Advertisement

ಡಿವೈಎಸ್ಪಿ ಅಮಾತಿಗೆ ಆಗ್ರಹಿಸಿ ಸಂಘಟನೆಗಳಿಂದ ಧರಣಿ

01:14 PM Aug 25, 2019 | Suhan S |

ಶ್ರೀರಂಗಪಟ್ಟಣ: ಅಕ್ರಮ ಗಣಿಗಾರಿಕೆ ಮಾಲೀಕರನ್ನು ಬಂಧಿಸದ ಡಿವೈಎಸ್ಪಿ ಯೋಗೇಂದ್ರಪ್ಪ ಅವರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳು ಅವರ ಕಚೇರಿ ಎದುರು ಧರಣಿ ನಡೆಸಿತು.

Advertisement

ರೈತ ಸಂಘ , ದಸಂಸ, ಹಾಗೂ ಕರವೇ ಸೇರಿದಂತೆ ಇನ್ನಿತರ ಸಂಘಟನೆಗಳು ಪಟ್ಟಣದ ಡಿವೈಎಸ್‌ಪಿ ಕಚೇರಿ ಮುಂದೆ ಧರಣಿ ಕುಳಿತು ತಾಲೂಕು ಆಡಳಿತ ಹಾಗೂ ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ 20 ದಿನಗಳ ಹಿಂದೆ ಜಿಪಂ ಸದಸ್ಯ ಮರಿಯಪ್ಪ ಎಂಬುವರ ಕಲ್ಲು ಕ್ವಾರೆಯಲ್ಲಿ ನ್ಪೋಟಕ ಸಿಡಿಸುವಾಗ ಮೂವರಿಗೆ ಕಲ್ಲು ಸಿಡಿದು ಕಣ್ಣು ಬೆನ್ನುಮೂಳೆ ಮುರಿದು, ಕಿವಿಗಳನ್ನು ಕಳೆದುಕೊಂಡ ಕಾರ್ಮಿರನ್ನು ಆಸ್ಪತ್ರೆಗೂ ಸೇರಿಸದೆ, ಅವರಿಗೆ ಪರಿಹಾರವೂ ನೀಡದೆ ಇರುವ ಗಣಿ ಮಾಲೀಕರು ಹಾಗೂ ಕಾರ್ಮಿಕ ಮೇಸ್ತ್ರಿ ವಿರುದ್ಧ ದೂರು ದಾಖಲಾಗಿದ್ದರೂ , ಪ್ರಕರಣವನ್ನು ತಿರುಚುವ ಪ್ರಯತ್ನ ಮಾಡಿ ಕಾರ್ಮಿಕರಿಗೆ ಇಲ್ಲಿವರೆಗೆ ಯಾವುದೇ ಪರಿಹಾರ ನೀಡದ ಮಾಲೀಕರನ್ನು ಬಂಧಿಸದೆ ಅವರೊಟ್ಟಿಗೆ ಸಾಮೀಲಾಗಿರುವುದನ್ನು ಖಂಡಿಸಿದರು. ಸಂಘಟನೆಗಳ ಮುಖಂಡರು ಈಗಾಗಲೇ ಹಲವು ಬಾರಿ ಕಾರ್ಮಿಕರ ಪರಿಹಾರ ಹಾಗೂ ಪ್ರಕರಣದ ಬಗ್ಗೆ ಕೇಳಿದರೆ ಇಲ್ಲ ಸಲ್ಲದ ಸಬೂಬು ಹೇಳುತ್ತಿರುವ ಡಿವೈಎಸ್ಪಿ ಯೋಗೇಂದ್ರಪ್ಪ ಅವರನ್ನು ಅಮಾನತು ಪಡಿಸಬೇಕು. ಗಣಿ ನ್ಪೋಟ ದಲ್ಲಿ ಸಿಲುಕಿ ನೊಂದ ಕುಟುಂಬಕ್ಕೆ ಪರಿಹಾರ ಹೊದ ಗಿಸಬೇಕು ಎಂದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜೇಶ್‌ ಗೌಡ ಒತ್ತಾಯಿಸಿದರು.

ಹಲವು ಬಾರಿ ಅಕ್ರಮ ಗಣಿ, ನ್ಪೋಟಕಗಳ ವಿರುದ್ಧ ಕ್ರಮ ಕೈಗೊಳ್ಳಲು ಮೀನಮೇಷ ಎಣಿಸಿ ಯಾವುದೇ ಕ್ರಮ ಕೈಗೊಳ್ಳದೆ ಅಕ್ರಮಕ್ಕೆ ದಾರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಅಕ್ರಮ ಗಣಿ ಮಾಲೀಕರಿಂದ ಎಗ್ಗಿಲ್ಲದೆ ಸಿಡಿ ಮದ್ದು ನ್ಪೋಟಕಗಳು ದಿನೇ ದಿನೆ ನಡೆಯುತ್ತಿದ್ದರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಈ ಬಗ್ಗೆ ಎಸ್ಪಿ ಅವರು ಸ್ಥಳಕ್ಕೆ ಬಂದು ಸ್ಪಷ್ಟನೆ ನೀಡಬೇಕು ಎಂದು ಪಟ್ಟು ಹಿಡಿದ ಧರಣಿ ಕಾರ್ಯಕ್ರಮ ಮುಂದುವರಿಸಿದರು.

Advertisement

ನಂತರ ಸ್ಥಳಕ್ಕೆ ಸಿಪಿಐ ಕೃಷ್ಣಪ್ಪ ಆಗಮಿಸಿ ಎಸ್ಪಿ ಹಾಗೂ ಡಿವೈಎಸ್ಪಿ ತುರ್ತು ಕೆಲಸದ ಮೇಲೆ ಬೆಂಗಳೂರಿಗೆ ತೆರಳಿದ್ದು ನಿಮ್ಮ ಸಮಸ್ಯೆಯನ್ನು ಅವರಿಗೆ ನಾನು ತಿಳಿಸುತ್ತೇನೆ ಎಂದು ಪ್ರತಿಭಟನಾಕಾರರನ್ನು ಮನವೊಲಿಸಿ ಮನವಿ ಸ್ವೀಕರಿಸಿದರು.

ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ನಾಗೇಂದ್ರ ಸ್ವಾಮಿ, ತಾಲೂಕು ರೈತ ಸಂಘದ ಅಧ್ಯಕ್ಷ ಶ್ರೀಕಂಠಯ್ಯ, ಚಂದ್ರು, ದಸಂಸ ಮುಖಂಡ ಕುಬೇರಪ್ಪ, ಮೋಹನ್‌ ಕರವೇ ಹರೀಶ್‌ ಸೇರಿದಂತೆ ಇತರ ಗಣಿ ನ್ಪೋಟಕದಲ್ಲಿ ನೊಂದ ಕಾರ್ಮಿಕ ಕುಟುಂಬದ ಸದಸ್ಯರು ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next