Advertisement

ಆರ್ ಸಿಬಿ ಪರ ಆಡಲು ಹಸರಂಗ ಮತ್ತು ಚಮೀರಾಗೆ ಗ್ರೀನ್ ಸಿಗ್ನಲ್ ನೀಡಿದ ಲಂಕಾ ಕ್ರಿಕೆಟ್

05:05 PM Aug 29, 2021 | Team Udayavani |

ಕೊಲಂಬೋ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಆಡಲು ವಾನಿಂದು ಹಸರಂಗ ಮತ್ತು ದುಷ್ಮಂತ ಚಮೀರ ಅವರಿಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಒಪ್ಪಿಗೆ ನೀಡಿದೆ. ಈ ಇಬ್ಬರು ಆಟಗಾರರು ಆರ್ ಸಿಬಿ ಪರ ಆಡಲಿದ್ದಾರೆ.

Advertisement

14ನೇ ಆವೃತ್ತಿಯ ಐಪಿಎಲ್ ನ ಮುಂದುವರಿದ ಭಾಗ ಯುಎಇ ನಲ್ಲಿ ನಡೆಯಲಿದೆ. ಕೋವಿಡ್ ಕಾರಣದಿಂದ ಮುಂದೂಡಿಕೆಯಾಗಿದ್ದ ಐಪಿಎಲ್ ಕೂಟ ಸೆ.19ರಂದು ಪುನರಾರಂಭವಾಗಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಡೇನಿಯಲ್ ಸ್ಯಾಮ್ಸ್ ಮತ್ತು ಆಡ್ಯಂ ಜಂಪಾ ಅವರು ಐಪಿಎಲ್ ಮುಂದಿನ ಭಾಗದಲ್ಲಿ ಆಡದ ಕಾರಣ ಅವರ ಬದಲಿಗೆ ಶ್ರೀಲಂಕಾದ ದುಷ್ಮಂತ ಚಮೀರಾ ಮತ್ತು ವಾನಿಂದು ಹಸರಂಗ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಇದೀಗ ಲಂಕಾ ಕ್ರಿಕೆಟ್ ಮಂಡಳಿಯೂ ಈ ಇಬ್ಬರು ಆಟಗಾರರಿಗೆ ಗ್ರೀನ್ ಸಿಗ್ನಲ್ ನೀಡಿದೆ.

ಇದನ್ನೂ ಓದಿ:ಸೋಲಿನ ನಡುವೆ ಮತ್ತೊಂದು ಆಘಾತ: ಗಾಯಗೊಂಡು ಆಸ್ಪತ್ರೆ ಸೇರಿದ ರವೀಂದ್ರ ಜಡೇಜಾ

ಕಳೆದ ತಿಂಗಳು ನಡೆದ ಭಾರತ ಮತ್ತು ಶ್ರೀಲಂಕಾ ನಡುವಿನ ಸೀಮಿತ ಓವರ್ ಗಳ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next