Advertisement
ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿವಿಯ 10ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಕೃಷಿ ಸಂಸ್ಕೃತಿಯ ತಾಯಿ ಇದ್ದಂತೆ. ಬೇರೆ ಯಾವ ಭೂ ಭಾಗದಲ್ಲೂ ಇಲ್ಲದಂಥ ಪೂರಕ ವಾತಾವರಣ ನಮ್ಮ ದೇಶದಲ್ಲಿದೆ. ಆದರೆ, ಹೇಗೆ ಕೃಷಿ ಮಾಡಬೇಕು ಎಂಬ ಪರಿಕಲ್ಪನೆ ಇಲ್ಲದೇ ಇಂದು ದೇಶದ ಕೃಷಿ ವಲಯ ಸೊರಗುತ್ತಿದೆ. ಅಧಿಕ ಇಳುವರಿ ಬರಲಿ ಎಂಬ ಕಾರಣಕ್ಕೆ ಮನಸೋ ಇಚ್ಛೆ ರಾಸಾಯನಿಕ ಸಿಂಪಡಿಸ ಲಾಗುತ್ತಿದೆ. ಇದರಿಂದ ಭೂಮಿ ಸತ್ವ ಕಳೆದುಕೊಳ್ಳುತ್ತಿದೆ. ನೀರಾವರಿ ಯೋಜನೆಗಳ ಅನುಷ್ಠಾನವೇ ಸರಿಯಾಗಿ ಆಗುತ್ತಿಲ್ಲ ಎಂದು ವಿಷಾದಿಸಿದರು.
ಕೃಷಿಗೆ ಸಿಗಬೇಕಾದ ಮಹತ್ವ ಸಿಗುತ್ತಿಲ್ಲ. ಎಲ್ಲ ವಿಶ್ವವಿದ್ಯಾಲಯಗಳು ರಾಜ್ಯ ಸರ್ಕಾರದ ಅಧೀನದಲ್ಲೇ ಕೆಲಸ ಮಾಡುತ್ತಿವೆ. ಹೀಗಾಗಿ ಅವುಗಳಿಗೆ ನಿರೀಕ್ಷಿತ ಉತ್ತೇಜನ ಸಿಗುತ್ತಿಲ್ಲ. ಹೆಚ್ಚುತ್ತಿರುವ ಜನಸಂಖ್ಯೆ ಆಧರಿಸಿ ಆಹಾರೋತ್ಪಾದನೆ ಮಾಡುವಲ್ಲಿ ಕೃಷಿ ವಿವಿಗಳ ಪಾತ್ರ ಗಣನೀಯವಾದದ್ದು, ಅದು ಇನ್ನೂ ಉತ್ತಮ ರೀತಿಯಲ್ಲಿ ಆಗಬೇಕು ಎಂದರು.
Related Articles
Advertisement
ಯುವಕರು ಕೃಷಿ ಕ್ಷೇತ್ರದತ್ತ ಚಿತ್ತ ಹರಿಸಬೇಕು. ಯಾರಿಗೆ ಕೃಷಿ ಭೂಮಿ ಇರುತ್ತದೆಯೋ ಅವರು ಕಡ್ಡಾಯವಾಗಿ ಕೃಷಿಯನ್ನೇ ವೃತ್ತಿಯನ್ನಾಗಿ ಸ್ವೀಕರಿಸಬೇಕು. ಅಂದಾಗ ಈ ಕ್ಷೇತ್ರ ಬಲಗೊಳ್ಳಲಿದೆ. ಪ್ರಯೋಗಾತ್ಮಕ ಪದ್ಧತಿಯಿಂದ ಉತ್ತಮ ಆದಾಯ ಗಳಿಸುವಂಥ ಕ್ಷೇತ್ರವನ್ನಾಗಿ ಪರಿವರ್ತಿಸುವ ಶಕ್ತಿ ವಿದ್ಯಾವಂತರಿಗಿದೆ.ಸ್ವಾಮಿ ನಿರ್ಭಯಾನಂದಜಿ, ಸ್ವಾಮಿ ವಿವೇಕಾನಂದ ಆಶ್ರಮ, ವಿಜಯಪುರ. ಗಮನ ಸೆಳೆದ ಡ್ರೋಣ್
ಕೃಷಿ ವಿವಿಯ 10ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಪ್ರದರ್ಶನಕ್ಕಿಟ್ಟಿದ್ದ ಡ್ರೋನ್ ಗಮನ ಸೆಳೆಯಿತು. ಯಂತ್ರೋಪಕರಣ ಮತ್ತು ತಾಂತ್ರಿಕ ವಿಭಾಗದ ಆರು ವಿದ್ಯಾರ್ಥಿಗಳ ತಂಡ ಡ್ರೋನ್ ಮೂಲಕ ಕ್ರಿಮಿನಾಶಕ ಸಿಂಪಡಿಸುವ ತಂತ್ರಜ್ಞಾನ ರೂಪಿಸಲಾಗಿದೆ. ಇದರಿಂದ ಕುಳಿತಲ್ಲಿಯೇ ಬೆಳೆಗೆ ಕ್ರಿಮಿನಾಶಕ ಸಿಂಪರಣೆ ಮಾಡಬಹುದು. ರಾಷ್ಟ್ರೀಯ ಕೃಷಿ ಯೋಜನೆ ಅನುದಾನದಡಿ 18 ಲಕ್ಷ ರೂ. ವೆಚ್ಚದಲ್ಲಿ ಈ ಯಂತ್ರ ರೂಪಿಸಲಾಗಿದೆ. ಆರಂಭಿಕ ಹಂತದಲ್ಲಿ ಒಂದು ಲೀಟರ್ ಸಾಮರ್ಥ್ಯ ಹೊಂದಿದ್ದು, ಹಂತ ಹಂತವಾಗಿ ಸಾಮರ್ಥ್ಯ ಹೆಚ್ಚಿಸುವ ಯೋಜನೆ ಇದೆ. ಬ್ಯಾಟರಿ ಚಾಲಿತ ಯಂತ್ರ ಇದಾಗಿದ್ದು, ಎರಡೂವರೆ ಎಕರೆಗೆ ಕ್ರಿಮಿನಾಶಕ ಸಿಂಪರಣೆ ಮಾಡಬಹುದು ಎಂದು ವಿದ್ಯಾರ್ಥಿಗಳು ವಿವರಿಸಿದರು.