Advertisement

Duleep Trophy 2024; ಮೂರು ತಂಡಗಳಲ್ಲಿ ಹಲವು ಬದಲಾವಣೆ: ಮಯಾಂಕ್‌ ಗೆ ನಾಯಕತ್ವ

05:41 PM Sep 10, 2024 | Team Udayavani |

ಮುಂಬೈ: 2024-25ನೇ ಸಾಲಿನ ದುಲೀಪ್‌ ಟ್ರೋಫಿಯ (Duleep Trophy 2024) ಮೊದಲೆರಡು ಪಂದ್ಯಗಳು ಮುಕ್ತಾಯವಾಗಿದ್ದು, ಮುಂದಿನ ಪಂದ್ಯಗಳಿಗೆ ಸಿದ್ದತೆ ನಡೆಸಲಾಗುತ್ತಿದೆ. ಇದರ ನಡುವೆ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್‌ ಸರಣಿ ಆರಂಭವಾಗಲಿದೆ. ಹೀಗಾಗಿ ದುಲೀಪ್‌ ಟ್ರೋಫಿಯಲ್ಲಿದ್ದ ಕೆಲವು ಆಟಗಾರರನ್ನು ಬಿಡುಗಡೆ ಮಾಡಲಾಗಿದೆ.

Advertisement

ಇಂಡಿಯಾ ಎ ತಂಡದಲ್ಲಿದ್ದ ಶುಭಮನ್ ಗಿಲ್, ಕೆಎಲ್ ರಾಹುಲ್, ಧ್ರುವ್ ಜುರೆಲ್, ಕುಲದೀಪ್ ಯಾದವ್ ಮತ್ತು ಆಕಾಶ್ ದೀಪ್ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ದುಲೀಪ್‌ ಟ್ರೋಫಿಯಿಂದ ಈ ಐವರು ಸೇರಿ ಒಟ್ಟು ಎಂಟು ಮಂದಿಯನ್ನು ಬಿಡಲಾಗಿದೆ.

ಶುಭಮನ್‌ ಗಿಲ್‌ ಅನುಪಸ್ಥಿತಿಯ ಕಾರಣದಿಂದ ಮಯಾಂಕ್‌ ಅಗರ್ವಾಲ್‌ ಅವರನ್ನು ಇಂಡಿಯಾ ಎ ತಂಡದ ನಾಯಕರನ್ನಾಗಿ ಮಾಡಲಾಗಿದೆ. ಭಾರತದ ಪುರುಷರ ಆಯ್ಕೆ ಸಮಿತಿಯು ಇದೇ ವೇಳೆ ಗಿಲ್ ಬದಲಿಗೆ ಪ್ರಥಮ್ ಸಿಂಗ್, ಕೆಎಲ್ ರಾಹುಲ್ ಬದಲಿಗೆ ಅಕ್ಷಯ್ ವಾಡ್ಕರ್, ಧ್ರುವ್ ಜುರೆಲ್ ಬದಲಿಗೆ ಎಸ್‌ ಕೆ ರಶೀದ್, ಕುಲದೀಪ್ ಬದಲಿಗೆ ಶಮ್ಸ್ ಮುಲಾನಿ ಮತ್ತು ಆಕಾಶ್ ದೀಪ್ ಬದಲಿಗೆ ಆಕಿಬ್ ಖಾನ್ ಅವರನ್ನು ಹೆಸರಿಸಿದೆ.

ಇಂಡಿಯಾ ಬಿ ತಂಡದಲ್ಲಿ ಯಶಸ್ವಿ ಜೈಸ್ವಾಲ್, ರಿಷಭ್ ಪಂತ್ ಮತ್ತು ಯಶ್ ದಯಾಲ್ ಅವರನ್ನು ಹೊರಗಿಡಲಾಗಿದೆ. ಬದಲಿಯಾಗಿ ಸುಯಶ್ ಪ್ರಭುದೇಸಾಯಿ, ಹಿಮಾಂಶು ಮಂತ್ರಿ ಮತ್ತು ರಿಂಕು ಸಿಂಗ್ ಅವರನ್ನು ಆಯ್ಕೆ ಮಾಡಿದ್ದಾರೆ. ಭಾರತ ತಂಡದಲ್ಲಿ ಸ್ಥಾನ ಪಡೆದರೂ ಸರ್ಫರಾಜ್‌ ಖಾನ್‌ ಅವರು ದುಲೀಪ್‌ ಟ್ರೋಫಿಯ ಮುಂದಿನ ಪಂದ್ಯ ಆಡಲಿದ್ದಾರೆ.

