Advertisement

ಹಕ್ಕಿಪಿಕ್ಕಿ ಕುಟುಂಬ ದೇಶಕ್ಕೆ ಕರೆತರಲು ಡಿವಿಎಸ್‌ ಮನವಿ

05:41 AM May 30, 2020 | Lakshmi GovindaRaj |

ಬೆಂಗಳೂರು: ಕೊರೊನಾ ಲಾಕ್‌ಡೌನ್‌ನಿಂದ ಕತಾರ್‌ನಲ್ಲಿ ಸಿಲುಕಿಕೊಂಡಿರುವ ಮೈಸೂರಿನ ಹಕ್ಕಿಪಿಕ್ಕಿ ಸಮುದಾಯದ ಕುಟುಂಬ ಬೆಂಗಳೂರಿಗೆ ಬರಲು  ವಿಮಾನ ಸೇವೆಯಲ್ಲಿ ಅವಕಾಶ ಕಲ್ಪಿಸುವಂತೆ ಕೇಂದ್ರ ವಿದೇಶಾಂಗ ಸಚಿವ ಜೈ ಶಂಕರ್‌ ಗೆ ಕೇಂದ್ರ ರಸಗೊಬ್ಬರ ಸಚಿವ ಡಿ.ವಿ.ಸದಾನಂಗೌಡ ಮನವಿ  ಮಾಡಿದ್ದಾರೆ.

Advertisement

ಈ ಕುರಿತು ಪತ್ರ ಬರೆದಿರುವ ಅವರು, ಹಕ್ಕಿಪಿಕ್ಕಿ ಪರಿಶಿಷ್ಟ ಸಮುದಾಯಕ್ಕೆ ಸೇರಿರುವ ರಾಜು ಸುಬ್ರಮಣಿ, ಮೀನಾ, ಕುಮಾರ್‌, ಚಂದ್ರಕಾಂತ್‌,   ಜ್ಯೋತಿ, ಗೋಪಿ ಹಾಗೂ ಮನೆ ಕೆಲಸ ಮಾಡಲು ತೆರಳಿದ್ದ ಚಿತ್ರದುರ್ಗದ ತಸ್ನೀರ್‌ ಖಾನಂ ಅವರು ವಾಪಸ್‌ ಬರಲು ಅವಕಾಶ ಕಲ್ಪಿಸುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next