ಗಂಗಾವತಿ: ಮನಸ್ಸೊಂದಿದ್ದರೆ ಎಲ್ಲವೂ ಸಾಧ್ಯ ಎಂಬುದನ್ನು ನಗರದ ಸಮಾನ ಮನಸ್ಕರರು ನಗರದ ಮಧ್ಯೆದಲ್ಲಿ ಹರಿಯುವ ದುರುಗಮ್ಮನಹಳ್ಳ ಸ್ವಚ್ಛತೆ ಮಾಡುವ ಮೂಲಕ ಸಾಬೀತು ಮಾಡಿದ್ದಾರೆ.
ಅಮೃತ ಸಿಟಿ ಯೋಜನೆಯಡಿ ದುರುಗಮ್ಮನ ಹಳ್ಳಕ್ಕೆ ಎರಡು ಕಡೆ ಗೋಡೆ ನಿರ್ಮಿಸಿ ವಾಹನ ನಿಲುಗಡೆ ಮಾಡುವ ಉದ್ದೇಶ ಹೊಂದಲಾಗಿತ್ತು. ಗೋಡೆ ನಿರ್ಮಾಣ ಅವೈಜ್ಞಾನಿಕವಾಗಿದ್ದು, ಹಳ್ಳದ ಜಾಗವನ್ನು ಒತ್ತುವರಿ ಮಾಡುವ ಅವಕಾಶವಿದ್ದು ಅಮೃತ ಸಿಟಿ ಯೋಜನೆ ಮಾರ್ಪಾಡು ಮಾಡುವಂತೆ ಸಮಾನ ಮನಸ್ಕರು ಮಾಡಿದ್ದಾರೆ. ಇದಕ್ಕೆ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಸ್ಪಂದಿಸಿ. ಹಳಕ್ಕೆ ಗೋಡೆ ನಿರ್ಮಾಣ ಸದ್ಯಕ್ಕೆ ಬೇಡ. ಯೋಜನೆ ನೀಲ ನಕ್ಷೆ ಮರು ಪರಿಶೀಲಿಸಿ ಹಳ್ಳದ ಜಾಗವನ್ನು ಒತ್ತುವರಿ ಮಾಡದಂತೆ ತಡೆಯಲು ಗೋಡೆ ನಿರ್ಮಾಣ ಮಾಡಲು ನೀಲ ನಕ್ಷೆ ಬದಲಿಸುವಂತೆ ಹಾಗೂ ಹಳ್ಳದ ಎರಡು ಕಡೆ ಚರಂಡಿ ನೀರು ಹೋಗಲು ಮಧ್ಯೆದಲ್ಲಿ ಹಳ್ಳದ ನೀರು ಹರಿಸುವಂತೆ ಯೋಜನೆ ರೂಪಿಸಲು ಸೂಚನೆ ನೀಡಿದ್ದಾರೆ. ಮೊದಲ ಹಂತದಲ್ಲಿ ಹಳ್ಳದ ಸ್ವಚ್ಛತೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಸಂಘಟಕರು ಯಶಸ್ವಿಯಾಗಿದ್ದಾರೆ. ‘ನಮ್ಮ ಊರು ನಮ್ಮ ಹಳ್ಳ’ ಸಮಾನ ಮನಸ್ಕರ ತಂಡಕ್ಕೆ ಇನ್ನಷ್ಟು ಸಂಘಟನೆಗಳು ಸೇರಬೇಕಾದ ಅಗತ್ಯವಿದೆ. ಎಲ್ಲರ ಕೈ ಜೋಡಿಸಿದಾಗ ಮಾತ್ರ ಉದ್ದೇಶ ಈಡೇಲು ಸಾಧ್ಯ.
15 ದಿನಗಳ ಹಿಂದೆ ದುರುಗಮ್ಮನಹಳ್ಳ ಸ್ವಚ್ಛ ಮಾಡುವ ಕುರಿತು ಸಮಾನ ಮನಸ್ಕರ ಜೊತೆ ಚರ್ಚಿಸಿದಾಗ ಉತ್ತಮ ಸ್ಪಂದನೆ ಬಂತು. ಮೊದಲ ಹಂತದಲ್ಲಿ ಬಂಬೂ ಬಜಾರ್ ಹತ್ತಿರ ಸ್ವಚ್ಚತಾ ಕಾರ್ಯ ಮಾಡಲಾಗಿದೆ. ಪ್ಲಾಸ್ಟಿಕ್, ತ್ಯಾಜ್ಯ ಹೊರ ತೆಗೆಯಲಾಗಿದೆ. ಪ್ಲಾಸ್ಟಿಕ್ ಬಳಕೆ ಮಾಡದಂತೆ ಸ್ಥಳೀಯರಿಗೆ ಜಾಗೃತಿ ಮೂಡಿಸಲಾಗಿದೆ. ನೂರಾರು ಜನರ ಸಹಕಾರದಿಂದ ಮೊದಲ ಹಂತದ ಕಾರ್ಯ ಮುಗಿದಿದೆ. ಮುಂದಿನ ದಿನಗಳಲ್ಲಿ ಇಡೀ ಹಳ್ಳ ಸ್ವಚ್ಛಗೊಳಿಸಲಾಗುತ್ತದೆ. ಅಮೃತಸಿಟಿ ಯೋಜನೆಯಡಿ ಕೈಗೆತ್ತಿಕೊಂಡಿರುವ ಹಳ್ಳದ ಗೋಡೆ ವೈಜ್ಞಾನಿಕವಾಗಿ ನಿರ್ಮಿಸಬೇಕು.
