Advertisement

ಪುಣೆ ಬಂಟರ ಸಂಘದಿಂದ ದಸರಾ ಪೂಜೆ ಮತ್ತು ದಾಂಡಿಯಾ ರಾಸ್‌

02:37 PM Oct 16, 2018 | Team Udayavani |

ಪುಣೆ: ಪುಣೆ ಬಂಟರ ಸಂಘದ ವತಿಯಿಂದ ಓಣಿಮಜಲು ಜಗನ್ನಾಥ ಶೆಟ್ಟಿ ಬಂಟರ ಭವನದಲ್ಲಿ ಅ. 13 ರಂದು ದಸರಾ ಪೂಜೆ ಹಾಗೂ ದಾಂಡಿಯಾ ಕಾರ್ಯಕ್ರಮವು  ಭಕ್ತಿ ಸಂಭ್ರಮದಿಂದ ನಡೆಯಿತು. ಮೊದಲಿಗೆ ಶಶಿಕಿರಣ್‌ ಶೆಟ್ಟಿ ಚಾವಡಿಯಲ್ಲಿ ಶ್ರೀದೇವಿಯ ಅಲಂಕೃತ ಮಂಟಪಕ್ಕೆ ಸಂಘದ ಮಹಿಳಾ ಕಾರ್ಯಾಧ್ಯಕ್ಷೆ ಸಂಧ್ಯಾ ವಿ. ಶೆಟ್ಟಿ ಮತ್ತು ಸದಸ್ಯರು ಆರತಿ ಬೆಳಗಿ ಪೂಜಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

Advertisement

ಸಂಘದ ಅಧ್ಯಕ್ಷ ಸಂತೋಷ್‌ ಶೆಟ್ಟಿ ಇನ್ನ ಕುರ್ಕಿಲ್‌ ಬೆಟ್ಟು, ಮಾಜಿ ಅಧ್ಯಕ್ಷರಾದ ಸದಾನಂದ ಕೆ. ಶೆಟ್ಟಿ, ಸಮಾಜದ  ಹಿರಿಯ ಉದ್ಯಮಿ  ಶ್ರೀಧರ ಶೆಟ್ಟಿ ಪಂಚರತ್ನ, ರತ್ನಾ ಶ್ರೀಧರ್‌ ಶೆಟ್ಟಿ, ಯಶೋದಾ ಗುಂಡೂರಾಜ್‌ ಶೆಟ್ಟಿ, ಬಂಟ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಆನಂದ್‌ ಶೆಟ್ಟಿ ಮಿಯ್ನಾರ್‌, ಪಿಂಪ್ರಿ-ಚಿಂಚಾÌಡ್‌ ಬಂಟರ ಸಂಘದ ಅಧ್ಯಕ್ಷರಾದ ವಿಜಯ್‌ ಶೆಟ್ಟಿ ಬೋರ್ಕಟ್ಟೆ, ಸಂಘದ ಪ್ರಧಾನ ಕಾರ್ಯದರ್ಶಿ ಅಜಿತ್‌ ಹೆಗ್ಡೆ, ಕೋಶಾಧಿಕಾರಿ ಎರ್ಮಾಳ್‌ ಚಂದ್ರಹಾಸ್‌ ಶೆಟ್ಟಿ, ಪದಾಧಿಕಾರಿಗಳಾದ  ಸತೀಶ್‌ ಶೆಟ್ಟಿ,  ಶ್ರೀನಿವಾಸ ಶೆಟ್ಟಿ, ಚಂದ್ರಶೇಖರ ಶೆಟ್ಟಿ ನಿಟ್ಟೆ, ಪ್ರವೀಣ್‌ ಶೆಟ್ಟಿ ಪುತ್ತೂರು, ಗಣೇಶ್‌ ಹೆಗ್ಡೆ, ವಿವೇಕಾನಂದ್‌ ಶೆಟ್ಟಿ ಆವರ್ಸೆ, ಶಶೀಂದ್ರ  ಶೆಟ್ಟಿ, ವಿಶ್ವನಾಥ ಶೆಟ್ಟಿ, ಪ್ರಶಾಂತ್‌ ಶೆಟ್ಟಿ ಹೆರ್ಡೆಬೀಡು, ಸುಜಿತ್‌ ಶೆಟ್ಟಿ, ಪ್ರಶಾಂತ್‌ ಎ. ಶೆಟ್ಟಿ, ಉತ್ತರ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ದಿನೇಶ್‌ ಶೆಟ್ಟಿ ಕಳತ್ತೂರು, ದಕ್ಷಿಣ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ವಸಂತ್‌ ಶೆಟ್ಟಿ  ಉಪಸ್ಥಿತರಿದ್ದು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆಯಿತ್ತರು.

