Advertisement

ನಕಲಿ ಅಂಕಪಟ್ಟಿ: ಪರಾರಿಗೆ ಯತ್ನ !

10:00 AM Dec 24, 2021 | Team Udayavani |

ಬೆಂಗಳೂರು: ನಕಲಿ ಅಂಕಪಟ್ಟಿ ಸೃಷ್ಟಿಸಿ ವಿದ್ಯಾರ್ಥಿ ವೀಸಾದಡಿ ವಿದೇಶಕ್ಕೆ ಪರಾರಿಯಾಗಲು ಯತ್ನಿಸಿದ್ದ ಏಜೆಂಟ್‌ ಸೇರಿ ಇಬ್ಬರು ಆರೋಪಿಗಳನ್ನು ಏರ್‌ ಪೋರ್ಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಕೇರಳ ಮೂಲದ ವಿದ್ಯಾರ್ಥಿ ಸೋಜು ಹಾಗೂ ನಕಲಿ ಅಂಕಪಟ್ಟಿ ಜಾಲದ ಪ್ರಮುಖ ಆರೋಪಿ ಅನುರಾಗ್‌ ಎಂಬವರನ್ನು ಬಂಧಿಸಲಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎಮಿಗ್ರೇಷನ್‌ ಅಧಿಕಾರಿ ದೇವೇಂದ್ರಕುಮಾರ್‌ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ. ನಕಲಿ ಅಂಕಪಟ್ಟಿ ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳು ಭಾಗಿಯಾಗಿರುವುದಾಗಿ ಬಂಧಿತ ಆರೋಪಿಗಳು ಮಾಹಿತಿ ನೀಡಿದ್ದಾರೆ.

ಹಾಗಾಗಿ, ಅವರ ಮಾಹಿತಿ ಆಧರಿಸಿ ಆರೋಪಿಗಳ ಬಂಧನಕ್ಕೆ ವಿಶೇಷ ತಂಡವೊಂದು ಕೇರಳಕ್ಕೆ ತೆರಳಿದೆ. ಶೀಘ್ರದಲ್ಲೇ ಆ ಆರೋಪಿಗಳನ್ನು ಬಂಧಿಸಲಾಗು ವುದುದು ಎಂದು ಈಶಾನ್ಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ತಿಳಿಸಿದರು.

ವಿದೇಶಕ್ಕೆ ಹಾರಲು ಯತ್ನ: ಸೋಜು ಇಂಗ್ಲೆಂಡ್‌ಗೆ ತೆರಳಿ ಕೆಲಸ ಮಾಡಲು ಇಚ್ಚಿಸಿದ್ದ. ಹಾಗಾಗಿ, ವಿದ್ಯಾರ್ಥಿ ವೀಸಾದಡಿ ವಿದೇಶಕ್ಕೆ ಹೋಗಲು ಮುಂದಾಗಿದಲ್ಲದೆ, ನಕಲಿ ಅಂಕಪಟ್ಟಿ ಪಡೆದುಕೊಂಡು ವೀಸಾ ಪಡೆದುಕೊಂಡಿದ್ದ. ಅಲ್ಲದೇ, ಡಿ. 17ರಂದು ಕೆಂಪೇಗೌಡ ವಿಮಾನ ನಿಲ್ದಾಣದಿಂದ ಬ್ರಿಟಿಷ್‌ ಏರ್‌ವೆàಸ್‌ ವಿಮಾನದ ಮೂಲಕ ಯುಕೆಗೆ ತೆರಳಲು ಮುಂದಾಗಿದ್ದ. ಈ ವೇಳೆ ದಾಖಲಾತಿ ಪರಿಶೀಲನೆ ನಡೆಸುತ್ತಿದ್ದ ಎಮಿಗ್ರೇಷನ್‌ ಅಧಿಕಾರಿಗಳಿಗೆ ಅನುಮಾನ ಬಂದು ವಿಚಾರಣೆ ನಡೆಸಿದ್ದಾರೆ.

ನಕಲಿ ಸಹಿ, ಸೀಲ್‌ ವಶಕ್ಕೆ

Advertisement

ಬಂಧಿತ ಆರೋಪಿ ಟ್ರೂ ವೇ ಗ್ಲೋಬಲ್‌ ಎಜುಕೇಷನ್‌ ಇನ್‌ಸ್ಟಿಟ್ಯೂಟ್‌ ಹೆಸರಿನಲ್ಲಿ ನಕಲಿ ಅಂಕಪಟ್ಟಿ ತಯಾರಿಸುವ ವ್ಯವಹಾರ ನಡೆಸುತ್ತಿದ್ದ. ಹಣ ನೀಡಿದರೆ ನಕಲಿ ಅಂಕಪಟ್ಟಿ ಸೃಷ್ಟಿಸಿ ಕೊಡುವ ಏಜೆಂಟ್‌ ಆಗಿ ಗುರುತಿಸಿಕೊಂಡಿದ್ದ. ಈತ ಕೇವಲ ರಾಜ್ಯ ವಿವಿಗಳಲ್ಲದೇ, ಅಂತಾರಾಜ್ಯ ವಿಶ್ವವಿದ್ಯಾಲಯಗಳ ನಕಲಿ ಅಂಕ ಪಟ್ಟಿಗಳನ್ನು ಸೃಷ್ಟಿಸುತ್ತಿದ್ದ.

ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಅಂಕಪಟ್ಟಿಗಳನ್ನು ನಕಲು ಮಾಡುತ್ತಿದ್ದ ಎಂದು ಡಿಸಿಪಿ ವಿವರಿಸಿ ದರು. ಆರೋಪಿಗಳು ಅಂಕಪಟ್ಟಿ ತಯಾ ರಿಸಲು ಬೇಕಾದ ವಿವಿ ಲಾಂಛನ ಮತ್ತು ವಿವಿ ಕುಲಪತಿಗಳ ನಕಲಿ ಸಹಿ, ಸೀಲ್‌ಗ‌ಳನ್ನು ಇಟ್ಟಿಕೊಂಡಿದ್ದರು ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next