•ಡಾ| ಶಿವಕುಮಾರ ಮಾಲೀಪಾಟೀಲ್ ಸಂಚಾಲಕರು ನಮ್ಮ ಊರು ನಮ್ಮ ಹಳ್ಳ
•ಕೆ. ನಿಂಗಜ್ಜ
Advertisement
ಹೌದು. ಹಳ್ಳದಲ್ಲಿದ್ದ ಪ್ಲಾಸ್ಟಿಕ್ ಹಾಗೂ ತ್ಯಾಜ್ಯವನ್ನು ಸ್ವಚ್ಛ ಮಾಡುವ ಮೂಲಕ ನಗರದ ಸಮಾನ ಮನಸ್ಕರರು ಮಾದರಿಯಾಗಿದ್ದಾರೆ. ಮಠಾಧಿಧೀಶರು, ವೈದ್ಯರು, ವ್ಯಾಪಾರಸ್ಥರು, ನಿವೃತ್ತ ನೌಕರರು, ಶಿಕ್ಷಕರು, ಯುವಕರು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಈ ಸಾರ್ಥಕ ಕಾರ್ಯ ಮಾಡಿದ್ದಾರೆ. ಮೊದಲ ಹಂತದಲ್ಲಿ ದುರುಗಮ್ಮನಹಳ್ಳದಲ್ಲಿ ಸಂಗ್ರಹವಾಗಿದ್ದ ಘನತ್ಯಾಜ್ಯವನ್ನು ಸ್ವಚ್ಛ ಮಾಡಲಾಗಿದೆ. 15 ವರ್ಷಗಳಿಂದ ಗಬ್ಬೆದ್ದಿದ್ದ ಹಳ್ಳಕ್ಕೆ ಮರು ಜೀವ ಬಂದಿದೆ. ಹಳ್ಳದ ದಂಡೆಯಲ್ಲಿ ಬೆಳೆದಿದ್ದ ಬಳ್ಳಾರಿ ಜಾಲಿ ಸೇರಿ ಕಸವನ್ನು ತೆರವುಗೊಳಿಸಲಾಗಿದೆ. ನಗರದಲ್ಲಿ ಉತ್ಪನ್ನವಾಗುವ ತ್ಯಾಜ್ಯವನ್ನು ನಗರಸಭೆ ಸಿಬ್ಬಂದಿ ಹಳ್ಳಕ್ಕೆ ಹಾಕಿದ್ದನ್ನು ಅಧಿಕಾರಿಗಳ ಗಮನಕ್ಕೆ ತಂದು ಕಸವನ್ನು ಪುನಃ ಮಲಕನಮರಡಿ ಯಾರ್ಡ್‌ಗೆ ರವಾನಿಸಲಾಗಿದೆ. ಹಳ್ಳಕ್ಕೆ ಕೊಳೆತ ತರಕಾರಿ ಮತ್ತು ಉಳಿದ ಆಹಾರ ಪಾದಾರ್ಥಗಳನ್ನು ಸುರಿಯದಂತೆ ಜಾಗೃತಿ ಮೂಡಿಸಲಾಗಿದೆ. ನಗರದ ಸುಮಾರು 32ಕ್ಕೂ ಅಧಿಕ ಚರಂಡಿಗಳ ನೀರನ್ನು ನೇರವಾಗಿ ದುರುಗಮ್ಮನಹಳ್ಳಕ್ಕೆ ಹರಿಸುವ ಕುರಿತು ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದು, ಪರ್ಯಾಯ ವ್ಯವಸ್ಥ ಕಲ್ಪಿಸಲು ಅಮೃತ ಸಿಟಿ ಯೋಜನೆಯಡಿ ಕಾಮಗಾರಿ ಕೈಗೊಳ್ಳಲು ಸೂಚನೆ ನೀಡಿದ್ದಾರೆ.
•ಡಾ| ಶಿವಕುಮಾರ ಮಾಲೀಪಾಟೀಲ್ ಸಂಚಾಲಕರು ನಮ್ಮ ಊರು ನಮ್ಮ ಹಳ್ಳ
Related Articles
Advertisement