Advertisement

ಇಂಡಿಯಾ ಸಿ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಇಂಡಿಯಾ ಡಿ ತಂಡದಲ್ಲಿದ್ದ ಅಕ್ಷರ್‌ ಪಟೇಲ್‌ ಅವರು ಟೆಸ್ಟ್‌ ಸರಣಿಗೆ ಆಯ್ಕೆಯಾಗಿದ್ದಾರೆ. ಅಕ್ಷರ್‌ ಬದಲಿಗೆ ನಿಶಾಂತ್‌ ಸಿಂಧು ಆಯ್ಕೆ ಮಾಡಲಾಗಿದೆ. ವೇಗಿ ತುಷಾರ್‌ ದೇಶಪಾಂಡೆ ಗಾಯಗೊಂಡಿದ್ದು, ಅವರ ಬದಲಿಗೆ ಇಂಡಿಯಾ ಎ ತಂಡದಲ್ಲಿದ್ದ ಕನ್ನಡಿಗ ವಿದ್ವತ್‌ ಕಾವೇರಪ್ಪ ಅವರನ್ನು ಇಂಡಿಯಾ ಡಿ ತಂಡಕ್ಕೆ ನೇಮಿಸಲಾಗಿದೆ.

ಎರಡನೇ ಸುತ್ತಿನಲ್ಲಿ ಇಂಡಿಯಾ ಎ ಮತ್ತು ಇಂಡಿಯಾ ಡಿ, ಇಂಡಿಯಾ ಬಿ ಮತ್ತು ಇಂಡಿಯಾ ಸಿ ತಂಡಗಳು ಮುಖಾಮುಖಿಯಾಗಲಿದೆ. ಸೆ.12ರಿಂದ ಅನಂತಪುರದಲ್ಲಿ ಈ ಪಂದ್ಯಗಳು ನಡೆಯಲಿದೆ.

ಇಂಡಿಯಾ ಎ ತಂಡ: ಮಯಾಂಕ್ ಅಗರ್ವಾಲ್ (ನಾ), ರಿಯಾನ್ ಪರಾಗ್, ತಿಲಕ್ ವರ್ಮಾ, ಶಿವಂ ದುಬೆ, ತನುಷ್ ಕೋಟ್ಯಾನ್, ಪ್ರಸಿದ್ಧ್ ಕೃಷ್ಣ, ಖಲೀಲ್ ಅಹ್ಮದ್, ಅವೇಶ್ ಖಾನ್, ಕುಮಾರ್ ಕುಶಾಗ್ರಾ, ಶಾಶ್ವತ್ ರಾವತ್, ಪ್ರಥಮ್ ಸಿಂಗ್, ಅಕ್ಷಯ್ ವಾಡ್ಕರ್, ಎಸ್‌ಕೆ ರಶೀದ್, ಶಮ್ಸ್ ಮುಲಾನಿ, ಆಕಿಬ್ ಖಾನ್.

ಇಂಡಿಯಾ ಬಿ ತಂಡ: ಅಭಿಮನ್ಯು ಈಶ್ವರನ್ (ನಾ), ಸರ್ಫರಾಜ್ ಖಾನ್, ಮುಶೀರ್ ಖಾನ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ನವದೀಪ್ ಸೈನಿ, ಮುಖೇಶ್ ಕುಮಾರ್, ರಾಹುಲ್ ಚಾಹರ್, ಆರ್ ಸಾಯಿ ಕಿಶೋರ್, ಮೋಹಿತ್ ಅವಸ್ತಿ, ಎನ್ ಜಗದೀಸನ್ (ವಿ.ಕೀ), ಸುಯಶ್ ಪ್ರಭುದೇಸಾಯಿ, ರಿಂಕು ಸಿಂಗ್ , ಹಿಮಾಂಶು ಮಂತ್ರಿ (ವಿ.ಕೀ)

ಇಂಡಿಯಾ ಡಿ ತಂಡ: ಶ್ರೇಯಸ್ ಐಯರ್ (ಸಿ), ಅಥರ್ವ ತಾಯ್ಡೆ, ಯಶ್ ದುಬೆ, ದೇವದತ್ ಪಡಿಕ್ಕಲ್, ರಿಕಿ ಭುಯಿ, ಸರನ್ಶ್ ಜೈನ್, ಅರ್ಷದೀಪ್ ಸಿಂಗ್, ಆದಿತ್ಯ ಠಾಕರೆ, ಹರ್ಷಿತ್ ರಾಣಾ, ಆಕಾಶ್ ಸೇನ್‌ಗುಪ್ತ, ಕೆಎಸ್ ಭರತ್ (ವಿ.ಕೀ), ಸೌರಭ್ ಕುಮಾರ್, ಸಂಜು ಸ್ಯಾಮ್ಸನ್ (ವಿ.ಕೀ), ನಿಶಾಂತ್ ಸಿಂಧು, ವಿದ್ವತ್ ಕಾವೇರಪ್ಪ

Advertisement

Udayavani is now on Telegram. Click here to join our channel and stay updated with the latest news.

Next