ಅಧ್ಯಕ್ಷ  ಸಂತೋಷ್‌ ಶೆಟ್ಟಿಯವರು ಭತ್ತದ ತೆನೆಗಳನ್ನು ಹೊತ್ತು ತಂದು ತುಳಸೀ ಕಟ್ಟೆಯಲ್ಲಿರಿಸಿ ಸಾಂಪ್ರದಾಯಿಕ ರೀತಿಯಿಂದ ಪೂಜಿಸಿದರು. ನಂತರ ಇಂದಿರಾ ಸದಾನಂದ ಶೆಟ್ಟಿ ಕಿರು ಸಭಾಗೃಹದಲ್ಲಿ ಸಭಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಸಂದರ್ಭ ಸಂಘದ ಮಹಿಳಾ ವಿಭಾಗದ ವತಿಯಿಂದ  ಸಂಘದ ಅಧ್ಯಕ್ಷ ಸಂತೋಷ್‌ ಶೆಟ್ಟಿ, ದಿವ್ಯಾ ಸಂತೋಷ್‌ ಶೆಟ್ಟಿ ದಂಪತಿಗಳನ್ನು ಭವನದ ನಿರ್ಮಾಣದ ಕೊಡುಗೆಗಾಗಿ ಶಾಲು ಹೊದೆಸಿ, ಸ್ಮರಣಿಕೆ, ಪುಷ್ಪಗುತ್ಛ ಮತ್ತು ಸಮ್ಮಾನ ಪತ್ರವನ್ನಿತ್ತು ಸಮ್ಮಾನಿಸಲಾಯಿತು.

