Advertisement

‘King of Kotha’ trailer: ʼಕೋಥಾʼ ಎಂಬ ಊರಿನಲ್ಲಿ ಗ್ಯಾಂಗ್‌ಸ್ಟರ್‌ ಆಗಿ ಮೆರೆದ ದುಲ್ಕರ್

01:41 PM Aug 10, 2023 | Team Udayavani |

ಮುಂಬಯಿ: ಮಲಯಾಳಂ ಸ್ಟಾರ್‌ ದುಲ್ಕರ್‌ ಸಲ್ಮಾನ್‌ ಅವರ ಡ್ರೀಮ್‌ ಪ್ರಾಜೆಕ್ಟ್‌ ʼಕಿಂಗ್‌ ಆಫ್‌ ಕೋಥಾʼ ಚಿತ್ರದ ಅಧಿಕೃತ ಟ್ರೇಲರ್‌ ರಿಲೀಸ್‌ ಆಗಿದೆ. ತನ್ನ ಒಂದು ಪುಟ್ಟ ಟೀಸರ್‌ ನಿಂದಲೇ ಹೈಪ್‌ ಹೆಚ್ಚಿಸಿದ್ದ ದುಲ್ಕರ್‌ ಸಲ್ಮಾನ್‌ ಅವರ ʼಕಿಂಗ್‌ ಆಫ್‌ ಕೋಥಾʼ ನಿರೀಕ್ಷೆಯಂತೆ ಪವರ್‌ ಫುಲ್‌ ಟ್ರೇಲರ್‌ ನಿಂದ ಮಾಸ್‌ ಪ್ರೇಕ್ಷಕರ ಮನಗೆದ್ದಿದೆ. ರೆಟ್ರೋ ಸ್ಟೈಲ್‌ ನಲ್ಲಿ ಗ್ಯಾಂಗ್‌ಸ್ಟರ್‌ ಲುಕ್‌ ನಲ್ಲಿ ‘ಚಾರ್ಲಿʼ ಮಿಂಚಿದ್ದಾರೆ.

Advertisement

‘ಕೋಥಾʼ ಎನ್ನುವ ಒಂದು ಊರಿನಲ್ಲಿ ನಡೆಯುವ ಕಥೆ ಇದಾಗಿದ್ದು, ಈ ಊರಿನಲ್ಲೇ ಇರುವ ಗ್ಯಾಂಗ್ ಸ್ಟರ್‌ ರಾಜು ( ದುಲ್ಕರ್)‌ ಅವರ ಸುತ್ತ ಕಥೆ ಸಾಗುತ್ತದೆ. ಹಣಕಾಸಿನ ವ್ಯವಹಾರ, ಫುಟ್‌ ಬಾಲ್‌ ಗೇಮ್‌, ಪ್ರೀತಿ ಹಾಗೂ ಭಾವನಾತ್ಮಕವಾಗಿ ಸೆಳೆಯುವ ಕುಟುಂಬದ ಕೆಲ ಅಂಶವನ್ನು ಟ್ರೇಲರ್‌ ನಲ್ಲಿ ಕಥೆಯ ಎಳೆಯಾಗಿ ತೋರಿಸಲಾಗಿದೆ.

ದುಲ್ಕರ್‌ ಸಲ್ಮಾನ್‌ ಡಿಫ್ರೆಂಟ್‌ ಲುಕ್‌ ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಫೈಟ್‌, ಖದರ್‌ ಸಿನಿಮಾದ ಟ್ರೇಲರ್‌ ನಲ್ಲಿ ಹೈಲೈಟ್‌ ಆಗಿ ಕಾಣುತ್ತದೆ. ಬಿಜಿಎಂನೊಂದಿಗೆ ಬರುವ ಕೆಲ ಡೈಲಾಗ್ಸ್‌ ಗಳು ಸಿನಿಮಾದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.

ಇದನ್ನೂ ಓದಿ: Shruti Haasan: ಪ್ರಿಯಕರನ ಹೂಸು ನನ್ನಗಿಷ್ಟ ಎಂದ ನಟಿ ಶ್ರುತಿ ಹಾಸನ್.!‌

ಸಿನಿಮಾ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ರಿಲೀಸ್‌ ಆಗಲಿದ್ದು, ಶಾರುಖ್ ಖಾನ್, ಮೋಹನ್ ಲಾಲ್, ಸೂರ್ಯ ಹಾಗೂ ನಾಗಾರ್ಜುನ ಅವರು ಆಯಾ ಭಾಷೆಯಲ್ಲಿ ಟ್ರೇಲರ್‌ ರಿಲೀಸ್‌ ಮಾಡಿದರು.

Advertisement

ಈ ವೇಳೆ ಮಾತನಾಡಿದ ನಟ ದುಲ್ಕರ್‌ ʼʼಕಿಂಗ್‌ ಆಫ್‌ ಕೋಥಾʼ ಒಂದೊಳ್ಳೆಯ ಜರ್ನಿ. ಸಿನಿಮಾ ಗಮನ ಸೆಳೆಯುವ ಪಾತ್ರ ಹಾಗೂ ಉತ್ತಮವಾದ ಕಥೆಯನ್ನೊಳಗೊಂಡಿದೆ. ಮೊದಲ ಬಾರಿ ಜೀ ಸ್ಟುಡಿಯೋಸ್‌ ಜೊತೆ ಕೈಜೋಡಿಸುತ್ತಿರುವ ಬಗ್ಗೆ ಖುಷಿ ಇದೆ” ಎಂದು ಹೇಳಿದರು.

ಚಿತ್ರದಲ್ಲಿ ಪ್ರಸನ್ನನಾಗಿ ಶಾಹುಲ್ ಹಾಸನ್, ತಾರಾ ಪಾತ್ರದಲ್ಲಿ ಐಶ್ವರ್ಯ ಲಕ್ಷ್ಮಿ, ಮಂಜು ಪಾತ್ರದಲ್ಲಿ ನೈಲಾ ಉಷಾ, ರಂಜಿತ್ ಪಾತ್ರದಲ್ಲಿ ಚೆಂಬನ್ ವಿನೋದ್ ಜೋಸ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಖ್ಯಾತ ನಿರ್ದೇಶಕ ಜೋಶಿಯವರ ಪುತ್ರ ಅಭಿಲಾಷ್ ಜೋಶಿ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಇದೇ ಓಣಂ ಹಬ್ಬಕ್ಕೆ (ಆ.24 ರಂದು) ಸಿನಿಮಾ ತೆರೆಗೆ ಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next