Advertisement

ಮತ್ತೆ 2 ದಿನ ಜೈಲೇ ಗತಿ; ದುನಿಯಾ ವಿಜಯ್ ಜಾಮೀನು ತೀರ್ಪು ಅ.1ಕ್ಕೆ

03:46 PM Sep 29, 2018 | Team Udayavani |

ಬೆಂಗಳೂರು: ಜಿಮ್ ತರಬೇತುದಾರ ಮಾರುತಿಗೌಡ ಎಂಬಾತನನ್ನು ಅಪಹರಿಸಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ಸೇರಿ ನಾಲ್ವರು ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನಗರದ 70ನೇ ಸೆಷನ್ಸ್ ಕೋರ್ಟ್ ತೀರ್ಪನ್ನು ಅಕ್ಟೋಬರ್ 1ಕ್ಕೆ ಕಾಯ್ದಿರಿಸಿದೆ.

Advertisement

ನಟ ದುನಿಯಾ ವಿಜಯ್ ಗೆ ಜಾಮೀನು ಕೊಟ್ಟರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಹೀಗಾಗಿ ಜಾಮೀನು ನೀಡಬಾರದು ಎಂದು ಸರ್ಕಾರಿ ಅಭಿಯೋಜಕರು ಆಕ್ಷೇಪಣೆ ಸಲ್ಲಿಸಿದ್ದರು.

ಮತ್ತೊಂದೆಡೆ ದುನಿಯಾ ವಿಜಿ ಹಾಗೂ ಇತರರ ಮೇಲೆ ಪೊಲೀಸರು ಉದ್ದೇಶಪೂರ್ವಕ 326 ಕಲಂ ಅಡಿ ಪ್ರಕರಣ ದಾಖಲಿಸಿದ್ದು, ತಮ್ಮ ಕಕ್ಷಿದಾರರಿಗೆ ಜಾಮೀನು ನೀಡಬೇಕೆಂದು ವಿಜಿ ಪರ ವಕೀಲರು ವಾದ ಮಂಡಿಸಿದ್ದರು.

ವಾದ, ಪ್ರತಿವಾದ ಆಲಿಸಿದ ಬೆಂಗಳೂರು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಟಿಪಿ ರಾಮಲಿಂಗೇಗೌಡ ಅವರು ಜಾಮೀನು ಆದೇಶವನ್ನು ಅ.1ಕ್ಕೆ ಕಾಯ್ದಿರಿಸಿದರು. ಈ ನಿಟ್ಟಿನಿಲ್ಲಿ ದುನಿಯಾ ವಿಜಿ ಸೇರಿ ನಾಲ್ವರಿಗೆ ಜೈಲುವಾಸ ಮುಂದುವರಿದಂತಾಗಿದೆ.

ಕಿಡ್ನಾಪ್ ಮತ್ತು ಹಲ್ಲೆ ಪ್ರಕರಣದಲ್ಲಿ ಜಾಮೀನು ನೀಡುವಂತೆ ವಿಜಯ್ ಸೇರಿದಂತೆ ನಾಲ್ವರು ಆರೋಪಿಗಳು ಸಲ್ಲಿಸಿದ್ದ ಅರ್ಜಿಗಳನ್ನು 8ನೇ ಎಸಿಎಂಎಂ ನ್ಯಾಯಾಲಯ ವಜಾಗೊಳಿಸಿದ ಹಿನ್ನೆಲೆಯಲ್ಲಿ ಸೆಷನ್ಸ್ ಕೋರ್ಟ್ ಮೊರೆ ಹೋಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next