Advertisement

ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಅರಿವು ಮೂಡಿಸಿ

03:36 PM Jul 16, 2019 | keerthan |

ಕೋಲಾರ: ಸಾಂಕ್ರಾಮಿಕ ರೋಗಗಳಿಗೆ ಕಾರಣವಾದ ಸೊಳ್ಳೆಗಳ ನಿಯಂತ್ರಣ ಹಾಗೂ ಇತರೆ ಮುಂಜಾಗ್ರತಾ ಕ್ರಮಗಳ ಕುರಿತು ಗ್ರಾಮೀಣ ಪ್ರದೇಶದಲ್ಲಿ ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯ್ತಿ ಸಿಬ್ಬಂದಿ ಅರಿವು ಮೂಡಿಸಬೇಕು ಎಂದು ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಕಮಲಮ್ಮ ಸೂಚನೆ ನೀಡಿದರು.

Advertisement

ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೂದಿಕೋಟಿ ಆರೋಗ್ಯ ಕೇಂದ್ರದಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಗಟ್ಟುವ ಕುರಿತು ವಹಿಸಬೇಕಾದ ಮುಂಜಾಗ್ರತೆ ಕುರಿತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸೊಳ್ಳೆಗಳ ತಾಣ ನಾಶಪಡಿಸಿ: ಸೊಳ್ಳೆಗಳಿಂದ ಹರಡುವ ರೋಗಗಳಾದ ಮಲೇರಿಯಾ, ಡೆಂ à, ಚಿಕೂನ್‌ ಗುನ್ಯಾ, ಮೆದುಳು ಜ್ವರ ಮತ್ತಿತರ ಕಾಯಿಲೆಗಳು ಹರಡದಂತೆ ಎಚ್ಚರವಹಿಸಬೇಕು, ಸೊಳ್ಳೆಗಳ ತಾಣಗಳನ್ನು ನಾಶಪಡಿಸಬೇಕು ಎಂದು ಹೇಳಿದರು.

ಆರೋಗ್ಯದ ಬಗ್ಗೆ ಶಿಕ್ಷಣ ನೀಡಿ: ಆಶಾ ಕಾರ್ಯಕರ್ತೆಯರು ಗ್ರಾಮದ ಪ್ರತಿಮನೆಗೂ ಭೇಟಿ ನೀಡಿ ಸೊಳ್ಳೆಗಳ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅರಿವು ಮೂಡಿಸಿ, ಗುಂಪು ಸಭೆಗಳನ್ನು ನಡೆಸಿ
ಆರೋಗ್ಯ ಶಿಕ್ಷಣ ನೀಡಿ ಎಂದು ಹೇಳಿದರು.

ಸೊಳ್ಳೆಗಳ ನಿಯಂತ್ರಣಕ್ಕೆ ಸಂಜೆ ಸಮಯದಲ್ಲಿ ಬೇವಿನ ಸೊಪ್ಪಿನ ಹೊಗೆ ಹಾಕಲು ಸಲಹೆ ನೀಡಿ, ಮನೆಗಳಲ್ಲಿ ತಪ್ಪದೇ ಸೊಳ್ಳೆ ಪರದೆಗಳನ್ನು ಕಟ್ಟಿಕೊಳ್ಳಲು ಅರಿವು ಮೂಡಿಸಿ, ಮನೆಯ ಪಕ್ಕದ ಕುಂಟೆಗಳಲ್ಲಿ ಸೊಳ್ಳೆಗಳ
ಲಾರ್ವ ನಾಶಕಗಳ ಬಳಕೆಗೆ ಸೂಚಿಸಿದ ಅವರು, ಸೊಳ್ಳೆಗಳ ನಿಯಂತ್ರಣದಿಂದ ಈ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಬಹುದು ಎಂದರು.

Advertisement

ಲಾರ್ವ ನಾಶಪಡಿಸಿ: ಕೀಟ ಶಾಸ್ತ್ರಜ್ಞ ವೇಣುಗೋಪಾಲ್‌, ಸೊಳ್ಳೆಗಳ ನಿಯಂತ್ರಣ ಅತಿ ಮುಖ್ಯವಾಗಿದ್ದು, ಮನೆಗಳಲ್ಲಿ ಟೈರುಗಳು, ತೆಂಗಿನ ಚಿಪ್ಪುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ, ಮನೆಯ ನೀರಿನ ಮೂಲಗಳನ್ನು ಸೊಳ್ಳೆ ಪ್ರವೇಶಿಸದಂತೆ ಭದ್ರಪಡಿಸಿ ಎಂದು ಸಲಹೆ ನೀಡಿ, ಮನೆಯ ಪಕ್ಕ ಇರುವ ಕಲ್ಯಾಣಿ, ಕುಂಟೆಗಳಿಗೆ ಸೊಳ್ಳೆಗಳ ಲಾರ್ವಗಳನ್ನು ತಿನ್ನುವ ಮೀನುಗಳನ್ನು ಬಿಡಲು ಗ್ರಾಮ ಪಂಚಾಯಿತಿ ಕ್ರಮವಹಿಸಬೇಕು ಎಂದರು.

ಕೊಳಚೆ ನೀರು ನಿಲ್ಲದಂತೆ ನೋಡಿಕೊಳ್ಳಿ: ಆರೋಗ್ಯ ನಿರೀಕ್ಷಕ ವೆಂಕಟೇಶಬಾಬು, ಗ್ರಾಮೀಣ ಪ್ರದೇಶದಲ್ಲಿ ರೋಗಗಳ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿ, ಸ್ವತ್ಛತೆಯ ಪರಿಸರ
ನಿರ್ಮಾಣಕ್ಕೆ ಶ್ರಮಿಸಿ, ಗ್ರಾಮದ ನೀರಿನ ಮೂಲಗಳ ಬಳಿ ಕೊಳಚೆ ನಿಲ್ಲದಂತೆ ಮಾಡಿ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಡಾ.ಪ್ರದೀಪ್‌ ಎನ್‌.ಸ್ವಾಮಿ, ಗ್ರಾಮ ಪಂಚಾಯಿತಿ ಸಿಬ್ಬಂದಿ, ಆರೋಗ್ಯ ಕೇಂದ್ರದ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಗ್ರಾಮದ ಜನತೆ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next