Advertisement

ಇ -ಹರಾಜು ಸ್ಥಗಿತ; ರೇಷ್ಮೆ ಬೆಳೆಗಾರರು ಕಂಗಾಲು

10:00 AM Aug 21, 2019 | keerthan |

ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಇದೇ ಮೊದಲ ಬಾರಿಗೆ ಇ ಹರಾಜು ಸ್ಥಗಿತಗೊಂಡು ಗೂಡು ತಂದಿದ್ದ ಬೆಳೆಗಾರರು ಗೂಡು ಮಾರಾಟವಾಗದೇ ತೊಂದರೆ ಅನುಭವಿಸಬೇಕಾಯಿತು.

Advertisement

ಏಷ್ಯಾ ಖಂಡದಲ್ಲೇ ಅತಿ ಹೆಚ್ವು ರೇಷ್ಮೆ ಬೆಳೆಯುವ ಬೆಳೆಗಾರರು ಶಿಡ್ಲಘಟ್ಟ ತಾಲೂಕಿನಲ್ಲಿ ಇದ್ದಾರೆ. ಆದರೆ ತಾಂತ್ರಿಕ ದೋಷದಿಂದ ಇ ಹರಾಜು ಸ್ಥಗಿತಗೊಂಡಿದ್ದರಿಂದ ಬೆಳೆಗಾರರು ಪರದಾಡಬೇಕಾಯಿತು. ಕೆಲ ರೈತರು ಮಾರುಕಟ್ಟೆ ಹೊರಗೆ ತಾವು ತಂದಿದ್ದ ರೇಷ್ಮೆ ಗೂಡನ್ನು ಕೈಗೆ ಸಿಕ್ಕ ಬೆಲೆಗೆ ಮಾರಾಟ ಮಾಡಿ ಮನೆಗಳಿಗೆ ತೆರೆಳಿದರು. ಇತಿಹಾಸದಲ್ಲೇ ಮೊದಲ ಬಾರಿಗೆ ಮಾರುಕಟ್ಟೆ ಸ್ಥಗಿತಗೊಂಡಿದೆಯೆಂದು ಬೆಳೆಗಾರರು ಆರೋಪಿಸಿದ್ದಾರೆ.

ಈ ಬಗ್ಗೆ ರೇಷ್ಮೆ ಇಲಾಖೆ ಅಧಿಕಾರಿಗಳ ಗಮನ ಸೆಳೆದರೂ ಏನು ಪ್ರಯೋಜನವಾಗಿಲ್ಲ ಎಂದು ಮಾರುಕಟ್ಟೆಗೆ ರೇಷ್ಮೆ ಗೂಡು ತಂದಿದ್ದ ಬೆಳೆಗಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ನಿತ್ಯ ಕೋಟ್ಯಾಂತರ ರೂ, ವಹಿವಾಟು ನಡೆಯುವ ಮಾರುಕಟ್ಟೆಯಲ್ಲಿ ಹರಾಜು ನಡೆಯದ ಕಾರಣ ಬೆಳೆಗಾರರು ಕಂಗಾಲಾದರು. ಮಾರುಕಟ್ಟೆಯಲ್ಲಿನ ಜನರೇಟರ್ ಕೆಟ್ಟು ಈ ಸ್ಥಿತಿ ನಿರ್ಮಾಣವಾಗಿದೆಯೆಂದು ರೈತರು ದೂರಿದ್ದಾರೆ. ಟನ್ ಗಟ್ಟಲೇ ರೇಷ್ಮಗೂಡು ಹರಾಜು ಅಗದೆ ಉಳಿದುಕೊಂಡಿದೆ. ಕೆಲವರು ಪರಿಸ್ಥಿತಿಯ ಲಾಭ ಪಡೆದು ರೈತರಿಂದ ಚೌಕಸಿ ಮಾಡಿ ಹೊರಗಿನ ರೀಲರ್ ಗಳು ಗೂಡು ಖರೀದಿಗೆ ಮುಂದಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next