Advertisement

ಪಾಕಿಸ್ಥಾನದ ಮೇಲೆ ನಂಬಿಕೆ ಕೊರತೆ: ಪನೆಟ್ಟಾ

12:34 AM Oct 03, 2020 | mahesh |

ಹೊಸದಿಲ್ಲಿ: ಅಲ್‌ಕಾಯಿದ ಉಗ್ರ ಸಂಘಟನೆ ಸಂಸ್ಥಾಪಕ ಒಸಾಮ ಬಿನ್‌ ಲಾಡೆನ್‌ ಪಾಕಿಸ್ಥಾನದಲ್ಲಿ ಇದ್ದ ಎಂಬ ಅಂಶವನ್ನು ನಂಬಿಕೆ ಕೊರತೆಯಿಂದ ಆ ದೇಶ ಸರಕಾರಕ್ಕೆ ತಿಳಿಸಲೇ ಇಲ್ಲ. ಹೀಗೆಂದು ಅಮೆರಿಕದ ಗುಪ್ತಚರ ಸಂಸ್ಥೆ ಸೆಂಟ್ರಲ್‌ ಇಂಟೆಲಿಜೆನ್ಸ್‌ ಏಜೆನ್ಸಿ (ಸಿಐಎ) ನಿವೃತ್ತ ನಿರ್ದೇಶಕ ಲಿಯೋನ್‌ ಪನೆಟ್ಟಾ ತಿಳಿಸಿದ್ದಾರೆ.

Advertisement

“ವಿಯಾನ್‌ ಟಿವಿ’ಗೆ ನೀಡಿದ ಸಂದರ್ಶ ನದಲ್ಲಿ ಮಾತನಾಡಿದ ಅವರು, “ಪಾಕಿಸ್ಥಾನದ ಅಬೊಟಾಬಾದ್‌ನಲ್ಲಿ ಒಸಾಮ ಇದ್ದ ಬಗ್ಗೆ ಮಾಹಿತಿ ದೃಢವಾಗಿತ್ತು. ಆದರೂ ಅದನ್ನು ನಂಬಲು ಕಷ್ಟವಾಗಿತ್ತು. ಏಕೆಂದರೆ ಅದು ಪಾಕಿಸ್ಥಾನದ ಗುಪ್ತಚರ ಚಟುವಟಿಕೆಗಳ ಕೇಂದ್ರವೂ ಆಗಿತ್ತು’ ಎಂದಿದ್ದಾರೆ. ಪಾಕಿಸ್ಥಾನ ಸರಕಾರಕ್ಕೆ ಮಾಹಿತಿ ನೀಡುವ ಬಗ್ಗೆ ಒಂದು ಹಂತದಲ್ಲಿ ನಿರ್ಧಾರ ಮಾಡಿದರೂ, ಆಗಿನ ಅಧ್ಯಕ್ಷರಾಗಿದ್ದ ಬರಾಕ್‌ ಒಬಾಮ ಅಲ್ಲಿನ ಸರಕಾರಕ್ಕೆ ಮಾಹಿತಿ ನೀಡದೆ, ನೌಕಾಪಡೆಯ ವಿಶೇಷ ಕಾರ್ಯಾಚರಣೆ ಪಡೆ ನೇರವಾಗಿ ದಾಳಿ ಮಾಡಿ ಆತನನ್ನು ಮುಗಿಸುವ ನಿರ್ಧಾರಕ್ಕೆ ಬರಲಾಯಿತು ಎಂದರು.

ಮೂವರ ವಿರುದ್ಧ ಆರೋಪಪಟ್ಟಿ: ಹೊಸದಿಲ್ಲಿ: ಪಾಕಿಸ್ಥಾನ ಮೂಲದ ಲಷ್ಕರ್‌-ಎ-ತೊಯ್ಬಾ ಉಗ್ರ ಸಂಘಟನೆಯ ಸೂಚನೆ ಮೇರೆಗೆ ಭಾರತದಲ್ಲಿ ವಿಧ್ವಂಸಕ ಕೃತ್ಯವೆಸಗಲೆಂದು ಪಾಕ್‌ನಲ್ಲಿ ತರಬೇತಿ ಪಡೆದಿದ್ದ ಮೂವರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಶುಕ್ರವಾರ ಜಮ್ಮುವಿನ ಎನ್‌ಐಎ ವಿಶೇಷ ಕೋರ್ಟ್‌ನಲ್ಲಿ ಆರೋಪಪಟ್ಟಿ ಸಲ್ಲಿಸಿದೆ. ಆರೋಪಿತರನ್ನು ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂ ಜಿಲ್ಲೆಯವರಾದ ಮುನೀಬ್‌ ಹಮೀದ್‌ ಭಟ್‌, ಜುನೈದ್‌ ಅಹ್ಮದ್‌ ಮಟ್ಟೂ ಮತ್ತು ಉಮರ್‌ ರಶೀದ್‌ ವಾನಿ ಎಂದು ಗುರುತಿಸಲಾಗಿದೆ. ಮಟ್ಟೂ ಮತ್ತು ವಾನಿ ಈ ಹಿಂದೆ ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಹತರಾಗಿದ್ದಾರೆ. 5 ರಿಂದ 15 ದಿನಗಳ ಕಾಲ ಪಾಕಿಸ್ಥಾನದಲ್ಲಿ ಇವರಿಗೆ ಉಗ್ರ ತರಬೇತಿ ನೀಡಲಾಗಿತ್ತು. ಶಸ್ತ್ರಾಸ್ತ್ರಗಳು, ಸ್ಫೋಟಕಗಳ ಬಳಕೆ, ರಹಸ್ಯ ಸಾಮಾಜಿಕ ಮಾಧ್ಯಮ ಚಾಟ್‌ ಪ್ಲಾಟ್‌ಫಾರಂಗಳ ಬಳಕೆ ಬಗ್ಗೆಯೂ ತರಬೇತಿ ನೀಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next