Advertisement

ರಾಜ್ಯಗಳ ಆದೇಶಕ್ಕೆ ಕಾಯುತ್ತಿವೆ ಇ-ಕಾಮರ್ಸ್‌ ಕಂಪೆ‌ನಿಗಳು

11:52 PM Apr 18, 2020 | Sriram |

ಹೊಸದಿಲ್ಲಿ: ಜೀವನಾವಶ್ಯಕವಲ್ಲದ ಉತ್ಪನ್ನಗಳನ್ನು ಮನೆಬಾಗಿಲಿಗೆ ತಲುಪಿಸುವ ಸೇವೆ ಪುನರಾರಂಭಿಸಲು ಗೃಹ ವ್ಯವಹಾರಗಳ ಸಚಿವಾಲಯ ನೀಡಿದ ನಿರ್ದೇಶನದಂತೆ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ರೀತಿಯ ಇ-ಕಾಮರ್ಸ್‌ ಸಂಸ್ಥೆಗಳು ತಮ್ಮ ವ್ಯವಹಾರವನ್ನು ಆರಂಭಿಸಲು ತುದಿಗಾಲಲ್ಲಿ ನಿಂತಿವೆ.

Advertisement

ಆದರೆ, ಈ ಸಂಬಂಧ ಹಲವು ರಾಜ್ಯ ಸರಕಾರಗಳು ಅಧಿಕೃತ ಆದೇಶ ಹೊರಡಿಸದಿರುವುದು ಕಾರ್ಯಾರಂಭಕ್ಕೆ ತೊಡಕಾಗಿದೆ. ಇದರೊಂದಿಗೆ ಗ್ರಾಹಕರು ಆನ್‌ಲೈನ್‌ ಮೂಲಕ ಆರ್ಡರ್‌ ಮಾಡಿದ ಉತ್ಪನ್ನಗಳನ್ನು ಅವರ ಮನೆಗೆ ತಲುಪಿಸಲು ಅಗತ್ಯವಿರುವ ಸರಕು ಸಾಗಣೆ ಸೇವೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಆರಂಭವಾಗದಿರುವುದು ಸಹ ಇ-ಕಾಮರ್ಸ್‌ ಕಂಪೆ ನಿಗಳಿಗೆ ನಿರಾಶೆ ಉಂಟು ಮಾಡಿದೆ. ಈ ನಡುವೆ ವಾರಾಂತ್ಯದೊಳಗೆ ಎಲ್ಲ ರಾಜ್ಯ ಸರಕಾರಗಳಿಂದಲೂ ಈ ಬಗ್ಗೆ ಹಸಿರು ನಿಶಾನೆ ಸಿಗಲಿದೆ ಎಂದು ಅಮೆಜಾನ್‌ ವಿಶ್ವಾಸ ವ್ಯಕ್ತಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next