Advertisement

ದ್ವಾಪರದ ನಾಯಕಿಯರಿಗೆ ಒಂದು ವೇದಿಕೆ

03:45 AM Jan 27, 2017 | |

ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ ನೃತ್ಯ ಲೋಕದ ಹೊಸ ಹೊಳಹುಗಳನ್ನು ಅನ್ವೇಷಿಸುತ್ತಿರುವ ಸಂಸ್ಥೆ. ಕಲಾಶ್ರೀ ಚಂದ್ರಶೇಖರ ನಾವಡರ ಅನುಭವ ಪರಿಕಲ್ಪನೆ, ದೃಷ್ಟಿಕೋನ, ಪ್ರಯೋಗ ಇವೆಲ್ಲವುಗಳಿಗೆ ಇಂತಹ ಹೊಸ ಕನಸನ್ನು ಕಂಡು ಅದು ನನಸಾಗಿ ಹೊರಹೊಮ್ಮಿ ನೃತ್ಯ ಲೋಕಕ್ಕೆ ಅರ್ಪಣೆಯಾಗುತ್ತದೆ. ಜನವರಿ 29ರಂದು ಸುರತ್ಕಲ್‌ನ ಗೋವಿಂದ ದಾಸ ಕಾಲೇಜಿನಲ್ಲಿ ಸಂಜೆ 4.30ಕ್ಕೆ ಆಯೋಜಿಸಲ್ಪಟ್ಟಿರುವ ದ್ವಾಪರದ ನಾಯಕಿಯರು ನೃತ್ಯ ಬ್ಯಾಲೆ ರಸಿಕರ ಮನದಾಳದಲ್ಲಿ ಹೊಸ ಕಲ್ಪನೆಯನ್ನು ಮೂಡಿಸಿದೆ.

Advertisement

ದಕ್ಷಿಣಕನ್ನಡ -ಉಡುಪಿ ಜಿಲ್ಲೆಗಳ ಪ್ರತಿಷ್ಠಿತ ನೃತ್ಯ ಸಂಸ್ಥೆಗಳ ನಿರ್ದೇಶಕಿಯರೇ ಪ್ರಸ್ತುತ ಪಡಿಸುವ ಏಕವ್ಯಕ್ತಿ ನೃತ್ಯಬ್ಯಾಲೆ. ಇಲ್ಲಿ ದ್ವಾಪರದ ರಾಧೆ, ಅಂಬೆ, ದ್ರೌಪದಿ ಹಾಗೂ ಹಿಡಿಂಬೆಯರು ಪ್ರಧಾನ ನಾಯಕಿಯರಾಗಿರುತ್ತಾರೆ. ಆರಂಭದಲ್ಲಿ ಅಗ್ನಿಕನ್ಯೆಯನ್ನು ನಾದನೃತ್ಯ ಸ್ಕೂಲ್‌ ಆಫ್ ಡಾ… ಸಂಸ್ಥೆಯ ನಿರ್ದೇಶಕಿ ವಿ| ಭ್ರಮರಿ ಶಿವಪ್ರಕಾಶ್‌ ಅಭಿನಯಸಲಿದ್ದಾರೆ. ಅನಂತರ ಪ್ರತೀಕಾರದ ಅವತಾರ ಜ್ವಾಲಾಮುಖೀ ಅಂಬೆ. ಈ ನೃತ್ಯಬ್ಯಾಲೆಯ ಪ್ರಸ್ತುತಿ ಗಾನ ನೃತ್ಯ ಅಕಾಡೆಮಿ ಸಂಸ್ಥೆಯ ನಿರ್ದೇಶಕಿ ವಿ| ವಿದ್ಯಾಶ್ರೀ ರಾಧಾಕೃಷ್ಣ ಅವರದು. ಮುಂದೆ ನೃತ್ಯ ನಿಕೇತನ ಕೊಡವೂರು ಸಂಸ್ಥೆಯ ನಿರ್ದೇಶಕಿ ವಿ| ಮಾನಸಿ ಸುಧೀರ್‌ ಕಥಾನಾಯಕಿ ಹಿಡಿಂಬೆಯನ್ನು ಅಭಿನಯಿಸುತ್ತಾರೆ. ಕೊನೆಗೆ ಸಂಭ್ರಮಿಸಲಿರುವ ರಾಧೆಯ ಚಿತ್ರಣವು ಪುತ್ತೂರಿನ ನೃತ್ಯ ನಿರ್ದೇಶಕಿ ವಿ| ಮಂಜುಳಾ ಸುಬ್ರಹ್ಮಣ್ಯ ಅವರಿಂದ ಮೂಡಿ ಬರಲಿದೆ. 

ಈ ನಾಲ್ಕು ನಾಯಕಿಯರು ಒಂದೇ ವೇದಿಕೆಯಲ್ಲಿ ಪ್ರಕಟಗೊಳ್ಳುವುದು ಶ್ರೀ ನಾಟ್ಯಾಂಜಲಿಯ ಈ ವರ್ಷದ ಕೊಡುಗೆ. 

ರಮೇಶ್‌ ಭಟ್‌ ಸುರತ್ಕಲ್‌

Advertisement

Udayavani is now on Telegram. Click here to join our channel and stay updated with the latest news.

Next