಲಿ ಹೇಗೆ ಒದಗಿಸಬೇಕೆಂಬ ಬಗ್ಗೆ ತರಬೇತಿ ಸಹ ನೀಡಿದರು.

ವಿಧಾನಸಭೆ ಉಪಾಧ್ಯಕ್ಷ ಕೆ.ಎಂ.ಕೃಷ್ಣಾರೆಡ್ಡಿ, ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್‌ ಮತ್ತಿತರರು ಉಪಸ್ಥಿತರಿದ್ದರು. 
 

Advertisement

Udayavani is now on Telegram. Click here to join our channel and stay updated with the latest news.

Next