Advertisement
ಈ ನೂತನ ಸೌಲಭ್ಯ ಮೂಲಕ ಚಿಕಿತ್ಸೆ ಆನ್‌ಲೆ„ನ್ ಮುಖಾಂತರ ಲಭ್ಯವಾಗಲಿದ್ದು, ಉಳಿದ ವಿಚಾರಗಳನ್ನು ಹೆಲ್ತ್ ಕಾರ್ಡ್ ಮೂಲಕ ಪಡೆಯಬಹುದಾಗಿದೆ.
ಧೂಮಪಾನ, ಕುಡಿತ ಇತ್ಯಾದಿ ದುಶ್ಚಟಗಳು, ಬದುಕಿನ ರೀತಿ, ವಾಸಿಸುತ್ತಿರುವ ಪ್ರದೇಶದ ಪರಿಸ್ಥಿತಿ ಇತ್ಯಾದಿ ಸಮಗ್ರ ವಿಚಾರಗಳೂ ಇದರಲ್ಲಿ ನಮೂದನೆಗೊಳ್ಳುವುವು. ಚಿಕಿತ್ಸೆಗೆ ಸಂಬಂಧಿಸಿದ ತಪಾಸಣೆಯ ವರದಿಗಳೆಲ್ಲವೂ ಕಾರ್ಡಿಗೆ ಆನ್ ಲೆ„ನ್ ಮೂಲಕ ಅಪ್ ಲೋಡ್ ಆಗುವುದು.
Related Articles
Advertisement
ಇದರಂಗವಾಗಿ ಮೊಗ್ರಾಲ್ ಪುತ್ತೂರು ಕುಟುಂಬ ಆರೋಗ್ಯ ಕೇಂದ್ರದಲ್ಲಿ ಇ-ಹೆಲ್ತ್ ಯೋಜನೆ ಜಾರಿಗೊಂಡಿದೆ. ಮೊಗ್ರಾಲ್ ಪುತ್ತೂರು ಗ್ರಾ. ಪಂ.ನಲ್ಲಿ ಶೇ. 70 ಮನೆಗಳು ಈಗ ಇ-ಹೆಲ್ತ್ ಯೋಜನೆಯಲ್ಲಿ ಅಳವಡಿಸಲಾಗಿದೆ. ಇದನ್ನು ಶೇ. 100ಕ್ಕೊಯ್ಯುವ ಯತ್ನ ನಡೆಯುತ್ತಿದೆ. ರಾಜ್ಯದಲ್ಲಿ ಐ.ಎಸ್.ಒ. ಸರ್ಟಿಫಿಕೆಟ್ ಪಡೆದ ಪ್ರಥಮ ಎಫ್.ಎಚ್.ಸಿ. ಎಂಬ ಹೆಗ್ಗಳಿಕೆಗೆ ಮೊಗ್ರಾಲ್ ಪುತ್ತೂರಿನ ಕುಟುಂಬ ಆರೋಗ್ಯ ಕೇಂದ್ರ ಪಾತ್ರವಾಗಿದೆ. ಇ-ಹೆಲ್ತ್ ಯೋಜನೆ ಜಾರಿಗೊಳ್ಳುವ ಜಿಲ್ಲೆಯ ಎರಡನೇ ಕೇಂದ್ರವೂ ಇದಾಗಿದೆ. ಕಯ್ಯೂರು-ಚೀಮೇನಿ ಕುಟುಂಬ ಆರೋಗ್ಯ ಕೇಂದ್ರ ಮೊದಲ ಕೇಂದ್ರವಾಗಿದೆ ಮೊಗ್ರಾಲ್ ಪುತ್ತೂರು ಕುಟುಂಬ ಆರೋಗ್ಯ ಕೇಂದ್ರದಲ್ಲಿ ಇ-ಹೆಲ್ತ್ ಯೋಜನೆಯ ಜಾರಿ ಸಮಾರಂಭ ಜರಗಿತು. ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಎ.ಎ. ಜಲೀಲ್ ಯೋಜನೆಯನ್ನು ಉದ್ಘಾಟಿಸಿದರು. ಗ್ರಾ.ಪಂ.ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಹಮೀದ್ ಬೆಳ್ಳೂರು ಅಧ್ಯಕ್ಷತೆ ವಹಿಸಿದ್ದರು.
ವೈದ್ಯಾಧಿಕಾರಿ ಡಾ| ನಾಸ್ಮಿನ್ ಜೆ. ನಝೀರ್ ವರದಿ ವಾಚಿಸಿದರು. ಆರೋಗ್ಯ ಇನ್ಸ್ ಪೆಕ್ಟರ್ ಬಿ. ಅಶ್ರಫ್, ಪಂಚಾಯತ್ ಸದಸ್ಯೆ ಇ.ಪ್ರಮೀಳಾ, ಇ-ಹೆಲ್ತ್ ಸಂಚಾಲಕಿ ಸಜಿತಾ, ಆಸ್ಪತ್ರೆ ಅಭಿವೃದ್ಧಿ ಸಮಿತಿ ಸದಸ್ಯ ನಾಂ ಹನೀಫ, ಫಾರ್ಮಾಸಿಸ್ಟ್ ರತೀಶ್, ಆಸ್ಪತ್ರೆ ಸಿಬಂದಿ ಉಪಸ್ಥಿತರಿದ್ದರು.