ನವದೆಹಲಿ : ಎಲ್ಲವೂ ಅಂದುಕೊಂಡಂತೆ ಆಗಿದ್ರೆ, ಈ ಬಾರಿಯ ಟಿ20 ವಿಶ್ವಕಪ್ ಇಷ್ಟು ಹೊತ್ತಿಗೆ ಮುಗಿದು ಗೆದ್ದ ತಂಡ ಟ್ರೋಫಿಯೊಂದಿಗೆ ಸಂಭ್ರಮದಲ್ಲಿ ಇರುತ್ತಿತ್ತು. ಆದರೆ ಕೋವಿಡ್ ಮಹಾಮಾರಿಯ ಕಾರಣದಿಂದ ಟಿ20 ವಿಶ್ವಕಪ್ ಮುಂದಿನ ವರ್ಷಕ್ಕೆ ಮುಂದೂಡಿಕೆ ಆಗಿದೆ.
ಕೋವಿಡ್ ಪರಿಣಾಮ ಬಹುತೇಕ ಎಲ್ಲಾ ಕ್ಷೇತ್ರದ ಮೇಲೆ ಪರಿಣಾಮ ಬೀರಿದೆ. ಕ್ರಿಕಟ್ ಪಂದ್ಯಗಳು ಆರಂಭವಾಗಿದ್ರು, ವೀಕ್ಷಕರಿಲ್ಲದೆ ಖಾಲಿ ಮೈದಾನದಲ್ಲಿ ಆಟಗಾರರು ಆಡಬೇಕಾದ ಪರಿಸ್ಥಿತಿಯಿದೆ. ಎಲ್ಲಾ ಸರಿ ಆಗಿ ಇದ್ದಿದ್ರೆ ಈ ಬಾರಿ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಇಷ್ಟು ಹೊತ್ತಿಗೆ ಮುಕ್ತಾಯವಾಗಿರುತ್ತಿತ್ತು. ಅಕ್ಟೋಬರ್ 18 ರಿಂದ ನವೆಂಬರ್ 15 ವರೆಗೆ ನಡೆಯಬೇಕಿದ್ದ ಟಿ20 ವಿಶ್ವಕಪ್ ಮುಂದಿನ ವರ್ಷಕ್ಕೆ ಮುಂದೂಡಿಕೆ ಆಗಿದೆ. ಈ ಕುರಿತು ಇಎಸ್ ಪಿಎನ್ ಕ್ರಿಕ್ ಇನ್ಫೋ ಟ್ವೀಟರ್ ನಲ್ಲಿ ಟ್ವೀಟ್ ಮಾಡಿದ್ದು, ಅದಕ್ಕೆ ಬಂದ ರಿ ಟ್ವೀಟ್ಒಂದು ಸದ್ಯ ವೈರಲ್ ಆಗಿದೆ.
ಎಲ್ಲವೂ ಸರಿಯಿದ್ದಿದ್ರೆ ಈ ಬಾರಿಯ ಪುರುಷರ ಟಿ20 ವಿಶ್ವಕಪ್ ಫೈನಲ್ ಎಮ್ ಸಿಜಿ ಮೈದಾನದಲ್ಲಿ ಇಂದು ನಡೆಯುತ್ತ ಇರುತ್ತಿತ್ತು. ಎಂದು ಇಎಸ್ ಪಿನ್ ಟ್ವೀಟ್ ಮಾಡಿತ್ತು. ಈ ಟ್ವೀಟ್ ಗೆ ಅಂತಾರಾಷ್ಟ್ರೀಯ ಕ್ರಿಕೆಟಿಗ ನೆದರ್ಲೆಂಡ್ ಪೌಲ್ ವ್ಯಾನ್ ಮೀಕೆರನ್ ರಿ ಟ್ವೀಟ್ ಮಾಡಿದ್ದು, “ ಟಿ20 ಟೂರ್ನಿ ಆಯೋಜನೆಯಾಗಿದ್ದರೆ, ನಾನಿಂದು ಐಸಿಸಿಯಲ್ಲಿ ಆಡುತ್ತಿದ್ದೆ.ಆದರೆ ನಾನೀಗ ಉಬರ್ ಈಟ್ಸ್ ನಲ್ಲಿ ಫುಡ್ ಡೆಲಿವರಿ ಮಾಡುತ್ತಿದ್ದೇನೆ. ಚಳಿಗಾಲ ಕಳೆಯಲು ಬೇರೆ ದಾರಿ ಇಲ್ಲ. ಎಲ್ಲವೂ ಬದಲಾಗಿದೆ .ಎಲ್ಲರೂ ನಗುತ್ತಿರಿ”ಎಂದು ಪೌಲ್ ವ್ಯಾನ್ ಮೀಕೆರನ್ ಟ್ವೀಟ್ ಮಾಡಿದ್ದಾರೆ.
ಪೌಲ್ ವ್ಯಾನ್ ನೆದರ್ಲೆಂಡ್ ಪರ 5 ಅಂತಾರಾಷ್ಟ್ರೀಯ ಏಕದಿನ ಹಾಗೂ 41 ಟಿ20 ಪಂದ್ಯಗಳನ್ನು ಆಡಿದ್ದಾರೆ. ಒಟ್ಟು 47 ವಿಕೆಟ್ ಗಳನ್ನು ಪಡೆದಿದ್ದಾರೆ. 2013 ರಲ್ಲಿ ಕೀನ್ಯಾದ ವಿರುದ್ಧ ಕ್ರಿಕಟ್ ಬದುಕು ಆರಂಭಸಿದರು. ಕೋವಿಡ್ ಪರಿಣಾಮವಾಗಿ ನೆದರ್ಲೆಂಡ್ ನಲ್ಲಿ ಕ್ರಿಕಟ್ ಸಂಪೂರ್ಣ ನಿಂತು ಹೋಗಿದೆ.