ಅಧ್ಯಕ್ಷ ಸಂತೋಷ್‌ ಶೆಟ್ಟಿ ಮಾತನಾಡಿ, ನಮ್ಮ ನೂತನ  ಭವನದಲ್ಲಿ ನವರಾತ್ರಿ ಹಬ್ಬವನ್ನು ಸಮಾಜ ಬಾಂಧವರೊಂದಿಗೆ ಆಚರಿಸುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಸಂಘದ ವಿವಿಧ ಆಚರಣೆಗಳಲ್ಲಿ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ದಸರಾ ಹಬ್ಬ, ತೆನೆ ಹಬ್ಬ ಹಾಗೂ ದಾಂಡಿಯಾ ಕಾರ್ಯಕ್ರಮವನ್ನು ಪ್ರತೀ ವರ್ಷ ಆಚರಿಸಿಕೊಂಡು ಬರುತ್ತಿದ್ದೇವೆ. ಸಾಮಾಜಿಕ  ಚಿಂತನೆಯೊಂದಿಗೆ ಆಧ್ಯಾತ್ಮಿಕ ಜಾಗೃತಿಯೂ ಆವಶ್ಯವಾಗಿದ್ದು ಶ್ರೀದೇವಿಯ ಆರಾಧನೆ ಯೊಂದಿಗೆ ನಮ್ಮ ಜೀವನ ಇಷ್ಟಾರ್ಥಗಳು ನೆರವೇ ರುತ್ತದೆ ಎಂಬ ನಂಬಿಕೆ ನಮ್ಮದಾಗಿದೆ. ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಂಧ್ಯಾ ವಿ. ಶೆಟ್ಟಿ ಮತ್ತು ಮಹಿಳಾ ವಿಭಾಗದ ಸರ್ವ ಸದಸ್ಯರ ಗೌರವಕ್ಕಾಗಿ ವಂದನೆಗಳು. ಯಾವಾಗ ಈ  ಭವನ ನಿರ್ಮಾಣವಾಗಿ ಲೋಕಾರ್ಪಣೆಯಾಗಿದೆಯೋ ಆ ದಿನವೇ ನನಗೆ ಜೀವನದ ದೊಡ್ಡ ಸಮ್ಮಾನ ಸಂದಂತಾಗಿದೆ. ಅದಕ್ಕಿಂತ ದೊಡ್ಡ ಸಮ್ಮಾನ ಯಾ ವುದೂ ಇಲ್ಲ.   ಸಂಘದ ಮಾಜಿ ಅಧ್ಯಕ್ಷರಾದ ಗುಂಡೂರಾಜ್‌ ಶೆಟ್ಟಿಯವರು ಸಮಾಜದ ಅತ್ಯುತ್ತಮ ನಾಯಕತ್ವದ ಗುಣವುಳ್ಳವರಾಗಿದ್ದರು. ಅವರ ದೊಡ್ಡ ಕನಸು ಪುಣೆ ಬಂಟರ ಭವನದ ಕನಸಾಗಿತ್ತು. ಅವರು ಬಂಟರ ಸಂಘದಲ್ಲಿ ಇಲ್ಲದಿದ್ದರೆ ಬಹುಷಃ ಈ ಭವನದ ಕಾರ್ಯ ಅಸಾಧ್ಯವಾಗುತ್ತಿತ್ತು. ಅವರು ಇಂದು ನಮ್ಮೊಂದಿಗಿಲ್ಲದಿದ್ದರೂ ಅವರನ್ನು ಇಂದು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಅವರ ಧರ್ಮಪತ್ನಿ ಯಶೋದಾ ಜಿ ಶೆಟ್ಟಿಯವರು ಇಂದಿನ ಕಾರ್ಯಕ್ರಮದಲ್ಲಿರುವುದು ನಮಗೆ ಹೆಮ್ಮೆಯಾಗಿದೆ.  ಅದೇ ರೀತಿ  ಉಪಸ್ಥಿತರಿದ್ದ   ಶ್ರೀಧರ ಶೆಟ್ಟಿಯವರೂ ಸರಳ, ಸಜ್ಜನ ವ್ಯಕ್ತಿತ್ವದ ಉದ್ಯಮಿಯಾಗಿದ್ದು  ಭವನಕ್ಕೆ ದೊಡ್ಡ  ದೇಣಿಗೆ ನೀಡಿದ ಮಹಾನುಭಾವರಾಗಿ¨ªಾರೆ. ಅವರನ್ನೂ  ಸಂದರ್ಭದಲ್ಲಿ ಅಭಿನಂದಿಸುತ್ತೇನೆ ಎಂದರು.

ಸಂಘದ ಮಹಿಳಾ ವಿಭಾಗ, ಯುವ ವಿಭಾಗದ ಸದಸ್ಯರು ಆಕರ್ಷಕ ದಾಂಡಿಯಾ ನೃತ್ಯ ಪ್ರದರ್ಶಿಸಿದರು. ನಂತರ ಸೇರಿದ್ದ ಸಮಾಜ ಬಾಂಧವರೆಲ್ಲರೂ ದಾಂಡಿಯಾ ನೃತ್ಯಕ್ಕೆ ಹೆಜ್ಜೆ ಹಾಕಿದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.   ಕಾರ್ಯಕ್ರಮವನ್ನು ಸುಲತಾ ಎಸ್‌. ಶೆಟ್ಟಿ ಹಾಗೂ ಕಾಂತಿ ಸೀತಾರಾಮ ಶೆಟ್ಟಿ ನಿರೂಪಿಸಿದರು. ಅತಿಥಿಗಳನ್ನು ಸತ್ಕರಿಸಲಾಯಿತು. ಉಪಸ್ಥಿತರಿದ್ದ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರುಗಳನ್ನು ಸತ್ಕರಿಸಲಾಯಿತು. ನೂರಾರು ಸಂಖ್ಯೆಯಲ್ಲಿ ಸಮಾಜ ಬಾಂಧವರು ಉಪಸ್ಥಿತರಿದ್ದರು.  

