Advertisement

ವಾಸ್ತುದೋಷದ ಕಾರಣ: ವಾಸ ಸ್ಥಳ ಬದಲಿಸಿದ ಸಿಎಂ!

06:00 AM Dec 09, 2018 | Team Udayavani |

ಬೆಳಗಾವಿ: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಜ್ಯೋತಿಷ್ಯ, ವಾಸ್ತು ಲೆಕ್ಕಾಚಾರ ಬೆಳಗಾವಿಯ ಚಳಿಗಾಲ ಅಧಿವೇಶನಕ್ಕೂ ತಟ್ಟಿದೆ. ಸಿಎಂ ವಾಸ್ತವ್ಯಕ್ಕೆ ನಿಗದಿ ಮಾಡಿದ್ದ ಪ್ರವಾಸಿ ಮಂದಿರದ ವಾಸ್ತು ಸರಿ ಇಲ್ಲ ಎಂದು ವಿಟಿಯು ಗೆಸ್ಟ್‌ಹೌಸ್‌ಗೆ ಸ್ಥಳಾಂತರಗೊಂಡಿದೆ!

Advertisement

ಬೆಳಗಾವಿಯಲ್ಲಿ ಸಾಮಾನ್ಯವಾಗಿ ಈವರೆಗೆ ನಡೆದ ಅಧಿವೇಶನದ ವೇಳೆ ಎಲ್ಲ ಮುಖ್ಯಮಂತ್ರಿಗಳು ಪ್ರವಾಸಿ ಮಂದಿರದಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಆದರೆ ಈ ಬಾರಿ ದೋಸ್ತಿ ಸರ್ಕಾರದ ಸಿಎಂ ಕುಮಾರಸ್ವಾಮಿ ಅವರು ವಾಸ್ತುದೋಷ ಹಿನ್ನೆಲೆಯಲ್ಲಿ ಪ್ರವಾಸಿ ಮಂದಿರದಲ್ಲಿರಲು ನಿರಾಕರಿಸಿದ್ದು, ವಿಟಿಯು ಗೆಸ್ಟ್‌ ಹೌಸ್‌ನಲ್ಲಿ ಉಳಿದುಕೊಳ್ಳಲು ನಿರ್ಧರಿಸಿದ್ದಾರೆ.

ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಕುಮಾರಸ್ವಾಮಿ ದೇವಸ್ಥಾನಗಳ ಮೊರೆ ಹೋಗುತ್ತಿದ್ದಾರೆ. ಸರ್ಕಾರದ ಉಳಿವಿಗಾಗಿ ವಿವಿಧ ಹೋಮ-ಹವನ ಮಾಡಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹಾಗೂ ಸಚಿವ ಎಚ್‌.ಡಿ. ರೇವಣ್ಣ ಅವರು ಕೂಡ ಜ್ಯೋತಿಷ್ಯ ಹಾಗೂ ವಾಸ್ತು ಪ್ರಕಾರವೇ ಹಲವು ಯೋಜನೆ, ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಈಗ ಅಧಿವೇಶನದಲ್ಲಿ ಪಾಲ್ಗೊಳ್ಳಲು ಬೆಳಗಾವಿಗೆ ಆಗಮಿಸಲಿರುವ ಕುಮಾರಸ್ವಾಮಿ, ಅಲ್ಲೂ ವಾಸ್ತು ದೋಷವಿದೆ ಎಂಬ ಕಾರಣಕ್ಕಾಗಿ  ಪ್ರವಾಸಿ ಮಂದಿರದಲ್ಲಿರಲು ನಿರಾಕರಿಸಿದ್ದಾರೆ.

ಬೆಳಗಾವಿ ನಗರದ ಹೊರವಲಯದಲ್ಲಿರುವ ಈ ಗೆಸ್ಟ್‌ಹೌಸ್‌, ಮುಖ್ಯಮಂತ್ರಿಗಳು ಸಂಚರಿಸುವಾಗ ಭಾರೀ ಸಂಚಾರ ದಟ್ಟಣೆ ಸೃಷ್ಟಿಸುವ ಸಾಧ್ಯತೆ ಇದೆ. ಟ್ರಾಫಿಕ್‌ ಪೊಲೀಸರಿಗೆ ಟ್ರಾಫಿಕ್‌ ನಿಯಂತ್ರಣ ಸವಾಲಾಗಿ ಪರಿಣಮಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next