Advertisement

ದುಲೀಪ್‌ ಟ್ರೋಫಿ ಕ್ಟಾರ್ಟರ್‌ ಫೈನಲ್ಸ್‌ ಉತ್ತರ ವಲಯ 511 ರನ್‌ ಜಯಭೇರಿ

10:40 PM Jul 01, 2023 | Team Udayavani |

ಬೆಂಗಳೂರು: ದುಲೀಪ್‌ ಟ್ರೋಫಿ ಕ್ವಾರ್ಟರ್‌ ಫೈನಲ್‌ ಪಂದ್ಯಗಳೆರಡೂ ಸ್ಪಷ್ಟ ಫ‌ಲಿ ತಾಂಶವನ್ನು ದಾಖಲಿಸಿವೆ. “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ನಡೆದ ಮುಖಾಮುಖೀಯಲ್ಲಿ ಉತ್ತರ ವಲಯ 511 ರನ್ನುಗಳ ಭಾರೀ ಅಂತರದಿಂದ ಈಶಾನ್ಯ ವಲಯವನ್ನು ಮಣಿಸಿತು. ಆಲೂರಿನಲ್ಲಿ ಸಾಗಿದ ಇನ್ನೊಂದು ಪಂದ್ಯದಲ್ಲಿ ಮಧ್ಯ ವಲಯ ತಂಡ ಪೂರ್ವ ವಲಯವನ್ನು 170 ರನ್ನುಗಳಿಂದ ಪರಾಭವಗೊಳಿಸಿತು.

Advertisement

ಸೆಮಿಫೈನಲ್‌ನಲ್ಲಿ ಉತ್ತರ ವಲಯ ಮತ್ತು ದಕ್ಷಿಣ ವಲಯ ಎದುರಾಗಲಿವೆ. ಇನ್ನೊಂದು ಸೆಮಿಫೈನಲ್‌ ಮಧ್ಯ ವಲಯ ಮತ್ತು ಪಶ್ಚಿಮ ವಲಯ ನಡುವೆ ಸಾಗಲಿದೆ. ಈ ಪಂದ್ಯಗಳೆರಡೂ ಜು. 5ರಿಂದ 8ರ ತನಕ ಬೆಂಗಳೂರಿನಲ್ಲೇ ನಡೆಯಲಿವೆ.

666 ರನ್ನುಗಳ ಅಸಾಧ್ಯ ಗುರಿ ಪಡೆದಿದ್ದ ಈಶಾನ್ಯ ವಲಯ ಶನಿವಾರ 154ಕ್ಕೆ ಕುಸಿಯಿತು. 3ಕ್ಕೆ 58 ರನ್‌ ಗಳಿಸಿದಲ್ಲಿಂದ ಅದು ದಿನದಾಟ ಮುಂದುವರಿಸಿತ್ತು. ಆದರೆ ಈಶಾನ್ಯ ವಲಯಕ್ಕೆ ಅನುಭವದ ಕೊರತೆ ಕಾಡಿತು. ಪಾಲೊರ್‌ ತಮಾಂಗ್‌ ಅತ್ಯಧಿಕ 40 ರನ್‌ ಮಾಡಿದರು. ಪುಲ್ಕಿತ್‌ ನಾರಂಗ್‌ 4 ವಿಕೆಟ್‌ ಕಿತ್ತರು.

ಸಂಕ್ಷಿಪ್ತ ಸ್ಕೋರ್‌: ಉತ್ತರ ವಲಯ-8 ವಿಕೆಟಿಗೆ 540 ಡಿಕ್ಲೇರ್‌ ಮತ್ತು 6 ವಿಕೆಟಿಗೆ 259 ಡಿಕ್ಲೇರ್‌. ಈಶಾನ್ಯ ವಲಯ-134 ಮತ್ತು 154. ಪಂದ್ಯಶ್ರೇಷ್ಠ: ನಿಶಾಂತ್‌ ಸಿಂಧು

ಸೌರಭ್‌ಗೆ 8 ವಿಕೆಟ್‌
ಪೂರ್ವ ವಲಯದ ಪತನದಲ್ಲಿ ಎಡಗೈ ಸ್ಪಿನ್ನರ್‌ ಸೌರಭ್‌ ಕುಮಾರ್‌ ಪ್ರಮುಖ ಪಾತ್ರ ನಿರ್ವಹಿಸಿದರು. ಅವರು 33 ರನ್ನಿತ್ತು 8 ವಿಕೆಟ್‌ ಉಡಾಯಿಸಿದರು. ಇದು ಅವರ ಜೀವನಶ್ರೇಷ್ಠ ಬೌಲಿಂಗ್‌ ಆಗಿದೆ.

Advertisement

300 ರನ್‌ ಗುರಿ ಪಡೆದಿದ್ದ ಪೂರ್ವ ವಲಯ 3ನೇ ದಿನದಾಟದ ಅಂತ್ಯಕ್ಕೆ 69ಕ್ಕೆ 6 ವಿಕೆಟ್‌ ಉದುರಿಸಿಕೊಂಡಿತ್ತು. ಬ್ಯಾಟಿಂಗ್‌ ಮುಂದುವ ರಿಸಿ 129ಕ್ಕೆ ಆಲೌಟ್‌ ಆಯಿತು. 24 ರನ್‌ ಮಾಡಿದ ಬೌಲರ್‌ ಆಕಾಶ್‌ದೀಪ್‌ ಅವರದೇ ಹೆಚ್ಚಿನ ಗಳಿಕೆ.

ಸಂಕ್ಷಿಪ್ತ ಸ್ಕೋರ್‌: ಮಧ್ಯ ವಲಯ-182 ಮತ್ತು 239. ಪೂರ್ವ ವಲಯ-122 ಮತ್ತು 129. ಪಂದ್ಯಶ್ರೇಷ್ಠ: ಸೌರಭ್‌ ಕುಮಾರ್‌.

Advertisement

Udayavani is now on Telegram. Click here to join our channel and stay updated with the latest news.

Next