ಪುಣೆ, ಡಿ. 12: ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರ ಪುಣೆ ಇದರ ವತಿಯಿಂದ ದತ್ತ ಜಯಂತಿ ಆಚರಣೆಯು ಡಿ. 11 ರಂದು ಪುಣೆ ಶ್ರೀ ಗುರುದೇವ ಸೇವಾ ಬಳಗದ ಉಪಾಧ್ಯಕ್ಷರಾದ ತಮನ್ನಾ ಪ್ರಭಾಕರ ಶೆಟ್ಟಿ ಮತ್ತು ವೀಣಾ ಪಿ. ಶೆಟ್ಟಿ ರೋಹನ್ ನಿಲಯದಲ್ಲಿ ಪೂರ್ವಹ್ನ 11 ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ದತ್ತ ಜಯಂತಿ ಆಚರಣೆಯ ಪ್ರಯುಕ್ತ ಬೆಳಗ್ಗೆ ಓಂಕಾರ್ ಭಟ್ ಮತ್ತು ತಂಡದವರಿಂದ ಶ್ರೀ ದತ್ತ ದೇವರ ಶೋಡಷೋಪಚಾರ ಪೂಜೆ, ದತ್ತ ನಾಮ ಸ್ಮರಣೆ, ಮಹಾಆರತಿ ನಡೆಯಿತು. ಪೂಜಾ ವಿಧಿ-ವಿಧಾನಗಳನ್ನು ಪ್ರಭಾಕರ ಶೆಟ್ಟಿ ಮತ್ತು ವೀಣಾ ಪಿ. ಶೆಟ್ಟಿ ದಂಪತಿಯ ಪುತ್ರ ಪೃಥೆಶ್ ಮತ್ತು ಸ್ನೇಹಲ್ ಶೆಟ್ಟಿ ದಂಪತಿ ನೆರವೇರಿಸಿದರು.
ಬಳಿಕ ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಸದಸ್ಯೆಯರು ಹಾಗೂ ಬಳಗದ ಸದಸ್ಯರ ಭಜನಾ ಮಂಡಳಿ ಯಿಂದ ಭಜನಾ ಕಾರ್ಯಕ್ರಮ ನಡೆಯಿತು. ಕೊನೆಯಲ್ಲಿ ಮಹಾಮಂಗಳಾ ರತಿ, ಪ್ರಸಾದ ವಿತರಣೆ ಜರಗಿತು. ದತ್ತ ಜಯಂತಿ ಆಚರಣೆಯ ಆಯೋಜಕರಾದ ಪ್ರಭಾಕರ ಶೆಟ್ಟಿ ಶೆಟ್ಟಿ ಮತ್ತು ವೀಣಾ ಪಿ. ಶೆಟ್ಟಿ ದಂಪತಿ ಮಹಾಮಂಗಳಾರತಿಗೈದರು. ಬಳಗದ ಮಾಜಿ ಅಧ್ಯಕ್ಷ ನಾರಾಯಣ ಶೆಟ್ಟಿ ದಂಪತಿ, ಬಳಗದ ಉಪಾಧ್ಯಕ್ಷ ರಂಜಿತ್ ಶೆಟ್ಟಿ, ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಜಯಲಕ್ಷ್ಮೀ ಪಿ. ಶೆಟ್ಟಿ ಮತ್ತು ಬಳಗ ಮತ್ತು ಕೇಂದ್ರದ ಸದಸ್ಯ ಸದಸ್ಯೆಯರು, ಭಕ್ತಾದಿಗಳು ಆರತಿಗೈದರು.
ಈ ಸಂದರ್ಭದಲ್ಲಿ ಪುಣೆ ಬಳಗದ ಪ್ರಮುಖರಾದ ವಿಠಲ್ ಶೆಟ್ಟಿ, ದಾಮೋದರ ಬಂಗೇರ, ಅಜಿತ್ ಕುಮಾರ್ ಶೆಟ್ಟಿ, ಐ. ಸಿ. ಶೆಟ್ಟಿ ಮತ್ತು ಸದಸ್ಯರು ಹಾಗೂ ವಜ್ರ ಮಾತಾ ಮಹಿಳಾ ವಿಕಾಸ ಕೇಂದ್ರದ ಪ್ರಮುಖರಾದ ಪ್ರೇಮಾ ಎಸ್. ಶೆಟ್ಟಿ, ಪುಷ್ಪಾ ಪೂಜಾರಿ, ಸುಮನಾ ಎಸ್. ಹೆಗ್ಡೆ, ವೀಣಾ ಡಿ. ಶೆಟ್ಟಿ, ಸುಜಾತಾ ಶೆಟ್ಟಿ, ಲಲಿತಾ ಪೂಜಾರಿ, ಅಮಿತಾ ಪೂಜಾರಿ, ಲೀಲಾ ಶೆಟ್ಟಿ, ರೂಪಾ ಎಂ. ಶೆಟ್ಟಿ, ರೂಪಾ ಶೆಟ್ಟಿ, ಸುಶೀಲಾ ಮೂಲ್ಯ ಮತ್ತು ಸದಸ್ಯೆಯರು ಹಾಗೂ ಭಕ್ತರು ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿ ಶ್ರೀ ದತ್ತಗುರುವಿನ ಕೃಪೆಗೆ ಪಾತ್ರರಾದರು. ಕೊನೆಯಲ್ಲಿ ಅನ್ನಪ್ರಸಾದ ಸಂತರ್ಪಣೆ ನೆರವೇರಿತು.
ಚಿತ್ರ-ವರದಿ: ಹರೀಶ್ ಮೂಡಬಿದ್ರೆ ಪುಣೆ