Advertisement

ನಿರ್ಭಯಾ ಪ್ರಕರಣ: ಗಲ್ಲು ಶಿಕ್ಷೆ ಖಾಯಂ

06:00 AM Jul 10, 2018 | |

ಹೊಸದಿಲ್ಲಿ: ಇಡೀ ದೇಶವನ್ನೇ ತಲ್ಲಣ ಗೊಳಿಸಿದ್ದ ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಾಲ್ವರು ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಖಾಯಂಗೊಂಡಿದೆ. ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗಿಳಿಸುವಂತೆ ಕೋರಿ ಹಂತಕರು ಸಲ್ಲಿಸಿದ್ದ ಮನವಿ ಯನ್ನು ಸೋಮವಾರ ತಿರಸ್ಕರಿಸಿರುವ ಸುಪ್ರೀಂ ಕೋರ್ಟ್‌, ಮತ್ತೆ ನೇಣು ಕುಣಿಕೆಯ ದಾರಿ ತೋರಿಸಿದೆ.

Advertisement

2012ರಲ್ಲಿ ದಿಲ್ಲಿಯಲ್ಲಿ ಚಲಿಸುವ ಬಸ್‌ನಲ್ಲಿ ಅರೆ ವೈದ್ಯಕೀಯ ವಿದ್ಯಾರ್ಥಿನಿಯನ್ನು ಆಕೆಯ ಸ್ನೇಹಿತನ ಎದುರಲ್ಲೇ ಸಾಮೂಹಿಕವಾಗಿ ಅತ್ಯಾಚಾರಗೈದು ಬಳಿಕ ರಸ್ತೆಗೆಸೆದು ಕೊಲೆಗೈದ ಈ ಪ್ರಕರಣವನ್ನು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ ಕಳೆದ ವರ್ಷ ಮೇಯಲ್ಲಿ ನಾಲ್ವರು ಹಂತಕರಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು.

ಹಂತಕರಾದ ಮುಕೇಶ್‌, ಪವನ್‌ ಗುಪ್ತಾ, ವಿನಯ್‌ ಶರ್ಮಾ ಶಿಕ್ಷೆಯನ್ನು ತಗ್ಗಿಸುವಂತೆ ಕೋರಿ ಮರುಪರಿಶೀಲನ ಅರ್ಜಿ ಸಲ್ಲಿಸಿªದರು. ಈ ಅರ್ಜಿ ವಿಚಾರಣೆಯನ್ನು ಈಗ ನಡೆಸಿರುವ ಮುಖ್ಯ ನ್ಯಾಯ ಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ನ್ಯಾಯಪೀಠ, ನಮ್ಮ ಆದೇಶವನ್ನು ಮರು ಪರಿಶೀಲಿಸಲು ಇದರಲ್ಲಿ ಏನೂ ಇಲ್ಲ ಎಂದು ತೀರ್ಪು ನೀಡಿದೆ. ಈ ತೀರ್ಪನ್ನು ಸ್ವಾಗತಿಸಿರುವ ನಿರ್ಭಯಾ ತಾಯಿ ಆಶಾದೇವಿ, ಇದು ಎಲ್ಲರಿಗೂ ಸಂದ ನ್ಯಾಯ. ಇವರನ್ನು ಆದಷ್ಟು ಬೇಗ ಗಲ್ಲಿಗೇರಿಸಲಾಗುತ್ತದೆ‌ ಎಂಬ ನಂಬಿಕೆ ತಮಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next