Advertisement

ನವರಾತ್ರಿ ಉತ್ಸವದ ಈ ದಿನದಂದು ಸಮಾಜ ಬಾಂಧವ ರೊಂದಿಗೆ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆನಂದವಾಗುತ್ತಿದೆ. ಯಾವುದೇ ಶುಭ ಕಾರ್ಯಕ್ಕೆ ಯೋಗ ಭಾಗ್ಯ ಒದಗಿ ಬರಬೇಕೆಂಬ ಅಂಬೋಣ ದಂತೆ  ಸಂತೋಷ್‌ ಶೆಟ್ಟಿಯವರ ನೇತೃತ್ವದಲ್ಲಿ  ಪುಣೆ  ಬಂಟರ  ಭವನ ನಿರ್ಮಾಣಗೊಂಡು ಸಂಘದ ಇತಿಹಾಸ ನಿರ್ಮಿಸಿದಂತಾಗಿದೆ. ಸಂಘದ ಮಾಜಿ ಅಧ್ಯಕ್ಷರಾಗಿದ್ದ ದಿ| ಗುಂಡೂ ರಾಜ್‌ ಶೆಟ್ಟಿಯವರಿಗೆ ನಮ್ಮ ಸಂಘದ ಭವನ ಆಗಬೇಕೆಂಬ ಅದಮ್ಯ ಬಯಕೆ ಇತ್ತು. ಆದರೆ ಅವರ ಸಂದರ್ಭದಲ್ಲಿ ಅದು ನೆರವೇರದಿ ದ್ದರೂ ಇದೀಗ ಪೂರ್ಣಗೊಂಡಿದ್ದು ಅವರ ಆತ್ಮಕ್ಕೆ ಸಂತೃಪ್ತಿ ಸಿಗಬಹುದಾಗಿದೆ.  ನಮ್ಮೆಲ್ಲ ಸಾಂಸ್ಕೃತಿಕ, ಧಾರ್ಮಿಕ   ಸಂಪೂರ್ಣ ಚಟು ವಟಿಕೆಗಳಿಗೆ ಯೋಗ್ಯವಾದ ಭವನ ನಮ್ಮ ದಾಗಿದೆ. ನವರಾತ್ರಿ ಉತ್ಸವದ ಸಂದರ್ಭ ನವದುರ್ಗೆಯರು ಸಮಾಜ ಬಾಂಧವರೆಲ್ಲ ರಿಗೂ ಆಯುರಾರೋಗ್ಯ ಸುಖ ಸಂಪತ್ತನ್ನು ದಯಪಾಲಿಸಲಿ. ಭವಿಷ್ಯದಲ್ಲಿ ಸಂಘ ಉತ್ತರೋತ್ತರ ಯಶಸ್ಸನ್ನು ಕಾಣಲಿ.
  – ಸದಾನಂದ ಕೆ. ಶೆಟ್ಟಿ, ಅಧ್ಯಕ್ಷರು, ಶ್ರೀ ಗುರುದೇವಾ ಸೇವಾ ಬಳಗ ಪುಣೆ

ಚಿತ್ರ-ವರದಿ : ಕಿರಣ್‌ ಬಿ. ರೈ ಕರ್ನೂರು

Advertisement

Udayavani is now on Telegram. Click here to join our channel and stay updated with the latest news.

Next