Advertisement
ಆದರೆ ವರ್ಚುಯಲ್ ಮೂಲಕ ಹೆಚ್ಚು ಜನರನ್ನು ತಲುಪಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು. ಅರಮನೆಯಲ್ಲಿ ಕುಳಿತು ಖುದ್ದು ಜಂಬೂ ಸವಾರಿ ವೀಕ್ಷಿಸಲು 500 ಜನರಿಗೆ ಸೀಮಿತಗೊಳಿ ಸಲಾಗಿದ್ದರೂ, ಸಾಮಾಜಿಕ ಜಾಲತಾಣದ ಮೂಲಕ ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಜಂಬೂಸವಾರಿ ಕಾರ್ಯಕ್ರಮವನ್ನು ದಸರಾದ ಅಧಿಕೃತ ಫೇಸ್‌ಬುಕ್‌ನಲ್ಲಿ 1.85 ಲಕ್ಷ ಜನ, ಯೂ ಟೂನ್‌ನಲ್ಲಿ 32,500 ಹಾಗೂ ವೆಬ್ ಸೈಟ್‌ನಲ್ಲಿ 5300 ವೀಕ್ಷಣೆ ಮಾಡಿದ್ದಾರೆ ಎಂದರು. ದಸರಾ ಉದ್ಘಾಟನೆಯಿಂದ ಜಂಬೂ ಸವಾರಿ ವರೆಗೆ ಫೇಸ್‌ಬುಕ್‌ನಲ್ಲಿ ಒಟ್ಟು 5.12 ಲಕ್ಷ, ಯೂ ಟೂಬ್‌ನಲ್ಲಿ 49,500 ಹಾಗೂ ವೆಬ್‌ಸೈಟ್‌ನಲ್ಲಿ 23,150 ವೀಕ್ಷಣೆ ಆಗಿದೆ ಎಂದು ಹೇಳಿದರು.
Related Articles
Advertisement
ಕಳೆದೊಂದು ವರ್ಷದಿಂದ ಸಂಪೂರ್ಣವಾಗಿ ನೆಲಕಚ್ಚಿದ್ದ ಮೈಸೂರು ಪ್ರವಾಸೋದ್ಯಮ ದಸರಾದಿಂದ ಚೇತರಿಸಿಕೊಂಡಿದ್ದು, ಬೆಳಗ್ಗೆಯಿಂದ ರಾತ್ರಿ 10ರವರೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಕಂಡು ಬರುತ್ತಿರುವುದು ಒಂದೆಡೆಯಾದರೆ, ಪ್ರವಾಸಿ ಕೇಂದ್ರಗಳಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ.
ಈ ಬಾರಿಯ ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾಗಿದ್ದ ದೀಪಾಲಂಕಾರವನ್ನು ನೋಡಿ ಕಣ್ತುಂಬಿಕೊಳ್ಳುವ ಸಲುವಾಗಿ ಗ್ರಾಮೀಣ ಪ್ರದೇಶದಿಂದಲ್ಲದೇ, ಹೊರ ಜಿಲ್ಲೆಯಿಂದ ನಿತ್ಯ 20ರಿಂದ 30 ಸಾವಿರ ಮಂದಿ ಮೈಸೂರಿಗೆ ಭೇಟಿ ನೀಡಿದ್ದಾರೆ. ಶನಿವಾರವೂ ಹೆಚ್ಚಳ: ದಸರಾ ದೀಪಾಲಂಕಾರ ವಿಸ್ತರಣೆ ಹಾಗೂ ವಾರಾಂತ್ಯ ರಜೆ ಹಿನ್ನೆಲೆ ಮೈಸೂರಿನತ್ತ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ ಹಿನ್ನೆಲೆ ನಗರದೆಲ್ಲೆಡೆ ಸಂಚಾರ ದಟ್ಟಣೆ ಹಾಗೂ ಪ್ರವಾಸಿ ಕೇಂದ್ರಗಳು ತುಂಬಿ ತುಳಿಕಿದವು. ಮೈಸೂರಿಗೆ ಕೊರೊನಾ ಪೂರ್ವ ಕಳೆ ಬಂದಿದ್ದು, ಪ್ರವಾಸೋದ್ಯಮ, ಹೋಟೆಲ್, ಲಾಡ್ಜಿಂಗ್, ಬೀದಿಬದಿ ವ್ಯಾಪಾರ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಾರ-ವಹಿವಾಟು ನಡೆದಿದೆ.