Advertisement
ಇದು ಗುಬ್ಬಚ್ಚಿ ಗಾತ್ರದ ಚಿಕ್ಕ ಹಕ್ಕಿ.DUSKY CRAG MARMARTIN (Hirundo concolor ) R -Sparrow + ಕೋಟೆ ಕೊತ್ತಲು, ಹಾಳುಬಿದ್ದ ಕಟ್ಟಡ, ಕಲ್ಲು ಬಂಡೆಗಳ ಬಿರುಕು, ಪಾಳು ದೇವಾಲಯ, ಚರ್ಚುಗಳ ಗೋಡೆ ಸಂದಿನಲ್ಲಿಯೇ ಹೆಚ್ಚಾಗಿ ವಾಸಿಸುವುದರಿಂದ ಇದರ ವಾಸಸ್ಥಾನ ಇರುನೆಲೆ ಗಮನಿಸಿ ಇದಕ್ಕೆ ಪಾಳು ಅಂಬರಗುಬ್ಬಿ ಎಂದು ಕರೆಯಲಾಗಿದೆ. ಇದರ ದೇಹದ ಬಣ್ಣ ಕಪ್ಪು.
ಗುಬ್ಬಚ್ಚಿ ಗಾತ್ರದ ಈ ಚಿಕ್ಕ ಹಕ್ಕಿ 13 ಸೆಂ.ಮೀ ದಪ್ಪ ಇದೆ. ಇದಕ್ಕೆ ಮೀನಿನ ಬಾಲದಂತೆ ತ್ರಿಕೋನಾಕೃತಿಯ ಬಾಲ ಇದೆ. ಬಾಲದ ಬದಿಯಗರಿ ಮತ್ತು ಮಧ್ಯದ ಗರಿಗಳ ಮೇಲೆ ಬಿಳಿ ಚುಕ್ಕೆ ಇಲ್ಲ. ತ್ರಿಕೋನಾಕಾರದ ಬಾಲದ ಇತರ ಗರಿಗಳ ಮೇಲೆ ವೃತ್ತಾಕಾರದ ಬಿಳಿ ಚುಕ್ಕೆ ಇದನ್ನು ಗುರುತಿಸಲು ಸಹಾಯಕವಾಗಿದೆ.
Related Articles
Advertisement
ಸುಮಾರು 1850ರಿಂದಲೇ ಈ ಹಕ್ಕಿಯ ಕುರಿತು ಅಧ್ಯಯನ ಆರಂಭವಾಗಿದೆ. ಇದರ ಗೂಡು ಹೊರಗಡೆ ಮಣ್ಣಿನ ಮುತ್ತನ್ನು -ಒಂದರ ಪಕ್ಕ ಒಂದು ಅಂಟಿಸಿದಂತೆ ಕಾಣುತ್ತದೆ. ಇದರ ಗೂಡು ತಾರಸಿಗೆ ಮುಖವಾಗಿ ಪಕ್ಕದ ಜಂತಿಯ ಹತ್ತಿರ ಒಂದು ಅಥವಾ 2 ಇಂಚು ಕೆಳಗಿರುತ್ತದೆ.
ಇಂಥದ್ದನ್ನೇ ಹೋಲುವ ಇನ್ನೊಂದು ತಳಿ ಭಾರತಕ್ಕೆ ಚಳಿಗಾಲದಲ್ಲಿ ವಲಸೆಬರುತ್ತದೆ. ಭಾರತದ ತಳಿ ಚೀ, ಚೀ, ಚಿರಮ್ ಎಂದು ಚೀರಿದಂತೆ ಮೆಲುದನಿಯಲ್ಲಿ ಕೂಗುತ್ತದೆ. ಮರಿಮಾಡುವ ಸಮಯದಲ್ಲಿ ತನ್ನ ಸಂಗಾತಿಯನ್ನು ಕರೆಯಲು ಇದು ಚೀ ಕಾರದಲ್ಲಿ ಕೂಗುವುದು. ಮಣ್ಣಿನ ಅರ್ಧವರ್ತುಲಾಕಾರದ ಗೂಡು ಕಟ್ಟಿ ಅದರ ಮೇಲೆ ಹಕ್ಕಿಗಳ ಪುಕ್ಕ ಮತ್ತು ಒಣ ಹುಲ್ಲಿನ ಹಾಸಿಗೆ ಮಾಡಿ ಅಲ್ಲಿ 2-4 ಬಿಳಿಬಣ್ಣದ ಮೊಟ್ಟೆ ಇಡುತ್ತದೆ. ನೆಲದಿಂದ ಸುಮಾರು 30 ಅಡಿ ಎತ್ತರದಲ್ಲಿ ಇದು ಗೂಡನ್ನು ಕಟ್ಟುತ್ತದೆ. ಇದರ ಗೂಡಿನ ಬಾಯಿ 13 ಎಂ.ಎಂ ಅಗಲ ಇರುತ್ತದೆ. ಇದರ ಮೊಟ್ಟೆ 1.57ಗ್ರಾಂ. ಗಂಡು -ಹೆಣ್ಣು ಆಕಾರ ಮತ್ತು ಬಣ್ಣದಲ್ಲಿ ಒಂದೇರೀತಿಯಾಗಿರುತ್ತದೆ. ಗೂಡು ಕಟ್ಟುವುದು ಮರಿಗಳಿಗೆ ಗುಟುಕು ನೀಡುವುದು ಮುಂತಾದ ಕಾರ್ಯದಲ್ಲಿ ಗಂಡು-ಹೆಣ್ಣು ಭಾಗಿಯಾಗುತ್ತವೆ. ಒಂದು ಅಧ್ಯಯನದ ಪ್ರಕಾರ 60 ಸಾವಿರ ಕಿ,ಮೀ ದೂರವನ್ನು ಇದು ನಿಲ್ಲದೇ ಹಾರುವ ಸಾಮರ್ಥಯಹೊಂದಿದೆಯಂತೆ. ಕರ್ನಾಟಕವಷ್ಟೇ ಅಲ್ಲ, ತಮಿಳು ನಾಡಿನಲ್ಲೂ ಈ ಹಕ್ಕಿ ಇದೆ.