Advertisement

Duleep trophy: ಇಂಡಿಯಾ ಸಿ, ಬಿ ಮಧ್ಯೆ ಪ್ರಶಸ್ತಿಗೆ ಪೈಪೋಟಿ; ಯಾರಿಗೆ ಸಿಗಲಿದೆ ಟ್ರೋಫಿ? 

09:06 AM Sep 22, 2024 | Team Udayavani |

ಅನಂತಪುರ: ದುಲೀಪ್‌ ಟ್ರೊಫಿ (Duleep Trophy) ಅಂತಿಮ ಸುತ್ತಿನ ಪಂದ್ಯಗಳು ಅಂತಿಮ ಘಟ್ಟಕ್ಕೆ ತಲುಪಿದ್ದು ಭಾನುವಾರ ಟ್ರೋಫಿ ಗೆಲ್ಲುವ ತಂಡ ನಿರ್ಧಾರವಾಗಲಿದೆ. ಸದ್ಯದ ಅಂಕಪಟ್ಟಿಯ ಆಧಾರದಲ್ಲಿ ಭಾರತ ಸಿ ತಂಡಕ್ಕೆ ಪ್ರಶಸ್ತಿ ಗೆಲ್ಲುವ ಅವಕಾಶ ಹೆಚ್ಚಿದೆ. ಆದರೆ, ಭಾರತ ಬಿ ಕೂಡ ಟ್ರೋಫಿಯ ರೇಸ್‌ ನಲ್ಲಿದೆ.

Advertisement

ದುಲೀಪ್‌ ಟ್ರೋಫಿ ಅಂಕಪಟ್ಟಿಯಲ್ಲಿ 1 ಪಂದ್ಯ ಗೆದ್ದು 1 ಪಂದ್ಯ ಡ್ರಾ ಮಾಡಿಕೊಂಡಿರುವ ಭಾರತ ಸಿ, 9 (6+3) ಅಂಕದೊಂದಿಗೆ ಅಗ್ರ ಸ್ಥಾನದಲ್ಲಿದೆ. ಇನ್ನು 1 ಪಂದ್ಯ ಗೆದ್ದು, 1 ಪಂದ್ಯ ಡ್ರಾ ಮಾಡಿಕೊಂಡಿರುವ ಭಾರತ ಬಿ, 7 ಅಂಕದೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಕಾರಣ, ಬಿ ತಂಡ ಮೊದಲ ಇನ್ನಿಂಗ್ಸ್‌ ಹಿನ್ನಡೆಯಲ್ಲಿದ್ದು, ಬಳಿಕ ಪಂದ್ಯ ಡ್ರಾ ಮಾಡಿಕೊಂಡಿದೆ. ಹೀಗಾಗಿ ಅದರ ಡ್ರಾ ಪಂದ್ಯಕ್ಕೆ 1 ಅಂಕ ನೀಡಲಾಗಿದೆ.

ಇನ್ನು ಭಾರತ ಎ ಮತ್ತು ಸಿ ನಡುವಿನ ಪಂದ್ಯ ಡ್ರಾಗೊಂಡರೂ ಕೂಡ ಭಾರತ ಸಿ ಆರಂಭಿಕ ಇನಿಂಗ್ಸ್‌ ಮುನ್ನಡೆಯಲ್ಲಿರುವುದರಿಂದ ಎಗೆ 1 ಅಂಕ ಮಾತ್ರ ಲಭಿಸಲಿದೆ. ಇಲ್ಲಿ ಸಿ ಗೆದ್ದರೆ ಪ್ರಶಸ್ತಿ ಅದರ ಪಾಲಾಗಲಿದೆ. ಡಿ ಮತ್ತು ಬಿ ನಡುವಿನ ಪಂದ್ಯದಲ್ಲಿ ಡಿ ಈಗಾಗಲೇ ಹೊರಬಿದ್ದಿದ್ದು, ಬಿ ಪಂದ್ಯ ಗೆದ್ದು, ಸಿ ಪಂದ್ಯ ಡ್ರಾ ಮಾಡಿಕೊಂಡರೆ ಮಾತ್ರ ಪ್ರಶಸ್ತಿ ಬಿ ಪಾಲಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next