Advertisement

ಇ-ಸ್ವತ್ತು ಖಾತೆ ಅನುಮಾನಾಸ್ಪದ- ಆರೋಪ

03:23 PM Aug 08, 2020 | mahesh |

ಕಡೂರು: ಪಟ್ಟಣದ ಸುಭಾಷ್‌ನಗರದ ಒಳಗಿರುವ ಪ್ರಮುಖ ಸ್ಥಳವನ್ನು ಕಡೂರು ಪುರಸಭೆಯು ಕೆಲವು ವ್ಯಕ್ತಿಗಳಿಗೆ ಇ-ಸ್ವತ್ತು ಖಾತೆಯನ್ನು ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಕೆಪಿಸಿಸಿ ಸದಸ್ಯ ಕೆ.ಎಸ್‌. ಆನಂದ್‌ ಆರೋಪಿಸಿದರು.

Advertisement

ಅವರು ಶುಕ್ರವಾರ ಸುಭಾಷ್‌ ನಗರದ ವಿವಾದಿತ ಸ್ಥಳದಲ್ಲಿಯೇ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವಾರು ವರ್ಷದಿಂದ ಬಂಡಿಮೋಟ್‌ ಮೈದಾನ ಎಂದು
ಕರೆಸಿಕೊಳ್ಳುತ್ತಿದ್ದ ಈ ಜಾಗವು ಪ್ರತಿವರ್ಷ ಗಣಪತಿ ಪ್ರತಿಷ್ಠಾಪನೆಯೂ ಸೇರಿದಂತೆ ಶಾಲಾ ಮಕ್ಕಳ ಸಾಂಸ್ಕೃತಿಕ ಚಟುವಟಿಕೆ ಹಾಗೂ ಸಾರ್ವಜನಿಕ ಸಭೆ ಸಮಾರಂಭಗಳಿಗೆ ಬಳಕೆಯಾಗುತ್ತಿತ್ತು. ಈ ಜಾಗ ಸಾರ್ವಜನಿಕರ ಸ್ವಾ ಧೀನದಲ್ಲಿ ಇದೆ ಎಂಬುದಕ್ಕೆ ಬಹುದೊಡ್ಡ ಇತಿಹಾಸವೇ ಇದೆ ಎಂದರು. ಪ್ರತಿವರ್ಷವು ಇಲ್ಲಿ ಗಣಪತಿ ಪ್ರತಿಷ್ಠಾಪಿಸುವ ಜತೆಗೆ ಇದೇ ಜಾಗದಲ್ಲಿರುವ ಐತಿಹಾಸಿಕ ನಾಗರಕಲ್ಲಿಗೆ ಭಕ್ತರು ಹಬ್ಬ ಹರಿದಿನಗಳಲ್ಲಿ ಪೂಜಿಸುತ್ತಾ ಬಂದಿದ್ದಾರೆ. ಇಂತಹ ಜಾಗವನ್ನು ಪುರಸಭೆಯು ದುರುದ್ದೇಶಪೂರಿತವಾಗಿ ಕೆಲವು ವ್ಯಕ್ತಿಗಳಿಗೆ ಇ-ಸ್ವತ್ತು ಖಾತೆ ಇಟ್ಟಿರುವುದು ಪರೋಕ್ಷವಾಗಿ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಂತಾಗಿದೆ ಎಂದು ಹೇಳಿದರು.

ಈಗಾಗಲೆ ನಡೆದಿರುವ ಕಾಂಪೌಂಡ್‌ ನಿರ್ಮಾಣ ಕಾರ್ಯ ಸ್ಥಗಿತಗೊಳ್ಳಬೇಕು ಜಾಗದಲ್ಲಿದ್ದ ಗಣಪತಿ ಮಂಟಪವನ್ನು ಕೆಡವಲಾಗಿದ್ದು ಅದನ್ನು ಪುನರ್‌ನಿರ್ಮಿಸಬೇಕು. ಜೊತೆಗೆ
ಈ ಜಾಗವನ್ನು ಸಾರ್ವಜನಿಕವಾಗಿ ಉಳಿಸಬೇಕು ಇಲ್ಲದಿದ್ದರೆ ಉಗ್ರ ಸ್ವರೂಪದ ಹೋರಾಟಕ್ಕೆ ಸಿದ್ದ ಎಂದು ಆನಂದ್‌ ತಿಳಿಸಿದರು. ಪುರಸಭೆ ಸದಸ್ಯ ತೋಟದ ಮನೆ ಮೋಹನ್‌(ಮುದ್ದು), ಕದಂಬ ವೆಂಕಟೇಶ್‌, ಪಂಗಲಿ ಮಂಜುನಾಥ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next