“ಸಲಗ’ ಚಿತ್ರದ ಮೂಲಕ ನಿರ್ದೇಶನಕ್ಕಿಳಿದ “ದುನಿಯಾ’ ವಿಜಯ್ ತಮ್ಮ ಮೊದಲ ನಿರ್ದೇಶನದಲ್ಲೇ ಯಶಸ್ವಿ ಕಂಡವರು. ಅಂಡರ್‌ವರ್ಲ್ಡ್ ಹಿನ್ನೆಲೆಯಲ್ಲಿ ಮೂಡಿಬಂದ “ಸಲಗ’ ದೊಡ್ಡ ಹಿಟ್ ಆಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಮೂಲಕ ವಿಜಯ್ ಅವರಿಗೆ ಮತ್ತೂಮ್ಮೆ ಬ್ರೇಕ್ ನೀಡಿದ ಸಿನಿಮಾ ಕೂಡಾ “ಸಲಗ’. ಹಾಗಾದರೆ ವಿಜಯ್ ಮುಂದಿನ ಸಿನಿಮಾ ಯಾವಾಗ ಮತ್ತು ಯಾರು ನಿರ್ದೇಶಿಸುತ್ತಾರೆ ಎಂಬ ಕುತೂಹಲ ಸಹಜ. ಈಗ ಆ ಕುತೂಹಲಕ್ಕೆ ಉತ್ತರ ಸಿಗುವ ಸಮಯ ಬಂದಿದೆ.
ವಿಜಯ್ ತಮ್ಮ ನಟನೆಯ 28 ಸಿನಿಮಾವನ್ನು ಶಿವರಾತ್ರಿ ದಿನ ಅಂದರೆ ಮಾರ್ಚ್ 1 ರಂದು ಅನೌನ್ಸ್ ಮಾಡಲಿದ್ದಾರೆ. ಈಗಾಗಲೇ “ವಿಕೆ 28 ಟೈಟಲ್ ಲಾಂಚ್ ಪೋಸ್ಟರ್’ ಬಿಡುಗಡೆಯಾಗಿದ್ದು, ಮಾಸ್ ಪ್ರಿಯರ ಕುತೂಹಲ ಕೆರಳಿಸುತ್ತಿದೆ. ರಕ್ತಸಿಕ್ತ ಕೈ, ಯಮಹಾ ಬೈಕ್ .. ಸಿನಿಮಾದ ಬಗೆಗಿನ ಕುತೂಹಲ ಹೆಚ್ಚಿಸಿದೆ.
ಇದನ್ನೂ ಓದಿ:ಐಪಿಎಲ್ 2022: ನೂತನ ನಾಯಕನನ್ನು ನೇಮಿಸಿದ ಪಂಜಾಬ್ ಕಿಂಗ್ಸ್
ಎಲ್ಲಾ ಓಕೆ, ಈ ಸಿನಿಮಾವನ್ನು ಯಾರು ನಿರ್ದೇಶಿಸಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ “ದುನಿಯಾ’ ವಿಜಯ್. ತಮ್ಮ ನಟನೆಯ 28ನೇ ಸಿನಿಮಾವನ್ನು ಸ್ವತಃ ವಿಜಯ್ ಅವರೇ ನಿರ್ದೇಶಿಸಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಮಾರ್ಚ್ 1 ರಂದು ಹೊರಬೀಳಲಿದೆ.
Related Articles
ಅಂದಹಾಗೆ, ಈ ಚಿತ್ರವನ್ನು ಕೃಷ್ಣ ಸಾರ್ಥಕ್ ಹಾಗೂ ವಿತರಕ ಜಗದೀಶ್ ಗೌಡ ನಿರ್ಮಾಣ ಮಾಡುತ್ತಿದ್ದಾರೆ. ಕೃಷ್ಣ ಸಾರ್ಥಕ್ ಸದ್ಯ ಶಿವರಾಜ್‌ಕುಮಾರ್ ಅವರ “ಬೈರಾಗಿ’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಉಳಿದಂತೆ ಚಿತ್ರದ ತಾರಾಬಳಗ, ತಾಂತ್ರಿಕವರ್ಗದ ವಿವರ ಇನ್ನಷ್ಟೇ ಲಭ್ಯವಾಗಬೇಕಿದೆ. ಸದ್ಯ ವಿಜಯ್ ತೆಲುಗಿನ ಬಾಲಕೃಷ್ಣ ಅವರ ಸಿನಿಮಾದಲ್ಲಿ ವಿಲನ್ ಆಗಿ ನಟಿಸುತ್ತಿದ್ದಾರೆ.