Advertisement

Dumping yard issue;ಕುಮಾರಸ್ವಾಮಿ ಬೆಂಗಳೂರು ಬಿಟ್ಟು ಬಿಡದಿಯಲ್ಲಿರಲಿ: ಬಾಲಕೃಷ್ಣ ತಿರುಗೇಟು

12:20 PM Oct 17, 2023 | Team Udayavani |

ರಾಮನಗರ: ಬಿಬಿಎಂಪಿ ‌ಕಸ ವಿಲೇವಾರಿ ವಿಚಾರ ಇದೀಗ ರಾಜಕೀಯ ತಿರುವು ಪಡೆಯುತ್ತಿದೆ. ಮಾಜಿ ಸಿಎಂ‌ ಎಚ್‌ ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ಮಾಗಡಿಯಲ್ಲಿ ಶಾಸಕ ಹೆಚ್‌.ಸಿ.ಬಾಲಕೃಷ್ಣ ತಿರುಗೇಟು ನೀಡಿದ್ದು, ಕುಮಾರಸ್ವಾಮಿ ಸಿಎಂ ಆಗಿದ್ದ ವೇಳೆ ಬಿಬಿಎಂಪಿ ಕಸ ವಿಲೇವಾರಿಗೆ ಪರಿಹಾರ ಹುಡುಕಬಹುದಿತ್ತು. ಈಗ ಬೆಂಕಿ ಹಚ್ಚುತ್ತೇನೆಂದರೆ ಹೇಗೆ ಎಂದು ಪ್ರಶ್ನಿಸಿದ್ದರು.

Advertisement

ಎಚ್.ಡಿ ಕುಮಾರಸ್ವಾಮಿ 20 ತಿಂಗಳು ಮುಖ್ಯಮಂತ್ರಿಯಾಗಿದ್ದರು. ಆಗ ಬಿಬಿಎಂಪಿ ಕಸ ವಿಲೇವಾರಿಗೆ ಏನು ಕ್ರಮ ಕೈಗೊಳ್ಳಲಿಲ್ಲ. ಈಗ ನಮ್ಮ ಸರಕಾರ ಬಿಬಿಎಂಪಿ ಕಸವನ್ನು ಬೆಂಗಳೂರು ಸಮೀಪದ ನಾಲ್ಕು ಕಡೆ ವಿಲೆವಾರಿ ಮಾಡಲು ಕ್ರಮ ಕೈಗೊಂಡಿದೆ. ಕಸವನ್ನು ಬಿಡದಿ ಸಮೀಪ ಹಾಕಬಾರದು ಎನ್ನುವುದಾದರೆ ಎಚ್‌ಡಿಕೆ ಕುಟುಂಬ ಬೆಂಗಳೂರು ಬಿಟ್ಟು ಗ್ರಾಮೀಣ ಪ್ರದೇಶಕ್ಕೆ ಬರಲಿ ಎಂದರು.

ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು. ಅವರಿಗೆ ಕನಿಷ್ಠ ಜ್ಞಾನ ಇದ್ದರೆ ಕಸ ವಿಲೇವಾರಿ ಬಗ್ಗೆ ಸರಕಾರದ ವಿರುದ್ದ ಮಾತನಾಡುತ್ತಿರಲಿಲ್ಲ. ಕಾಂಗ್ರೆಸ್ ಸರ್ಕಾರ ಬಿಬಿಎಂಪಿ ಕಸವನ್ನು ಹೊರಗಡೆ ಸಂಗ್ರಹಿಸಿ ಅದನ್ನು ಸಗ್ರಿಗೇಷನ್ ಮಾಡಿ ಗೊಬ್ಬರವನ್ನಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಲಿದೆ. ಇದಕ್ಕೆ ಪಕ್ಷಾತೀತವಾಗಿ ಎಚ್.ಡಿ.ಕುಮಾರಸ್ವಾಮಿ ಕೈ ಜೋಡಿಸಲಿ. ಇಲ್ಲದಿದ್ದರೆ ಬೆಂಗಳೂರು ಬಿಟ್ಟು ಬಿಡದಿಯಲ್ಲಿ ವಾಸಮಾಡಲಿ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ತಿರುಗೇಟು ನೀಡಿದರು.

ಗುತ್ತಿಗೆದಾರರ ಮನೆಯಲ್ಲಿ 42 ಕೋಟಿ ಸಿಕ್ಕಿರುವ ವಿಚಾರಕ್ಕೆ ತಿರುಗೇಟು ನೀಡಿರುವ ಅವರು, ನಮ್ಮ ಸರಕಾರದ ವಿರುದ್ಧ ಆರೋಪ ಮಾಡಿರುವುದು ದಾಖಲೆ ಸಮೇತ ಸಾಬೀತುಪಡಿಸಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next