Advertisement

ಶೇ.32 ಪಡಿತರದಾರರಿಂದ ಇನ್ನೂ ಬರಬೇಕಿದೆ ಇ-ಕೆವೈಸಿ

01:25 PM Aug 06, 2021 | Team Udayavani |

ವರದಿ: ಬಸವರಾಜ ಹೂಗಾರ

Advertisement

ಹುಬ್ಬಳ್ಳಿ: ಪಡಿತರ ಪಡೆಯಲು ಪಡಿತರದಾರರು ಇ-ಕೆವೈಸಿ ಸಲ್ಲಿಕೆ ಕಡ್ಡಾಯ ಮಾಡಲಾಗಿದೆ. ಇ-ಕೆವೈಸಿ ಸಲ್ಲಿಕೆಗೆ ಆ.10ರಂದು ಕೊನೆ ದಿನವಾಗಿದ್ದರೂ ಹುಬ್ಬಳ್ಳಿ ಶಹರ ಹಾಗೂ ಗ್ರಾಮೀಣ ತಾಲೂಕುಗಳ ಶೇ.32 ಪಡಿತರದಾರರು ಇನ್ನೂ ಇ-ಕೆವೈಸಿ ಸಲ್ಲಿಕೆ ಮಾಡಿಲ್ಲವಾಗಿದೆ.

ಹುಬ್ಬಳ್ಳಿ ಶಹರ-ಗ್ರಾಮೀಣ ತಾಲೂಕುಗಳಲ್ಲಿ ಒಟ್ಟು 1,91,172 ವಿವಿಧ ಪಡಿತರ ಕಾರ್ಡ್‌ಗಳ ಅಡಿಯಲ್ಲಿ ಸುಮಾರು 6,75,019 ಜನರು ಪಡಿತರ ಧಾನ್ಯಗಳನ್ನು ಪಡೆದುಕೊಳ್ಳುತ್ತಿದ್ದು, ಇದುವರೆಗೆ ಶೇ.68 ಪಡಿತರದಾರರು ಇ-ಕೆವೈಸಿ ಸಲ್ಲಿಸಿದ್ದಾರೆ. ಸರಕಾರ ರಾಜ್ಯಾದ್ಯಂತ ಪಡಿತರದಾರರ ಮಾಹಿತಿ ಸಂಗ್ರಹ ಮೂಲಕ ಅನಗತ್ಯವಾಗಿ ಬಿಡುಗಡೆಯಾಗುತ್ತಿರುವ ಪಡಿತರ ತಡೆ ನಿಟ್ಟಿನಲ್ಲಿ ಮಹತ್ತರ ಹೆಜ್ಜೆ ಇರಿಸಿದೆ.

ಇ-ಕೆವೈಸಿ ಸಂಗ್ರಹ ಕಾರ್ಯ ಕಳೆದ ವರ್ಷವೇ ಆರಂಭಿಸಲಾಗಿದ್ದರೂ ಕೊರೊನಾ ಕಾರಣದಿಂದ ಅದನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಚಾಲನೆ ನೀಡಲಾಗಿದ್ದು, ಆ.10ರೊಳಗೆ ಇ-ಕೆವೈಸಿ ಸಲ್ಲಿಸದಿದ್ದವರಿಗೆ ಪಡಿತರ ನೀಡಲಾಗುವುದಿಲ್ಲ. ಹುಬ್ಬಳ್ಳಿ ನಗರ ಹಾಗೂ ಗ್ರಾಮೀಣ ತಾಲೂಕು ವ್ಯಾಪ್ತಿಯಲ್ಲಿ ಸುಮಾರು 7,244 ಅಂತ್ಯೋದಯ ಪಡಿತರ ಚೀಟಿಗಳಿದ್ದು, ಅದರಲ್ಲಿ 31,133 ಸದಸ್ಯರಿದ್ದಾರೆ. ಇದರಲ್ಲಿ 14,698 ಸದಸ್ಯರು ಕೆವೈಸಿ ನೀಡಿದ್ದು, ಇನ್ನುಳಿದ 16,415 ಸದಸ್ಯರು ಕೆವೈಸಿ ಮಾಹಿತಿ ನೀಡಬೇಕಾಗಿದೆ. 1,39,409 ಬಿಪಿಎಲ್‌ ಪಡಿತರ ಚೀಟಿಗಳಿದ್ದು, ಅದರಲ್ಲಿ 4,80,993 ಸದಸ್ಯರಿದ್ದಾರೆ. 3,05,659 ಸದಸ್ಯರು ಕೆವೈಸಿ ನೀಡಿದ್ದು, ಇನ್ನುಳಿದ 1,75,334 ಸದಸ್ಯರು ಇ-ಕೆವೈಸಿ ಸಲ್ಲಿಸಬೇಕಾಗಿದೆ. 44,519 ಎಪಿಎಲ್‌ ಪಡಿತರ ಚೀಟಿಗಳಿದ್ದು, 1,62,913 ಸದಸ್ಯರಿದ್ದಾರೆ. ಇದರಲ್ಲಿ 42,397 ಸದಸ್ಯರ ಇ-ಕೆವೈಸಿ ನೀಡಿದ್ದು, 1,20,516 ಸದಸ್ಯರು ಸಲ್ಲಿಸಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next