ಹೊಸದಿಲ್ಲಿ: ದೇಶಾದ್ಯಂತ ಈಗ ವಿದ್ಯುತ್ ವಾಹನಗಳ ಖರೀದಿ ಹೆಚ್ಚಾಗತೊಡಗಿದೆ. ಹೀಗಾಗಿ, ಕೇಂದ್ರ ಸರಕಾರದ ವತಿಯಿಂದ ಕಂಪೆನಿ ತೆರಿಗೆ ವಿನಾಯಿತಿ ಸೇರಿ ಹಲವು ವಿನಾಯಿತಿನೀಡಬೇಕು ಎಂದು ಈಗಾಗಲೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರೆದುರು ಮನವಿಯಿದೆ.
ಅವರ ಮನವಿಗೆ ಬಜೆಟ್‌ನಲ್ಲಿ ಪೂರಕವಾಗಿರುವ ಸ್ಪಂದನೆ ಸಿಗಲಿದೆ ಎಂಬ ನಿರೀಕ್ಷೆ ವಿದ್ಯುತ್ ವಾಹನಗಳ ಉತ್ಪಾದನೆ ಮಾಡುವ ಕಂಪೆನಿಗಳು ಇರಿಸಿಕೊಂಡಿವೆ. ವಿದ್ಯುತ್ ಆಧಾರಿತ ವಾಹನ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದೇ ಆದಲ್ಲಿ ಈ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಸೃಷ್ಟಿಯಾಗಲಿವೆ.
ಇದಕ್ಕಿಂತ ಹೆಚ್ಚಾಗಿ ಚಿಪ್‌ಗಳ ಕೊರತೆ ಮತ್ತು ಸೆಮಿಕಂಡಕ್ಟರ್‌ಗಳ ಕೊರತೆ ಕಾರು ಉತ್ಪಾದನ ಕ್ಷೇತ್ರಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ. ಅದನ್ನು ದೂರ ವಾಗಿಸಲು ತೆರಿಗೆ ವಿನಾಯಿತಿ ಉತ್ಪಾದನ ಆಧಾರಿತ ಪ್ರೋತ್ಸಾಹಕ ಕ್ರಮಗಳನ್ನು ಪ್ರಕಟಿ ಸಿದಲ್ಲಿ ವಿದ್ಯುತ್ ವಾಹನ ಉತ್ಪಾದನೆಗೆ ವೇಗ ಸಿಗಲಿದೆ.
ಇದನ್ನೂ ಓದಿ:ಯತ್ನಾಳ್ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ
ಪ್ರಮುಖ ಸ್ಥಳಗಳಲ್ಲಿ ವಾಹನಗಳನ್ನು ಕ್ಷಿಪ್ರವಾಗಿ ಚಾರ್ಜ್ ಮಾಡುವ ನಿಟ್ಟಿನಲ್ಲಿ ಚಾರ್ಜಿಂಗ್ ಸ್ಟೇಶನ್‌ಗಳನ್ನು ಸ್ಥಾಪಿಸಲೂ ಪ್ರೋತ್ಸಾಹಕ ಕ್ರಮ ಗಳನ್ನು ಪ್ರಕಟಿಸಲೂ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ. ಏಕೆಂದರೆ ಮುಂದಿನ 2 ವರ್ಷಗಳಲ್ಲಿ ವಿದ್ಯುತ್ ವಾಹನಗಳ ಮಾರಾಟ ಶೇ. 20ರಷ್ಟು ಹೆಚ್ಚಾಗಲಿದೆ.