Advertisement

ಡರ್ಬನ್‌ ಟೆಸ್ಟ್‌: ಲಂಕೆಗೆ 304 ರನ್‌ ಸವಾಲು

12:30 AM Feb 16, 2019 | Team Udayavani |

ಡರ್ಬನ್‌: ದಕ್ಷಿಣ ಆಫ್ರಿಕಾ ಎದುರಿನ ಡರ್ಬನ್‌ ಟೆಸ್ಟ್‌ ಪಂದ್ಯದಲ್ಲಿ ಶ್ರೀಲಂಕಾ 304 ರನ್ನುಗಳ ಗೆಲುವಿನ ಗುರಿ ಪಡೆದಿದೆ. ಶುಕ್ರವಾರದ ಆಟ ಬೆಳಕಿನ ಅಭಾವದಿಂದ ಬೇಗನೆ ಕೊನೆಗೊಂಡಾಗ ಲಂಕಾ 3 ವಿಕೆಟಿಗೆ 83 ರನ್‌ ಗಳಿಸಿತ್ತು. 44 ರನ್ನುಗಳ ಅಲ್ಪ ಮುನ್ನಡೆ ಬಳಿಕ ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ ದಕ್ಷಿಣ ಆಫ್ರಿಕಾ 259 ರನ್ನುಗಳಿಗೆ ಆಲೌಟ್‌ ಆಯಿತು. ನಾಯಕ ಡು ಪ್ಲೆಸಿಸ್‌ 90, ಕೀಪರ್‌ ಡಿ ಕಾಕ್‌ 55 ರನ್‌ ಹೊಡೆದು ತಂಡವನ್ನು ಆಧರಿಸಿದರು. ಲಂಕಾ ಪರ ಲಸಿತ್‌ ಅಂಬುಲೆನಿಯ 5, ವಿಶ್ವ ಫೆರ್ನಾಂಡೊ 4 ವಿಕೆಟ್‌ ಹಾರಿಸಿದರು. ಪಂದ್ಯವಿನ್ನೂ 2 ದಿನ ಕಾಣಲಿಕ್ಕಿದ್ದು, ಉಳಿದ 7 ವಿಕೆಟ್‌ಗಳ ನೆರವಿನಿಂದ 221 ರನ್‌ ಗಳಿಸಬೇಕಾದ ಸವಾಲು ಶ್ರೀಲಂಕಾ ಮುಂದಿದೆ.

Advertisement

ಸಂಕ್ಷಿಪ್ತ ಸ್ಕೋರ್‌: ದಕ್ಷಿಣ ಆಫ್ರಿಕಾ-235 ಮತ್ತು 259. ಶ್ರೀಲಂಕಾ-191 ಮತ್ತು 3 ವಿಕೆಟಿಗೆ 83.

Advertisement

Udayavani is now on Telegram. Click here to join our channel and stay updated with the latest news.

Next