Advertisement
ಗೆಲುವಿಗೆ 488 ರನ್ನುಗಳ ಕಠಿನ ಗುರಿ ಪಡೆದಿದ್ದ ಇಂಡಿಯಾ ಡಿ, ರವಿವಾರ ಬ್ಯಾಟಿಂಗ್ ಮುಂದುವರಿಸಿ 301ಕ್ಕೆ ಆಲೌಟ್ ಆಯಿತು. ಇದು ಶ್ರೇಯಸ್ ಅಯ್ಯರ್ ನಾಯಕತ್ವದ ಇಂಡಿಯಾ ಡಿ ತಂಡಕ್ಕೆ ಎದುರಾದ ಸತತ 2ನೇ ಸೋಲು. ಹೀಗಾಗಿ ಅದು ಪ್ರಶಸ್ತಿ ರೇಸ್ನಿಂದ ಹೊರಬಿದ್ದಿದೆ. ಇಂಡಿಯಾ ಎ ಮೊದಲ ಪಂದ್ಯದಲ್ಲಿ ಇಂಡಿಯಾ ಬಿ ವಿರುದ್ಧ 76 ರನ್ನುಗಳ ಸೋಲನುಭವಿಸಿತ್ತು. ಆಗ ಶುಭಮನ್ ಗಿಲ್ ಎ ತಂಡದ ನಾಯಕರಾಗಿದ್ದರು.
Related Articles
ಇನ್ನೊಂದು ಪಂದ್ಯದಲ್ಲಿ ಇಂಡಿಯಾ ಸಿ ವಿರುದ್ಧ ಮೊದಲ ಇನ್ನಿಂಗ್ಸ್ ಮುನ್ನಡೆ ಸಂಪಾದಿಸುವಲ್ಲಿ ಇಂಡಿಯಾ ಬಿ ವಿಫಲವಾಯಿತು. ಸಿ ತಂಡದ 525 ರನ್ನುಗಳ ಬೃಹತ್ ಮೊತ್ತಕ್ಕೆ ಉತ್ತರವಾಗಿ 332ಕ್ಕೆ ಆಲೌಟ್ ಆಯಿತು. ಆದರೆ ಇಂಡಿಯಾ ಬಿ ತಂಡದ ನಾಯಕ ಹಾಗೂ ಆರಂಭಕಾರ ಅಭಿಮನ್ಯು ಈಶ್ವರನ್ ಕೊನೆಯ ವರೆಗೂ ಕ್ರೀಸ್ ಆಕ್ರಮಿಸಿಕೊಂಡು 157 ರನ್ ಮಾಡಿ ಅಜೇಯರಾಗಿ ಉಳಿದರು (286 ಎಸೆತ, 14 ಬೌಂಡರಿ, 1 ಸಿಕ್ಸರ್). ಸಿ ತಂಡದ ಮಧ್ಯಮ ವೇಗಿ ಅಂಶುಲ್ ಕಾಂಬೋಜ್ ಘಾತಕ ದಾಳಿಯನ್ನು ಮುಂದುವರಿಸಿ 69ಕ್ಕೆ 8 ವಿಕೆಟ್ ಉಡಾಯಿಸಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
Advertisement
ಪಂದ್ಯಕ್ಕೆ ಡ್ರಾ ಮುದ್ರೆ ಬೀಳುವ ವೇಳೆ ಇಂಡಿಯಾ ಸಿ ದ್ವಿತೀಯ ಇನ್ನಿಂಗ್ಸ್ನಲ್ಲಿ 4ಕ್ಕೆ 128 ರನ್ ಗಳಿಸಿತ್ತು.3ನೇ ಹಾಗೂ ಕೊನೆಯ ಸುತ್ತಿನ ಸ್ಪರ್ಧೆಗಳು ಸೆ. 19ರಂದು ಅನಂತಪುರದಲ್ಲೇ ಆರಂಭವಾಗಲಿವೆ.