Advertisement

Duniya Vijay; ‘ಭೀಮ’ ಬಿಡುಗಡೆ ದಿನಾಂಕ ಘೋಷಣೆ

12:39 PM Jun 22, 2024 | Team Udayavani |

ದುನಿಯಾ ವಿಜಯ್‌ ನಟನೆಯ “ಭೀಮ’ ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎಂಬ ಕುತೂಹಲ ಪ್ರೇಕ್ಷಕರಲ್ಲಿತ್ತು. ಈಗ ಆ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಚಿತ್ರ ಆಗಸ್ಟ್‌ 9ರಂದು ತೆರೆಕಾಣುತ್ತಿದೆ. ಸ್ವತಃ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಘೋಷಿಸಿದೆ.

Advertisement

“ಸಲಗ’ ನಂತರ ಬರುತ್ತಿರುವ ವಿಜಯ್‌ ಸಿನಿಮಾ ಇದಾಗಿದ್ದು, ನಟನೆ ಜೊತೆ ನಿರ್ದೇಶನದ ಜವಾಬ್ದಾರಿ ಕೂಡಾ ವಿಜಯ್‌ ಅವರದ್ದು. ಚಿತ್ರದ “ಸೈಕ್‌’ ಹಾಡು ಬಿಡುಗಡೆಯಾಗಿ ಹಿಟ್‌ಲಿಸ್ಟ್‌ ಸೇರಿತ್ತು. ಇತ್ತೀಚೆಗೆ ಚಿತ್ರದ ಡ್ಯುಯೆಟ್‌ ಸಾಂಗ್‌ವೊಂದು ಬಿಡುಗಡೆಯಾಗಿದ್ದು, ಅದು ಕೂಡಾ ಹಿಟ್‌ಲಿಸ್ಟ್‌ ಸೇರಿದೆ. “ಐ ಲವ್‌ ಯೂ ಕಣೇ..’ ಎಂಬ ಡ್ಯುಯೆಟ್‌ ಹಾಡಿಗೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರೆಗ್ಯುಲರ್‌ ಶೈಲಿ ಬಿಟ್ಟು ತಯಾರಾಗಿರುವ ಈ ಹಾಡಿನ ಚಿತ್ರೀಕರಣವನ್ನು ವಿಭಿನ್ನವಾಗಿ ಮಾಡಲಾಗಿದೆ.

ಇನ್ನು, “ಭೀಮ’ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿದೆ. ಈ ಹಿಂದೆ ಬಿಡುಗಡೆಯಾಗಿರುವ ಭೀಮ ಟೀಸರ್‌ನಲ್ಲಿರುವ ಮಾಸ್‌ ಡೈಲಾಗ್‌, ವಿಜಯ್‌ ಶೈಲಿ ಸಿನಿಮಾ ಮೇಲಿನ ಕುತೂಹಲ ಹೆಚ್ಚಿಸಿರುವುದು ಸುಳ್ಳಲ್ಲ.

ಇನ್ನು, ವಿಜಯ್‌ ನಿರ್ದೇಶನ, ನಟನೆಯ “ಭೀಮ’ ಕೂಡಾ ಒಂದು ಗಂಭೀರ ಹಾಗೂ ಪ್ರೇಕ್ಷಕರಿಗೆ ಇಷ್ಟವಾಗುವ ವಿಷಯವನ್ನಿಟ್ಟುಕೊಂಡು ಮಾಡುತ್ತಿರುವ ಸಿನಿಮಾ ಎನ್ನಲಾಗಿದೆ. ಈ ಕಥೆಗಾಗಿ ಸುಮಾರು ಎಂಟು ತಿಂಗಳಿಗೂ ಹೆಚ್ಚು ತಮ್ಮನ್ನು ವಿಜಯ್‌ ತೊಡಗಿಸಿಕೊಂಡು, ಎಲ್ಲವನ್ನು ಪಕ್ಕಾ ಮಾಡಿಕೊಂಡಿದ್ದಾರೆನ್ನಲಾಗಿದೆ.

ಅಂದಹಾಗೆ, ಈ ಚಿತ್ರವನ್ನು ಕೃಷ್ಣ ಸಾರ್ಥಕ್‌ ಹಾಗೂ ವಿತರಕ ಜಗದೀಶ್‌ ಗೌಡ ನಿರ್ಮಾಣ ಮಾಡುತ್ತಿದ್ದಾರೆ. ಅಶ್ವಿ‌ನಿ ಎಂಬ ನವಪ್ರತಿಭೆ “ಭೀಮ’ನಿಗೆ ನಾಯಕಿಯಾಗಿದ್ದಾರೆ. ರಂಗಭೂಮಿ ಹಿನ್ನೆಲೆಯ ಅಶ್ವಿ‌ನಿಗೆ “ಭೀಮ’ ಚಿತ್ರದಲ್ಲಿ ನಾಯಕಿಯಾಗುವ ಅವಕಾಶ ಸಿಕ್ಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next