Advertisement

ಎಂಆರ್‌ಪಿ ನಮೂದಿಸದ ಇ-ಕಾಮರ್ಸ್‌ ಸಂಸ್ಥೆಗಳು

03:09 PM Dec 31, 2017 | |

ಹೊಸದಿಲ್ಲಿ: ಆನ್‌ಲೈನ್‌ನಲ್ಲಿ ಮಾರಾಟವಾಗುವ ಪರಿಕರ ಗಳ ಗರಿಷ್ಠ ದರವನ್ನು ತಮ್ಮ ವೆಬ್‌ಸೈಟ್‌ಗಳಲ್ಲಿ ತಪ್ಪದೇ ನಮೂದಿಸುವಂತೆ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾ ಲಯ ಕಟ್ಟುನಿಟ್ಟಾಗಿ ನೀಡಿರುವ ಆದೇಶವನ್ನು ಭಾರತದಲ್ಲಿ ಸೇವೆ ನೀಡುತ್ತಿರುವ ಕೆಲ ಇ-ಮಾರಾಟ ಸಂಸ್ಥೆಗಳು ಉಲ್ಲಂ  ಸುತ್ತಿವೆ ಎಂದು ಲೋಕಲ್‌ ಸರ್ಕಲ್ಸ್‌ ಎಂಬ ಸಂಸ್ಥೆ ನಡೆಸಿರುವ ಸಮೀಕ್ಷೆಯಿಂದ ಬಹಿರಂಗವಾಗಿದೆ. 

Advertisement

ಇದೇ ವರ್ಷ, ಇ-ಕಾಮರ್ಸ್‌ ಸಂಸ್ಥೆಗಳು ತಾವು ಮಾರುವ ವಸ್ತುಗಳ ಮೇಲಿನ ಗರಿಷ್ಠ ದರವನ್ನು ಪ್ರಕಟಿಸಬೇಕೆಂದು ಸರಕಾರ ಹೇಳಿತ್ತು. ಆದರೆ, ಇ-ಕಾಮರ್ಸ್‌ ಸಂಸ್ಥೆಗಳು ತಮ್ಮ ಹಳೆ ಚಾಳಿ ಮುಂದುವರಿಸಿವೆ ಎಂದಿದೆ ವರದಿ.

Advertisement

Udayavani is now on Telegram. Click here to join our channel and stay updated with the latest news.

Next