Advertisement

ಹೌದು..ಈತ ಜೋಧಪುರದ ನಕಲಿ ಜೇಮ್ಸ್ ಬಾಂಡ್ ?

10:50 AM Aug 19, 2019 | sudhir |

ಜೋಧಪುರ : ಇಲ್ಲೊಂದು ಕುತೂಹಲದ ಕಥೆ ಇದೆ. ಅದೆಂದರೆ ರಾಜಸ್ತಾನದ ಜೋಧಪುರದಲ್ಲಿ ಪೊಲೀಸರು ಕಷ್ಟಪಟ್ಟು ಮೂರು ಮಂದಿ ಕಳ್ಳರನ್ನು ಹೆಡೆಮುರಿಕಟ್ಟಿ ತಂದರು. ವಿಚಾರಣೆಗೆ ಒಳಪಡಿಸಿದಾಗ ಬೆಳಕಿಗೆ ಬಂದ ಸಂಗತಿ ಕೇಳಿ ಪೊಲೀಸರೇ ಅರೆಕ್ಷಣ ಚಕಿತರಾದರು.

Advertisement

ಯಾಕೆ ಗೊತ್ತೇ? ಈ ಕಳ್ಳರು ತಮ್ಮ ಗ್ಯಾಂಗ್ಗೆ ಇಟ್ಟುಕೊಂಡ ಹೆಸರು 007. ಇದೇನು ಗೊತ್ತಲ್ಲ? ಪ್ರಖ್ಯಾತ ಜೇಮ್ಸ್ ಬಾಂಡ್ನ ಬ್ರ್ಯಾಂಡ್ ನೇಮ್. ಇಂಗ್ಲಿಷ್ ಪತ್ತೇದಾರಿ ಸಿನಿಮಾಗಳಿಗೆ ಒಂದು ಅದ್ಭುತ ಕಳೆ ಕಟ್ಟಿಕೊಟ್ಟವರು ಈ 007 ಬ್ರ್ಯಾಂಡ್ ನೇಮ್।

ಈ ಜೋಧಪುರದ ಕಳ್ಳರೂ ಇದೇ ಹೆಸರು ಇಟ್ಟುಕೊಂಡಿದ್ದರಂತೆ. ಕಳ್ಳರಿಂದ ಪಿಸ್ತೂಲು, ಕೆಲವು ವಿಡಿಯೋಗಳನ್ನು ವಶಪಡಿಸಿಕೊಂಡಿದ್ದಾರಂತೆ. ಇಷ್ಟರಲ್ಲೂ 007 ಎಂದು ಹೆಸರಿಟ್ಟಾತ ತಲೆ ಮರೆಸಿಕೊಂಡಿದ್ದಾನೆ. ಈಗ ನಕಲಿ ಜೇಮ್ಸ್ ಬಾಂಡ್ ನನ್ನು ಹುಡುಕಿಕೊಟ್ಟವರಿಗೆ 10 ಸಾವಿರ ರೂ. ಬಹುಮಾನ ಘೋಷಿಸಲಾಗಿದೆ.

ಜೇಮ್ಸ್ ಬಾಂಡ್ ಗಾಗಿ ಹುಡುಕಾಟ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next