ರಾಮನಗರ: ಹಲವಾರು ಅಭ್ಯರ್ಥಿಗಳಿಗೆ ಆರ್ಥಿಕ ಸಹಾಯ ಮಾಡಲಾಗಿಲ್ಲ. ನನಗೆ ಅತ್ಯಂತ ನೋವಾಗಿದೆ. ಆರ್ಥಿಕ ನೆರವು ನೀಡುವುದರಲ್ಲಿ ವಿಫಲಗೊಂಡಿರುವುದು ನನಗೆ ಆಘಾತವಾಗಿದೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಕೇತಗಾನಹಳ್ಳಿ ಮತಗಟ್ಟೆ ಬಳಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಸೇರಿದಂತೆ ಹಲವು ಕಡೆ ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಿದ್ದರು. ಆದರೆ ಹಣದ ಕೊರತೆಯಿಂದಾಗಿ ನಮಗೆ ಹಿನ್ನಡೆಯಾಗಿದೆ. ಕನಿಷ್ಠ 25ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಹಣದ ಕೊರತೆಯಾಗಿದೆ. ಗೆಲ್ಲುವ ಕ್ಷೇತ್ರಗಳಲ್ಲಿ ಹಣದ ಕೊರತೆಯಿಂದ ಪೆಟ್ಟು ತಿಂದಿದ್ದೇನೆ ಎಂದರು.
ಕಾರ್ಯಕರ್ತರು ತಪ್ಪು ತಿಳಿಯಬಾರದು. ನನ್ನಿಂದ ಅಭ್ಯರ್ಥಿಗಳಿಗೆ ಆರ್ಥಿಕ ಸಹಾಯ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಆಯಾ ಕ್ಷೇತ್ರದ ಕೆಲವು ಬೂತ್ ಗಳಿಗೆ ಹಣ ನೀಡಲಾಗಿಲ್ಲ. ಕೊನೆಯ ಹಂತದಲ್ಲಿ ಅಭ್ಯರ್ಥಿಗಳ ನಿರೀಕ್ಷೆ ಮುಟ್ಟಲಾಗಿಲ್ಲ. ನಮ್ಮ ಅಭ್ಯರ್ಥಿಗಳ ಮೇಲೆ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಬೇಡಿ. ಆದರೂ ಕಾಂಗ್ರೆಸ್ ಬಿಜೆಪಿಗಿಂತ ಮುಂದೆ ಇರುತ್ತೇವೆ. ಆದರೂ ಸಹ ಜೆಡಿಎಸ್ ಬಹುಮತ ಬರಲಿದೆ ಎಂದರು.
ಇದನ್ನೂ ಓದಿ:ಫ್ಯಾಮಿಲಿ ಫೋಟೋಶೂಟ್ ಶೇರ್ ಮಾಡಿದ ರಿಷಭ್ ಶೆಟ್ಟಿ
Related Articles
ಅತಂತ್ರ ಫಲಿತಾಂಶ ವಿಚಾರ – ಮುಂದೆ ಅದರ ಬಗ್ಗೆ ಮಾತನಾಡುತ್ತೇನೆ. ಬಿಜೆಪಿ – ಕಾಂಗ್ರೆಸ್ ಹಣದಿಂದ ಚುನಾವಣೆ ನಡೆಸಿವೆ. ರಾಮನಗರ ಕ್ಷೇತ್ರದಲ್ಲಿ ಯಾವುದೇ ಸಮಸ್ಯೆ ಇಲ್ಲ. ಚನ್ನಪಟ್ಟಣ ರಾಮನಗರ ಕ್ಷೇತ್ರದಲ್ಲಿ ಜೆಡಿಎಸ್ ನಾವು ಜಯ ಸಾಧಿಸಲಿದ್ದೇವೆ ಎಂದರು.