Advertisement
ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿ ಮುಂಗಾರು ಕಳೆದೆರಡು ದಿನಗಳಿಂದ ಕೊಂಚ ಬಿರುಸು ಪಡೆದುಕೊಂಡಿದೆ. ಕೃಷಿ ಚಟುವಟಿಕೆಗಳು ಗರಿಗೆದರಿವೆ. ಕಾರ್ಕಳ ತಾಲೂಕಿನಲ್ಲಿ 5,750 ಹೆಕ್ಟೇರ್, ಹೆಬ್ರಿ ತಾಲೂಕಿನಲ್ಲಿ 1,600 ಹೆಕ್ಟೇರ್‌ನಲ್ಲಿ ಭತ್ತ ಬಿತ್ತನೆ ಮಾಡಲು ಉದ್ದೇಶಿಸಿದ್ದು, ಇದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ತಾಲೂಕಿನ ಶಿವಪುರ, ಅಂಡಾರು, ಮುನಿಯಾಲು ಬೈಲು, ಚಾರ, ಸಾಣೂರು ಸೇರಿದಂತೆ ತಾಲೂಕಿನ ವಿವಿಧ ಭಾಗಗಳಲ್ಲಿ ನಾಟಿ ಕಾರ್ಯ ಆರಂಭವಾಗಿದೆ. ಕೆಲವು ಬೆಟ್ಟು ಗದ್ದೆಗಳ ಪೈಕಿ ಮಳೆ ತಡವಾಗಿ ಆರಂಭವಾದ ಕಾರಣ ಹೊಲ ಹದಗೊಳಿಸುವ ಕೆಲಸ, ಗದ್ದೆ ಉಳುಮೆ ಕಾರ್ಯಗಳು ಆರಂಭವಾಗಿವೆ. ಹೆಬ್ರಿ ನಾಡಾ³ಲು, ಕಾರ್ಕಳ ತಾಲೂಕಿನ ಬೈಲೂರು, ನೀರೆ,ಸೇರಿದಂತೆ ಹರಿಖಂಡಿಗೆ, ದೊಂಡೇರಂಗಡಿಯ ಕೆಲವು ಭಾಗಗಳಲ್ಲಿ ಉಳುಮೆಯನ್ನು ರೈತರು ಆರಂಭಿಸಿದ್ದು ನೇರ ಬಿತ್ತನೆಗೆ ಹೆಚ್ಚು ಒತ್ತು ನೀಡಲು ನಿರ್ಧರಿಸಿದ್ದಾರೆ.
Related Articles
ಮುಂಗಾರು ಮಳೆ ಈ ಬಾರಿ ಸಾಕಷ್ಟು ವಿಳಂಬವಾಗಿದೆ. ಸಾಂಪ್ರದಾಯಿಕ ಬೇಸಾಯಕ್ಕೆ ಅಡ್ಡಿಯಾಗಿದೆ. ಮುಂಗಾರು
ಈಗ ಪ್ರಾರಂಭಗೊಂಡಿದೆ. ಅನಿಶ್ಚಿತತೆಯೂ ಇದೆ. ಮಳೆಯ ಸರಾಸರಿ ನೋಡಿಕೊಂಡು ಕೃಷಿ ಚಟುವಟಿಕೆ ಆರಂಭಿಸಬೇಕಿದೆ.
-ಚಂದ್ರಯ್ಯ ಬಜಗೋಳಿ , ಕೃಷಿಕ
Advertisement