Advertisement

ದ್ಯುತಿಗೆ ಚಿನ್ನ, ಧನಲಕ್ಷ್ಮೀಗೆ ರಜತ ಪದಕ

12:25 AM Mar 01, 2020 | Sriram |

ಭುವನೇಶ್ವರ: ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್‌ ನಲ್ಲಿ ಭಾರತದ ಓಟದ ರಾಣಿ ದ್ಯುತಿ ಚಂದ್‌ 100 ಮೀ. ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. ಈ ಕೂಟದಲ್ಲಿ ಅವರು ಕಳಿಂಗ ಇನ್‌ಸ್ಟಿಟ್ಯೂಟ್‌ ಆಫ್ ಇಂಡಸ್ಟ್ರಿಯಲ್‌ ಟೆಕ್ನಾಲಜಿ ತಂಡವನ್ನು ಪ್ರತಿನಿಧಿಸಿದ್ದರು. ದ್ಯುತಿ ಈ ದೂರವನ್ನು 11.49 ಸೆಕೆಂಡ್‌ಗಳಲ್ಲಿ ಕ್ರಮಿಸಿದರು.

Advertisement

ಮಂಗಳೂರು ಯುನಿವರ್ಸಿಟಿಯ ಧನಲಕ್ಷ್ಮೀ ಎಸ್‌. ದ್ವಿತೀಯ ಸ್ಥಾನಿಯಾದರು (11.99 ಸೆಕೆಂಡ್‌). ಮಹಾತ್ಮಾ ಗಾಂಧಿ ವಿ.ವಿ.ಯ ಸ್ನೇಹಾ ಎಸ್‌.ಎಸ್‌. ತೃತೀಯ ಸ್ಥಾನ ಪಡೆದರು (12.08 ಸೆಕೆಂಡ್‌).

ಗೌರೀಶಂಕರ್‌ಗೆ ಕಂಚು
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಗೌರೀಶಂಕರ್‌ 400 ಮೀ. ಓಟದಲ್ಲಿ ತೃತೀಯ ಸ್ಥಾನಿಯಾಗಿದ್ದಾರೆ. ಆಳ್ವಾಸ್‌ನಲ್ಲಿ ಪ್ರಥಮ ವರ್ಷದ ಬಿ.ಕಾಂ. ಓದುತ್ತಿರು ಅವರು ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದರು. ಚೆನ್ನೈನಲ್ಲಿ ಕಳೆದ ಒಂದು ವರ್ಷದಿಂದ ತರಬೇತಿ ಪಡೆಯುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next