Advertisement

ದುಬಾೖ: ಕೋವಿಡ್-19 ಪರಿಣಾಮದಿಂದ 2 ತಿಂಗಳಲ್ಲಿ ಜೀರೋ ಕ್ರೈಮ್‌

10:21 PM Apr 06, 2020 | Team Udayavani |

ದುಬಾೖ: ಕೋವಿಡ್-19 ಬಂದ ಬಳಿಕ ವಾಹನಗಳು ಓಡಾಡುವುದು ನಿಂತಿತು. ಪರಿಣಾಮವಾಗಿ ವಾಯು ಮಾಲಿನ್ಯವೂ ಕಡಿಮೆಯಾಯಿತು. ಇಂಧನ ಬಳಕೆ ಕಡಿಮೆಯಾಗಿ ದರಗಳೂ ಕಡಿಮೆಯಾಗುವ ಸಾಧ್ಯತೆ ಇದೆ. ಇದೀಗ ಜನ ಸಂಚಾರ ಸ್ತಬ್ಧವಾದ ಪರಿಣಾಮ ಚಟುವಟಿಕೆಗಳು ಇಲ್ಲ. ಒಟ್ಟಿನಲ್ಲಿ ದುಬಾೖಯಲ್ಲಿ 2 ತಿಂಗಳಿನಿಂದ ಒಂದೇ ಒಂದು ಅಪರಾಧ ಪ್ರಕರಣ ದಾಖಲಾಗಿಲ್ಲವಂತೆ. ಈ ಬಗ್ಗೆ ಖಲೀಜ್‌ ಟೈಮ್ಸ್‌ ವರದಿ ಮಾಡಿದೆ.

Advertisement

ಪೊಲೀಸ್‌ ಇಲಾಖೆಯ ಮಾಹಿತಿ ಪ್ರಕಾರ, ಕೊಲೆಗಳು ಸೇರಿದಂತೆ ಯಾವುದೇ ಕಳ್ಳತನಗಳು, ದರೋಡೆಗಳು ಅಥವಾ ಹಿಂಸಾಚಾರಗಳು ನಡೆದಿಲ್ಲ. ಕೋವಿಡ್‌ 19ರ ಬಿಕ್ಕಟ್ಟನ್ನು ಎದುರಿಸುವಾಗ ಜನರು ತಮ್ಮ ಸುರಕ್ಷತೆ ಮತ್ತು ಅವರ ಪ್ರೀತಿಪಾತ್ರರು ಮತ್ತು ಕುಟುಂಬದವರಿಗೆ ಆದ್ಯತೆ ನೀಡುತ್ತಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಅಭಿಪ್ರಾಯಪಟ್ಟಿದ್ದಾರೆ.

ಕಿಕ್ಕಿರಿದ ಪ್ರದೇಶಗಳಲ್ಲಿ ಹಣವನ್ನು ಕದಿಯುವುದು ಅಥವಾ ಬ್ಯಾಂಕ್‌ ಅಥವಾ ಅಂಗಡಿಯನ್ನು ದೋಚು ವಂತಹ ಅನೇಕ ಅಪರಾಧಗಳು ಅಥವಾ ದರೋಡೆಗಳು ಸಾಮಾನ್ಯವಾಗಿ ನಡೆಯುತ್ತವೆ. ಈ ಎರಡು ತಿಂಗಳಲ್ಲಿ ಅಂಥ ಪ್ರಕರಣಗಳು ನಡೆದಿಲ್ಲ.
ಸಾಮಾಜಿಕ ಅಂತರವೂ ವಂಚಕರಿಗೆ ಸಮಸ್ಯೆಯಾಗಿದೆ. ಮನೆಗಳು ಖಾಲಿಯಾಗಿರುವಾಗ ಕಳವು ಸಂಬಂಧಿ ಅಪರಾಧಗಳು ನಡೆಯುವುದು ಸಾಮಾನ್ಯ. ಆದರೆ ಈಗ ಜನರು ತಮ್ಮ ಮನೆಗಳಲ್ಲಿ ಉಳಿದುಕೊಂಡಿರುವುದರಿಂದ ಕಳ್ಳರೂ ಲಾಕ್‌ಡೌನ್‌ ಬಿಸಿ ಅನುಭವಿಸುವಂತಾಗಿದೆ.

99% ಅಕ್ರಮ ಡ್ರಗ್‌ ಮಾರುಕಟ್ಟೆ ಮತ್ತು ಕಳ್ಳಸಾಗಣೆ ಅಪರಾಧಗಳು ಕಣ್ಮರೆಯಾಗಿವೆ. ಪ್ರಸ್ತುತ ಪರಿಸ್ಥಿತಿಯಲ್ಲಿ ನಿರ್ಬಂಧಿತ ಚಲನೆ ಮತ್ತು ಕಣ್ಗಾವಲು ಅಪರಾಧಿಗಳಿಗೆ ಇಂತಹ ಕೃತ್ಯಗಳಲ್ಲಿ ತೊಡಗಿಸಿಕೊಳ್ಳದಂತೆ ಅಡ್ಡಿ ಯಾಗಿದೆ. ಈ ಕೊರೊನಾ ಬಿಕ್ಕಟ್ಟನ್ನು ಎದುರಿಸಲು ಸರಕಾರ ಕೈಗೊಂಡ ಕಾರ್ಯಕ್ರಮಗಳಿಗೆ ಯಾರಾದರೂ ಅಡ್ಡಿಪಡಿಸಿದರೆ ಅವರ ವಿರುದ್ಧ ಕಾನೂನಿನ ಅನ್ವಯ ಕ್ರಮಕೈಗೊಳ್ಳಲಾಗುತ್ತಿದೆ.

ನಮ್ಮಲ್ಲೂ ಅಷ್ಟೇ
ದ.ಕ. ಜಿಲ್ಲೆ, ಉಡುಪಿಯಲ್ಲೂ ಅಪರಾಧ ಪ್ರಕರಣ ಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಹಿಂದೆ ಪೊಲೀ ಸರನ್ನು ಬೀಟ್‌ ಮತ್ತಿತರ ಉದ್ದೇಶಕ್ಕಾಗಿ ಬಳ ಸಲಾ ಗುತ್ತಿತ್ತು. ಪ್ರಸ್ತುತ ಜನರು ಮನೆಯಲ್ಲೇ ಇರು ವುದರಿಂದ ಬೀಟ್‌ ಸಮಸ್ಯೆ ಇಲ್ಲ. ಅದರೊಂದಿಗೆ ಎಲ್ಲ ಚೆಕ್‌ ಪೋಸ್ಟ್‌ಗಳಲ್ಲೂ ಬಂದೋಬಸ್ತ್ ಬಿಗಿಗೊಳಿಸಿರುವುದರಿಂದ ಪೊಲೀಸರ ಕಣ್ಗಾವಲು ಹೆಚ್ಚಿದೆ. ಇದೂ ಅಪರಾಧ ಸಂಖ್ಯೆ ಇಳಿಮುಖವಾಗಲು ಕಾರಣ ಎನ್ನಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next