Advertisement

Duleep Trophy: ಪ್ರಥಮ್‌ ಸಿಂಗ್‌, ತಿಲಕ್‌ ವರ್ಮ ಶತಕ

09:13 PM Sep 14, 2024 | Team Udayavani |

ಅನಂತಪುರ: ಆರಂಭಕಾರ ಪ್ರಥಮ್‌ ಸಿಂಗ್‌ ಹಾಗೂ ವನ್‌ಡೌನ್‌ ಬ್ಯಾಟರ್‌ ತಿಲಕ್‌ ವರ್ಮ ಬಾರಿಸಿದ ಅಮೋಘ ಶತಕದ ನೆರವಿನಿಂದ ಇಂಡಿಯಾ ಡಿ ಎದುರಿನ ದುಲೀಪ್‌ ಟ್ರೋಫಿ ಪಂದ್ಯದಲ್ಲಿ ಇಂಡಿಯಾ ಎ ಮೇಲುಗೈ ಸಾಧಿಸಿದೆ. ಇಂಡಿಯಾ ಡಿ ತಂಡಕ್ಕೆ 488 ರನ್‌ ಗೆಲುವಿನ ಗುರಿ ನೀಡಲಾಗಿದ್ದು, ಒಂದು ವಿಕೆಟಿಗೆ 62 ರನ್‌ ಮಾಡಿ ಶನಿವಾರದ ಆಟ ಮುಗಿಸಿದೆ.

Advertisement

ಇಂಡಿಯಾ ಎ 3 ವಿಕೆಟಿಗೆ 380 ರನ್‌ ಪೇರಿಸಿ ದ್ವಿತೀಯ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿತು. ಪ್ರಥಮ್‌ ಸಿಂಗ್‌ 122 ರನ್‌ ಹೊಡೆದರೆ (189 ಎಸೆತ, 12 ಬೌಂಡರಿ, 1 ಸಿಕ್ಸರ್‌), ತಿಲಕ್‌ ವರ್ಮ 111 ರನ್‌ ಗಳಿಸಿ ಅಜೇಯರಾಗಿ ಉಳಿದರು (193 ಎಸೆತ, 9 ಬೌಂಡರಿ). ಇಬವರಿಬ್ಬರ 2ನೇ ವಿಕೆಟ್‌ ಜತೆಯಾಟದಲ್ಲಿ 104 ರನ್‌ ಒಟ್ಟುಗೂಡಿತು. ಪ್ರಥಮ್‌ ಸಿಂಗ್‌ ಮತ್ತು ನಾಯಕ ಮಾಯಾಂಕ್‌ ಅಗರ್ವಾಲ್‌ (56) ಮೊದಲ ವಿಕೆಟ್‌ ಜತೆಯಾಟದಲ್ಲಿ 115 ರನ್‌ ಪೇರಿಸಿದ್ದರು. ಶಾಶ್ವತ್‌ ರಾವತ್‌ ಮತ್ತೋರ್ವ ಪ್ರಮುಖ ಸ್ಕೋರರ್‌ (ಔಟಾಗದೆ 64).

ಅಗರ್ವಾಲ್‌ ಬಳಗಕ್ಕೆ 107 ರನ್ನುಗಳ ಮೊದಲ ಇನ್ನಿಂಗ್ಸ್‌ ಲೀಡ್‌ ಲಭಿಸಿತ್ತು. ಇಂಡಿಯಾ ಎ ತಂಡದ 290 ರನ್ನುಗಳಿಗೆ ಉತ್ತರವಾಗಿ ಇಂಡಿಯಾ ಡಿ 183ಕ್ಕೆ ಆಲೌಟ್‌ ಆಗಿತ್ತು. ಡಿ ತಂಡದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಯಶ್‌ ದುಬೆ 15 ಮತ್ತು ರಿಕಿ ಭುಯಿ 44 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಸಂಕ್ಷಿಪ್ತ ಸ್ಕೋರ್‌:

ಭಾರತ ಎ 290, 380/3 ಡಿಕ್ಲೇರ್‌ (ಪ್ರಥಮ್‌ 122, ತಿಲಕ್‌ 111, ಸೌರಭ್‌ 110ಕ್ಕೆ 2), ಭಾರತ ಡಿ 183, 19 ಓವರ್‌ನಲ್ಲಿ 62/1 (ಯಶ್‌ 15, ರಿಕಿ 44, ಖಲೀಲ್‌ 17ಕ್ಕೆ 1).

Advertisement

ಬಿ ಪರ ಈಶ್ವರನ್‌ ಹೋರಾಟ:

ಇನ್ನೊಂದು ಪಂದ್ಯದಲ್ಲಿ, ಇಂಡಿಯಾ ಸಿ ತಂಡದ 525 ರನ್ನುಗಳ ಬೃಹತ್‌ ಮೊತ್ತಕ್ಕೆ ಜವಾಬು ನೀಡುತ್ತಿರುವ ಇಂಡಿಯಾ ಬಿ 7 ವಿಕೆಟಿಗೆ 309 ರನ್‌ ಗಳಿಸಿ 3ನೇ ದಿನದಾಟ ಮುಗಿಸಿದೆ. ನಾಯಕ, ಆರಂಭಕಾರ ಅಭಿಮನ್ಯು ಈಶ್ವರನ್‌ 143 ರನ್‌ ಗಳಿಸಿ ಹೋರಾಟವೊಂದನ್ನು ಜಾರಿಯಲ್ಲಿರಿಸಿದ್ದಾರೆ.

ಅಭಿಮನ್ಯು ಈಶ್ವರನ್‌ ಮತ್ತು ಎನ್‌. ಜಗದೀಶನ್‌ ಮೊದಲ ವಿಕೆಟಿಗೆ 129 ರನ್‌ ಪೇರಿಸಿ ಉತ್ತಮ ಬುನಾದಿಯನ್ನೇನೋ ನಿರ್ಮಿಸಿದರು. ಆದರೆ 70 ರನ್‌ ಮಾಡಿದ ಜಗದೀಶನ್‌ ಔಟಾದ ಬಳಿಕ ತಂಡ ಕುಸಿತಕ್ಕೆ ಸಿಲುಕಿತು. ಮಧ್ಯಮ ವೇಗಿ ಅಂಶುಲ್‌ ಕಾಂಬೋಜ್‌ 66 ರನ್ನಿಗೆ 5 ವಿಕೆಟ್‌ ಉರುಳಿಸಿ ಮಿಂಚಿದರು.

ಸಂಕ್ಷಿಪ್ತ ಸ್ಕೋರ್‌:

ಭಾರತ ಸಿ 124.1 ಓವರ್‌ನಲ್ಲಿ 525/10 (ಕಿಶನ್‌ 111, ಮನವ್‌ 82, ರಾಹುಲ್‌ 73ಕ್ಕೆ 4), ಭಾರತ ಬಿ 101 ಓವರ್‌ನಲ್ಲಿ 309/7 (ಅಭಿಮನ್ಯು 143, ಜಗದೀಶನ್‌ 70, ಅಂಶುಲ್‌ 66ಕ್ಕೆ 5)

 

Advertisement

Udayavani is now on Telegram. Click here to join our channel and stay updated with the latest news.

Next