Advertisement

ಇ-ನಕ್ಷೆ ಮಂಜೂರಾತಿ, ಖಾತಾ ನೋಂದಣಿ: ಕಾಯ್ದೆಗೆ ತಿದ್ದುಪಡಿ

11:20 PM Mar 17, 2020 | Lakshmi GovindaRaj |

ವಿಧಾನಸಭೆ: ರಾಜ್ಯದ ನಗರ ಪ್ರದೇಶಗಳಲ್ಲಿ ಇ-ನಕ್ಷೆ ಮಂಜೂರಾತಿ, ಖಾತಾ ನೋಂದಣಿ ಹಾಗೂ ನಿವೇಶ ನಗಳ ಖಾತೆ ದಾಖಲು, ಖಾತಾ ವರ್ಗಾವಣೆಯಲ್ಲಿನ ಸಮಸ್ಯೆ ನಿವಾರಣೆ ಸಂಬಂಧ ಕಾಯ್ದೆಗೆ ಸೂಕ್ತ ತಿದ್ದುಪಡಿ ತರಲಾಗುವುದು ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಭರವಸೆ ನೀಡಿದರು.

Advertisement

ಹರತಾಳು ಹಾಲಪ್ಪ, ಸಿದ್ದು ಸವದಿ, ಸುಭಾಷ್‌ ಗುತ್ತೇ ದಾರ್‌ ಹಾಗೂ ಕಳಕಪ್ಪ ಬಂಡಿ ಅವರು ನಗರ ಪ್ರದೇಶ ಗಳಲ್ಲಿ ಸಕ್ಷಮ ಪ್ರಾಧಿಕಾರದ ಅನುಮೋದನೆ ಯಾಗದೇ ಇರುವ ನಿವೇಶನಗಳ ಖಾತಾ ದಾಖಲು/ ವರ್ಗಾವಣೆ ಸ್ಥಗಿತಗೊಳಿಸಿರುವುದರಿಂದ ಜನರಿಗೆ ತೊಂದರೆಯಾಗುತ್ತಿರುವ ಬಗ್ಗೆ ಪ್ರಸ್ತಾಪಿಸಿದ ವಿಚಾರಕ್ಕೆ ಅವರು ಉತ್ತರ ನೀಡಿದರು.

ಇತ್ತೀಚೆಗೆ ಸಿಎಂ ಅಧ್ಯಕ್ಷತೆ ಯಲ್ಲಿ ಈ ಕುರಿತು ಚರ್ಚೆ ನಡೆಯಿತು. ಹಳೆಯ ಪುರಸಭೆ ವ್ಯಾಪ್ತಿ ಯ ಲ್ಲಿದ್ದ ನಿವೇಶನಗಳಿಗೆ ಇದೀಗ ನಗರ ಯೋಜನೆ ವಿಭಾಗದಡಿ ಇ- ನಕ್ಷೆ ಸಿಗದಿರುವುದು. ಈ ಹಿಂದೆ ನಗರ ಸಭೆ, ಪುರಸಭೆ ವ್ಯಾಪ್ತಿಗೆ ಹಳ್ಳಿಗಳನ್ನು ಸೇರಿಸಿ ನೋಟಿಫೈ ಮಾಡಿದ್ದರೂ ಅಂತಹ ನಿವೇಶನಗಳಿಗೆ ಇದೀಗ ನಗರ ಯೋಜನೆ ಅಡಿ ಇ-ನಕ್ಷೆ ಸಿಗದಿರುವುದು.

ಬಗರ್‌ ಹುಕುಂ ಅಡಿ ಹಂಚಿಕೆಯಾದ ಭೂಮಿ ಹಾಗೂ ಮಲೆನಾಡಿನ ಭಾಗದಲ್ಲಿ ಅರಣ್ಯ ಪ್ರದೇಶ ಒತ್ತುವರಿ ಸಂಬಂಧ 94ಸಿ ಹಾಗೂ 94ಸಿಸಿ ವ್ಯಾಪ್ತಿಗೆ ಬರದ ಭೂಮಿಗೆ ಸಂಬಂಧಪಟ್ಟಂತೆಯೂ ಕೆಲ ಸಮಸ್ಯೆಗಳಿವೆ. ಈ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next